ಬಿಜೆಪಿ ಶಿವಮೊಗ್ಗ ನಗರ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆ

ಶಿವಮೊಗ್ಗ

ಬಿಜೆಪಿ ಶಿವಮೊಗ್ಗ ನಗರ ಮಹಿಳಾ ಮೋರ್ಚಾದ ಇಂದಿನ ಕಾರ್ಯಕಾರಿಣಿಯ ಸಭೆಯಲ್ಲಿ ನೆಚ್ಚಿನ ಅಪ್ರತಿಮ ದೇಶಭಕ್ತ ವಿಶ್ವ ನಾಯಕ ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿಜಿ ರವರ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ವಿಶ್ವಾಸ ಅಭಿವೃದ್ಧಿ ಮತ್ತು ಜನಕಲ್ಯಾಣದ ಸಂಭ್ರಮಾಚರಣೆಯ ನಿಟ್ಟಿನಲ್ಲಿ ಇಂದು ಬಿಜೆಪಿ ನಗರ ಕಚೇರಿಯಲ್ಲಿ ಶಿವಮೊಗ್ಗದ ಶಾಸಕರಾದ ಎಸ್ಎನ್ ಚನ್ನಬಸಪ್ಪನವರು ಸಂಘಟನಾತ್ಮಕ ವಿಷಯವನ್ನು ಪ್ರಸ್ತಾಪಿಸಿದರು , ಮಹಿಳಾ ಸಬಲೀಕರಣ ವಿಷಯವನ್ನು ಪ್ರಸ್ತಾಪಿಸಿ, ಮಾನ್ಯ ನರೇಂದ್ರ ಮೋದಿ ರವರ ಸರ್ಕಾರದ ಸಾಧನೆಗಳನ್ನು ಕುರಿತು ವಿಸ್ತಾರವಾಗಿ ಚರ್ಚಿಸಿ, ಶಿವಮೊಗ್ಗ ನಗರದ ಪ್ರತಿಯೊಂದು ಮಹಿಳೆಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಯೋಜನೆಗಳು ಪ್ರತಿ ಮನೆಯಲ್ಲೂ ಕುಟುಂಬದಲ್ಲಿ ವಿಷಯ ಚರ್ಚಿಸಬೇಕು, ಮನೆ ಮನೆ ಮಾತಾಗಿರಬೇಕು ಎಂದು ಪ್ರಸ್ತಾಪಿಸಿದರು.

ಹಾಗೂ ಶಿವಮೊಗ್ಗ ನಗರದಲ್ಲಿ ಈಗಾಗಲೇ ಎಸ್ಐ.ಆರ್ ಪ್ರಕ್ರಿಯೆ ನಡೆಯುತ್ತಿದೆ ನೀವು ಎಲ್ಲಾ ಇದಕ್ಕೆ ಸಹಕರಿಸಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಧುರ ಶಿವಾನಂದ, ಶಿವಮೊಗ್ಗ ನಗರ ಮಹಿಳಾ ಮೋರ್ಚಾ ಅಧ್ಯಕ್ಷರಾದ ರಶ್ಮಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಲತಾ ಭೂಪಾಳಂ, ಶಾಂತ ಸುರೇಂದ್ರ, ಸುನಿತಾ ಅಣ್ಣಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಸುರೇಖಾ ಮುರಳಿಧರ್, ಬಿಜೆಪಿ ನಗರ ಅಧ್ಯಕ್ಷರಾದ ಮೋಹನ್ ರೆಡ್ಡಿ, ಎಸ್ ಜ್ಞಾನೇಶ್ವರ, ಎನ್ ಜೆ ನಾಗರಾಜ್, ದೀನದಯಾಳು,ಮಂಜುನಾಥ ನವುಲೆ ಈ ಸಭೆಯಲ್ಲಿ ಉಪಸ್ಥಿತರಿದ್ದರು.

Author