ಶಿವಮೊಗ್ಗ | ಮಹಾನಗರ ಪಾಲಿಕೆ ಆಯುಕ್ತರಾದ ಕೆ. ಮಯಣ್ಣ ಗೌಡರ ಜೊತೆ ನಾಳೆ ಮುಖಾಮುಖಿ

ಶಿವಮೊಗ್ಗ

ಶಿವಮೊಗ್ಗದಲ್ಲಿ ನೀರು, ರಸ್ತೆ, ಚರಂಡಿ, ಮಳೆ ನೀರು, ಕಸ ಇತ್ಯಾದಿ ಯಾವುದೇ ಸಮಸ್ಯೆ ಇದ್ದಲ್ಲಿ ಅಥವಾ ಯಾವುದೇ ಸಲಹೆ ಇದ್ದಲ್ಲಿ ಮುಖಾಮುಖಿಗೆ ಬನ್ನಿ ಪರಿಹಾರ ಪಡೆಯಿರಿ.

ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕವು ಮಹಾನಗರ ಪಾಲಿಕೆ ಆಯುಕ್ತ ಕೆ. ಮಯಣ್ಣ ಗೌಡ ಅವರೊಂದಿಗೆ ಮುಖಾಮುಖಿ ಕಾರ್ಯಕ್ರಮ ಆಯೋಜನೆ ಮಾಡಿದೆ.

17ರ ಬುಧವಾರ ಬೆಳಗ್ಗೆ 11 ಗಂಟೆಗೆ ಪತ್ರಿಕಾ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನಗರದ ನಾಗರಿಕರು, ಸಂಘ ಸಂಸ್ಥೆಗಳು ಈ ಮುಖಾಮುಖಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಗರದ ಅಭಿವೃದ್ಧಿಗೆ, ಸಮಸ್ಯೆಗಳ ಪರಿಹಾರಕ್ಕೆ ಪಾಲಿಕೆಯೊಂದಿಗೆ ಕೈ ಜೋಡಿಸಬೇಕಾಗಿ ವಿನಂತಿ.

Author