ಭದ್ರಾವತಿ,ನಗರದ ವಿಶ್ವ ಹಿಂದೂ ಪರಿಷತ್ ವತಿಯಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದ ಕುಟುಂಬದ ಯುವತಿಯನ್ನು ಅಕೆಯ ವಿವಾಹದ ಹಿನ್ನಲೆಯಲ್ಲಿ ಮರಳಿ ಮಾತೃ ಧರ್ಮಕ್ಕೆ ಕರೆತರಲಾಯಿತು.
ವಿಶ್ವ ಹಿಂದೂ ಪರಿಷತ್ ವತಿಯಿಂದ ಮೇ ೨೪ ರ ಭಾನುವಾರ ಸಿದ್ದಾರೂಢ ನಗರದಲ್ಲಿರುವ ಧರ್ಮ ಶ್ರೀ ಸಭಾ ಭವನದಲ್ಲಿ ೪೨ ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಏರ್ಪಡಿಸಿದೆ.
ಇದರಲ್ಲಿ ನಗರಕ್ಕೆ ಸಮೀಪದ ಅಂತರಗಂಗೆ ಎಂ.ಶಿವಕುಮಾರ್ ಜೊತೆ ಹನುಮಂತ ನಗರ ಸೀಗೆಬಾಗಿಯ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿದೆ.
ಆದರೆ ಯುವತಿಯ ಕುಟುಂಬದವರು ಕ್ರೈಸ್ತ ಧರ್ಮದವರಾಗಿದ್ದಾರೆ. ಆದರೆ ಮದುವೆ ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ನಡೆಯಲಿದ್ದು, ಇದಕ್ಕೆ ತೊಡಕಾಗಬಾರದು ಎಂಬ ಕಾರಣಕ್ಕೆ ಯುವತಿ ಹಿಂದು ಧರ್ಮದ ಯುವಕನನ್ನು ವರಿಸಲಿದ್ದು ತಾನೂ ಸಹ ಹಿಂದೂ ಧರ್ಮ ಸ್ವೀಕಾರ ಮಾಡುವ ಮೂಲಕ ಮರಳಿ ಮಾತೃ ಧರ್ಮಕ್ಕೆ ಬರುತ್ತೇನೆ ಎಂದು ತಿಳಿಸಿದ್ದಳು.
ಈ ಕುಟುಂಬದವರು ಮೂಲತಃ ಹಿಂದೂ ಧರ್ಮದವರಾಗಿದ್ದರು ಯಾವುದೋ ಕಾರಣಕ್ಕೆ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದರು. ಅದರಂತೆ ಜನ್ನಾಪುರದ ಶ್ರೀ ಗಣಪತಿ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಮುಖ ಅರ್ಚಕರಾದ ಹಾಗು ಧರ್ಮ ಜಾಗರಣಾ ಅರ್ಚಕರ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷರಾದ ವೇ.ಬ್ರ,ಕೃಷ್ಣಮೂರ್ತಿ ಸೋಮಯಾಜಿಗಳು ಹಾಗು ಅರ್ಚಕ ವೇ.ಬ್ರ.ಶಂಕರ್ ರವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಿಂದೂ ಧರ್ಮಕ್ಕೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಿಹಿಂಪ ನ ಪ್ರಾಂತ ಕಾರ್ಯಕಾರಿಣಿ ಸದಸ್ಯ ಹಾ.ರಾಮಪ್ಪ, ಜಿಲ್ಲಾ ಉಪಾಧ್ಯಕ್ಷ ಡಿ.ಆರ್.ಶಿವಕುಮಾರ್, ಎಲ್.ಚಂದ್ರಪ್ಪ, ಆರ್.ಸಿದ್ದರಾಮಯ್ಯ, ಎಸ್.ಬದರಿನಾಥ್, ಎಂ.ಕೃಷ್ಣಮೂರ್ತಿ, ಹೇಮಾವತಿ, ಲೀಲಾ ರೇಣುಕಯ್ಯ, ವಿ.ದೀಪಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

