ಶಿವಮೊಗ್ಗ | ಕರವೇ ಸ್ವಾಭಿಮಾನಿ ಬಣದಿಂದ ಹಳದಿ, ಕೆಂಪು ಕನ್ನಡ, ಬಾವುಟದ ಪೇಟ ತೋಡುವ ಮೂಲಕ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ

ಶಿವಮೊಗ್ಗ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ 70ನೇ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ ಅಶೋಕ ನಗರ ಮುಖ್ಯರಸ್ತೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಕಛೇರಿಯ ಮುಂಭಾಗ ನಡೆದ 70ನೇ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ವೈಭವ ಯುತವಾದ ವೇದಿಕೆಯಲ್ಲಿ ರಾಜ್ಯ ಅಧ್ಯಕ್ಷರಾದ ಪಿ ಕೃಷ್ಣೆಗೌಡರ ಉಪಸ್ಥಿತಿಯಲ್ಲಿ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಹೆಚ್ಎಸ್ ಅವರ ಅಧ್ಯಕ್ಷತೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಅಧ್ಯಕ್ಷರಾದ ಪಿ ಕೃಷ್ಣೇಗೌಡರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಭು ರವರು ಹಾಗೂ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ಸುಬ್ರಮಣ್ಯ ಭಾಗವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಅಧ್ಯಕ್ಷರಾದ ಕೃಷ್ಣೆ ಗೌಡ್ರು ಹಾಗೂ ಕಾನೂನು ಸಲಹೆಗಾರರ ಅನಿಲ್ ಕುಮಾರ್ ಕರವೇ ಸ್ವಾಭಿಮಾನಿ ಬಣದ ಮಾರ್ಗದರ್ಶಕರಾದ. ಪತ್ರಕರ್ತರು ಹಾಗೂ ಸಾಹಿತಿಗಳಾದ ಗಾರಾ ಶ್ರೀನಿವಾಸ್ ಕಾವಾಡ್ ನೆರವೇರಿಸಿದರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದ ಮುಂಚಿತವಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀಯುತ ಶ್ರೀಕಾಂತ್ ಅವರು ಶುಭ ಕೋರಿದರು ಕಾರ್ಯಕ್ರಮದಲ್ಲಿ ನಂತರ ರೋಟರಿ ಕ್ಲಬ್ ಸೆಂಟರ್ ನ ಅಧ್ಯಕ್ಷರಾದ ಶ್ರೀಯುತ ಬಸವರಾಜ್ ಜಿ ಸಮಾಜ ಸೇವಕರಾದ ಚಿತ್ರೇಶ್ ಹಾಗೂ ಪಂಚ ಬಾಷ ಚಲನಚಿತ್ರ ನಟರಾದ ಶ್ರೀಯುತ ರಘುರಾಜ್ ಮಲ್ನಾಡ್ ಭಾಗವಹಿಸಿದ್ದರು.

ಗೌರವಾನ್ವಿತ ಸನ್ಮಾನಿತರಾಗಿ ಶ್ರೀಯುತ ಡಾಕ್ಟರ್ ಮಹೇಶ್ ಮೂರ್ತಿ ಪ್ರಖ್ಯಾತ ಹೃದಯ ರೋಗ ತಜ್ಞರು ಹಾಗೂ ಅರವಿಂದ್ ಡಿ. ಪಿ. ದೃಶ್ಯ ಮಾಧ್ಯಮ ಹಾಗೂ ಸಮಾಜ ಸೇವೆ. ರಾಮನಾಥ್ ಭಾರತೀಯ ಸೇನೆಯಲ್ಲಿ ಸೇವೆಗಾಗಿ ಶ್ರೀಯುತ ರಘುರಾಜ್ ಎಚ್ ಕೆ ನ್ಯೂಸ್ ವಾರಿಯರ್ಸ್ ಪತ್ರಿಕೆ ಹಾಗೂ ಸಮಾಜಸೇವೆಗಾಗಿ ಇವರನ್ನು ಗೌರವಾನ್ವಿತವಾಗಿ ಸಮಾಜದ ಗಣ್ಯರು ವೇದಿಕೆಯ ಮುಖಂಡರು ಸಾರ್ವಜನಿಕ ಸಮ್ಮುಖದಲ್ಲಿ ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು.

ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿದಂತ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ವಿಶೇಷವಾಗಿ ಹಳದಿ, ಕೆಂಪು ಕನ್ನಡದ ಬಾವುಟದ ಪೇಟವನ್ನು ಧರಿಸಲಾಗಿತ್ತ.

ನಂತರ ಸಾರ್ವಜನಿಕವಾಗಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು ಹಾಗೂ ನೆರೆದಿದ್ದ ಸಾರ್ವಜನಿಕರಿಗೆ ಪ್ರೀತಮ್ ಮೆಲೋಡಿಸ್ ಆರ್ಕೆಸ್ಟ್ರಾ ಅವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶಿಕಾರಿಪುರದ ಪದಾಧಿಕಾರಿಗಳು ಸಾಗರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶಿವಮೊಗ್ಗ ಜಿಲ್ಲೆಯ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಶ್ರೀರವರು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರ್ವಹಣೆ ನೆರವೇರಿಸಿದರು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಜಿಲ್ಲಾ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.

Author