ಶಿವಮೊಗ್ಗದ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿಯಿಂದ ಒಂದಷ್ಟು ಮಾಹಿತಿ ಪಡೆಯಲು ಅರ್ಜಿಯನ್ನು ಸಾಮಾಜಿಕ ಹೋರಾಟಗಾರರೊಬ್ಬರೂ ಮಾಹಿತಿ ಹಕ್ಕಿನಡಿ ಸಲ್ಲಿಸಿದ್ದರೂ ಅದರಂತೆ ಕೇಳಿದ್ದು ಮಾಹಿತಿ ಒಂದಾದರೆ ಕೊಟ್ಟಿದ್ದು ಪುಟಗಳಷ್ಟು ಸಂಬಂಧವಿಲ್ಲದ ಮಾಹಿತಿ.
ಒಂದು ಶಿಕ್ಷಣ ಇಲಾಖೆಯಲ್ಲಿಯೇ ಓದಿ ವಿದ್ಯಾವಂತರು ಇಲ್ಲದಂತೆ ಬಡವಾಯಿತೇ ಶಿಕ್ಷಣ ಸಚಿವರ ಜಿಲ್ಲೆ. ಮೊನ್ನೆ ನೋಡಿದರೆ ಶಿಕ್ಷಣ ಸಚಿವರು ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿಗಳನ್ನು ಹೋಗಳಿ ಕೊಂಡಾಡಿದರು ಆದರೆ ಒಂದು ಮಾಹಿತಿ ಹಕ್ಕಿನಡಿ ದಾಖಲೆ ಕೇಳಿದರೆ ನಮಗೆ ಓದುವುದಕ್ಕೆ ಬರುವುದಿಲ್ಲವೆಂಬಂತೆ ಜಾಣತನದಿಂದ ಬೇಕಾಬಿಟ್ಟಿ ಸಂಬಂಧವಿಲ್ಲದ ಉತ್ತರ ನೀಡಿದ್ದಾರೆ. ಇದು ಬೇಜವಾಬ್ದಾರಿ ಹಾಗೂ ಸಮಸ್ಯೆಗಳನ್ನು ಮುಚ್ಚಿಹಾಕುವ ಹುನ್ನಾರವೆಂಬುದು ಸ್ಪಷ್ಟ.
ಇನ್ನು ಮಾಹಿತಿ ಹಕ್ಕಿನ ದುರುಪಯೋಗ ಕುರಿತಾಗಿ ಸಾಮಾಜಿಕ ಹೋರಾಟಗಾರರು ನಮ್ಮ ಮಾಧ್ಯಮಕ್ಕೆ ಎಳೆ ಎಳೆಯಾಗಿ ವಾಸ್ತವ ವಿಚಾರ ಬಿಚ್ಚಿಟ್ಟಿದ್ದಾರೆ.
ಈ ವಿಶೇಷ ಸುದ್ದಿ ನಿಮ್ಮ ಮುಂದೆ ತೆರದಿಡಿತ್ತಿದ್ದೇವೆ.

ಮಾಹಿತಿ ಹಕ್ಕಿನ ದುರುಪಯೋಗ :
ಸೆಕ್ಷನ್ 8 ಮತ್ತು 9ರ ಅಡಿಯಲ್ಲಿ ಹೊರತುಪಡಿಸಿ ಮಾಹಿತಿ ಕೇಳಿದರೆ, ಇಲಾಖೆಗಳಲ್ಲಿ ಎಲ್ಲಾ ಮಾಹಿತಿ ಕಡ್ಡಾಯವಾಗಿ ನೀಡಲೇಬೇಕು.ಸೆಕ್ಷನ್ 8 ಮತ್ತು 9 ರ ಅಡಿಯಲ್ಲಿ ಯಾಕೆ ಮಾಹಿತಿ ಕೊಡಲ್ಲ ಅಂದರೆ ಒಂದು ವೇಳೆ ಮಾಹಿತಿಯಲ್ಲಿ ವಿಪರೀತ ಮಾಹಿತಿ ಕೇಳಿದಲ್ಲಿ ಉದಾಹರಣೆಗೆ 1,000 ಕ್ಕು ಅಧಿಕ ಪುಟಗಳ ಮಾಹಿತಿ ಕೇಳಿದಲ್ಲಿ ಅಥವಾ ಚದುರು ಹೋಗಿರುವಂತ ಮಾಹಿತಿ ಅಂದರೆ ಕಚೇರಿಯ ಸಮಯ ವ್ಯರ್ಥ ಆಗುವಂತ ಪರಿಸ್ಥಿತಿ ಇದ್ದಲ್ಲಿ ಇದಕ್ಕೂ ಸಹ ಒಂದು ಅವಕಾಶವಿದೆ.
ಅದೇನಂದರೆ ಸರ್ಕಾರಿ ಕಚೇರಿಗೆ ಬಂದು ದಾಖಲೆ ಪರಿಶೀಲನೆ ಮಾಡಿ ಅಂತ ತಿಳಿಸಲೆಬೇಕು.
ಆದರೆ ಇಲ್ಲಿ ಆಗುತ್ತಿರುವುದಾದರೂ ಏನು?
ಮೊದಲನೇ Appeal ಬರುವವರೆಗೂ ಬಹಳಷ್ಟು ಇಲಾಖೆಗಳಲ್ಲಿ ದಾಖಲೆ ಒದಗಿಸುವುದೇ ಇಲ್ಲ.
ಒಂದು ವೇಳೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ಒಂದು ತಿಂಗಳು ಕಳೆದರು ಮಾಹಿತಿ ಬರದಿದ್ದ ವೇಳೆಯಲ್ಲಿ ಮೊದಲನೇ Appeal ಹಾಕುತ್ತಿದ್ದಂತೆ ಈ ಹಿಂದಿನ ಹಳೆಯ ದಿನಾಂಕ ನಮೂದಿಸಿ ಇಲಾಖೆಯಿಂದ ಪೋಸ್ಟ್ ಮಾಡಲಾಗುತ್ತಿದೆ.
ಆದರೆ ಅಧಿಕಾರಿಗಳ ಜಾಣ ದಡ್ಡತನ ಏನಂದರೆ ಪೋಸ್ಟ್ ಮಾಡಿರುವ ದಿನಾಂಕದಲ್ಲಿ ಸಿಕ್ಕಿಬಿಳುತ್ತಾರೆ. ಆದರೆ ಪೋಸ್ಟಲ್ Cover ಒಳಗೆ ದಿನಾಂಕ ಮಾತ್ರ ಹಳೆಯ ದಿನಾಂಕ ನಮೂದು ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ. ಈತರ ದುರುದ್ದೇಶದಿಂದ ಮಾಡುತ್ತಿರುವ ಕುರಿತು ಆರೋಪವಾಗಿದೆ.
Appeal ಹಾಕುತ್ತಿದಂತೆ ಬಾಯಿಗೆ ಬಂದಂತೆ ಬೇಡದೆ ಇರುವ ವಿಚಾರಗಳ ಮಾಹಿತಿ ಒದಗಿಸುವುದು ಮಾಡುತ್ತಿದ್ದಾರೆ.ಹಾಗೆಯೇ ಮಾಹಿತಿ ಒದಗಿಸಿರುವ ಅಧಿಕಾರಿಯ ಹೆಸರು, Designation, Email ID,ಇದಕ್ಕೆ ಸಂಬಂಧಪಟ್ಟವರು ಯಾರು? ಇದರ ಸಂಬಂಧ ಎಷ್ಟು ದಿನದಲ್ಲಿ Appeal ಹೋಗಬಹುದು. ಸಂಪರ್ಕಿಸಲು ಬೇಕಾದ ಫೋನ್ ನಂಬರ್ ಯಾವದನ್ನ ಲಾಗತ್ತಿಸುತ್ತಿಲ್ಲವಾಗಿದೆ. ಇದು ಯಾವದನ್ನು ನೀಡದೆ ಸುಮ್ಮನೆ ಒಂದು ಸಿಗ್ನೇಚರ್ ಹಾಕಿ ಮಾಹಿತಿ ಅಧಿಕಾರಿ ಅಂದರೆ ಯಾರಾಗುತ್ತಾರೆ? ಎಂಬ ಪ್ರಶ್ನೆ ಎದ್ದಿದೆ.
ಇದೆಲ್ಲ ದುರುದ್ದೇಶಪೂರಿತವಾಗಿ ಈ ರೀತಿಯಲ್ಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದೆ.
ಅದೇ ರೀತಿ ಸೆಕ್ಷನ್ 4,(4) ಕಾನೂನು ಏನು ಹೇಳತ್ತೇ ಅಂದರೆ ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಯಾವದೇ ಮಾಹಿತಿ ದಾಖಲೆಗಳನ್ನ Catalog, Index ಮಾಡಿ ಕಂಪ್ಯೂಟರ್ ವೆಬ್ಸೈಟ್ ನಲ್ಲಿ ನಮೂದಿಸಿರಬೇಕು ಇದೆಲ್ಲ ಮಾಹಿತಿ ಪ್ರಕಟಣೆ ಮಾಡಲೇಬೇಕು ಎಂಬುದು ಕಡ್ಡಾಯವಾಗಿದೆ.
ಸಾರ್ವಜನಿಕರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಅಂತ ಕಾನೂನೆ ಹೇಳಿದೆ ಆದರೆ ವಿಪರ್ಯಾಸವೆಂದರೆ ವೆಬ್ಸೈಟ್ ನಲ್ಲಿ ಹುಡುಕಿದರೂ ಸರಿಯಾಗಿ ಸಿಗದೇ ಪರಿತಾಪಿಸಬೇಕಾದ ಪರಿಸ್ಥಿತಿಯನ್ನು ಹಲವಾರು ಸರ್ಕಾರಿ ಕಚೇರಿಯಲ್ಲಿ ಮಾಡಲಾಗಿದೆ ಎಂಬ ಆರೋಪಗಳಿವೆ.
ಹಾಗೂ ಈ ಪ್ರಕ್ರಿಯೆ ಕನಿಷ್ಠ 20 ವರ್ಷದಿಂದ ಮಾಡಿಯೇಯಿಲ್ಲ. ಮಾಹಿತಿ 4,1a ಅಡಿಯಲ್ಲಿ ಪ್ರತಿವರ್ಷ ಮೇಲ್ಕಂಡ ಮಾಹಿತಿಗಳನ್ನು ಪ್ರಕಟಿಸಬೇಕು ಅಂತ ಇದೆ. ಸಾರ್ವಜನಿಕರು ವೆಬ್ಸೈಟ್ ನಲ್ಲಿ ನೋಡಬಹುದು ಯಾವದುಯಿದೆ ಯಾವುದಿಲ್ಲ ಎಂಬುದನ್ನು.

ಆದರೆ ಸರ್ಕಾರಿ ಇಲಾಖೆಯ ಅಧಿಕಾರಿಗಳು ಮಾಡುತ್ತಿರುವುದಾದರು ಏನು?
ಯಾರಾದರೂ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದರೆ ಫೈಲ್ ನಂಬರ್ ಹಾಕಿಲ್ಲ, ದಿನಾಂಕ ಹಾಕಿಲ್ಲ, ನೀವು ಸ್ಪಷ್ಟವಾಗಿ ಕೇಳಿಲ್ಲ ಅಂತ ಮಾಹಿತಿ ರಿಜೆಕ್ಟ್ ಮಾಡುವುದು ಆಗುತ್ತಿದೆ. ಇಲ್ಲಿ ಜವಾಬ್ದಾರಿ ಯಾರದ್ದು ಅಧಿಕಾರಿಗಳ ಕೆಲಸನ ಜನಸಾಮಾನ್ಯರು ಮಾಡಬೇಕಾ? ಅಧಿಕಾರಿಗಳು ವೆಬ್ಸೈಟ್ ನಲ್ಲಿ ಪ್ರಕಟಿಸದೆ ಮಾಹಿತಿ ಕೇಳಿದವರನ್ನೇ ದೂಷಣೆ ಮಾಡಿ ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗುತ್ತಿದೆ ಎಂಬುದು ವಿಷಯ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕರ್ತವ್ಯ ಮಾಡದೆ, ಮೂಲ ದಾಖಲೆಗಳನ್ನು ವೆಬ್ಸೈಟ್ ನಲ್ಲಿ ಪ್ರಕಟಿಸದೆ ಕಡತ ಸಂಖ್ಯೆ ನಮೂದು ಮಾಡಿಲ್ಲ ನೀವು ಹಾಗಾಗಿ ಅರ್ಜಿ ರಿಜೆಕ್ಟ್ ಮಾಡಿದ್ದೇವೆ ಅಂತ ಉತ್ತರ ನೀಡುವುದುದರೆ ತಪ್ಪು ಯಾರದ್ದು ಎಂಬ ಪ್ರಶ್ನೆ ಎದ್ದಿದೆ.
ಮತ್ತು ಸೆಕ್ಷನ್ 4(4) ಅಡಿಯಲ್ಲಿ ಏನು ಹೇಳತ್ತೇ ಅಂದರೆ ಯಾರೇ ಸಾರ್ವಜನಿಕರು ಯಾವದೆ ಸರ್ಕಾರಿ ಕಚೇರಿಗೆ ಹೋಗಿ ಕಡತಗಳ ದಾಖಲೆಗಳ ಫೈಲ್ ಗಳ ಬಗ್ಗೆ ನೋಡಬೇಕು ಅಂದರೆ ಅಧಿಕಾರಿಗಳು ಇಲ್ಲ ಅಂತ ಹೇಳುವಂತಿಲ್ಲ ದಾಖಲೆಗಳ ಪರಿಶೀಲನೆಗೆ ಅವಕಾಶ ಮಾಡಿಕೊಡಲೇಬೇಕು ಇದು ಎಷ್ಟೋ ಇಲಾಖೆಯಲ್ಲಿ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ಈ ರೀತಿ ದಾಖಲೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು ಎಂಬುದನ್ನು ಅಧಿಕಾರಿಗಳು ಮನದಟ್ಟು ಮಾಡಿಕೊಳ್ಳಬೇಕಿದೆ.
ಯಾರಾದ್ರೂ ಸಾರ್ವಜನಿಕರು ಸರ್ಕಾರಿ ಇಲಾಖೆಗೆ ಬಂದು ಮಾಹಿತಿ ಒದಗಿಸಿ ಅಂತ ಕೇಳಿದಾಗ ನೇರವಾಗಿ ವೆಬ್ಸೈಟ್ ನಲ್ಲಿಯೇ ಇದೆ ಪ್ರಕಟಣೆ ಮಾಡಿದ್ದೇವೆ ಅಂದರೆ ಅಧಿಕಾರಿಗಳು ಕೆಲಸ ಮುಗಿತಲ್ಲ. ಸಂಬಂಧಪಟ್ಟ ಮಾಹಿತಿ ಸಾರ್ವಜನಿಕರಿಗೆ ಸಿಗಲಿದೆ.
RTI ಆಕ್ಟ್ ಇರುವುದು ಆದರೂ ಏನಕ್ಕೆ ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ಒದಗಿಸುವಂತೆ ಮಾಡುವುದು ಅದೇ ಉಪಯೋಗ ಆಗುತ್ತಿಲ್ಲ ಅಂದರೆ ಅದರ ಅರ್ಥ ಅಧಿಕಾರಿಗಳ ನಿರ್ಲಕ್ಷ ಅಷ್ಟೇ.ಸಾರ್ವಜನಿಕರ ಹಕ್ಕು ಕಸಿದುಕೊಳ್ಳುವ ಹಕ್ಕು ಅಧಿಕಾರಿಗಳಿಗೆ ಕೊಟ್ಟಿರುವುದು ಯಾರು?ಇನ್ನು ಬಹು ಮುಖ್ಯವಾಗಿ ಸರ್ಕಾರಿ ಜಮೀನಿನ ಅಥವಾ ಖಾಸಗಿಯ ದಾಖಲೆಗಳು ಇದರ ಜವಾಬ್ದಾರಿಯೇ ಕಂದಾಯ ಇಲಾಖೆಯದ್ದು ಯಾವದೋ ಒಂದು ಸರ್ವೇ ನಂಬರ್ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದರೆ ಇದರ ಸಂಬಂಧ ಕಡ್ಡಾಯವಾಗಿ ಕಂದಾಯ ಇಲಾಖೆ ಬಳಿ ಮಾಹಿತಿ ಇರಲೇಬೇಕು, ತೀರ 50 ವರ್ಷ ಹಳೆಯದು ಕೇಳಿದರೆ ಏನೋ ಇಲ್ಲ ಅನ್ನಬಹುದು ಆದರೆ ಕನಿಷ್ಠಪಕ್ಷ ಎರಡು ಮೂರು ವರ್ಷ ಹಿಂದಿನ ಮಾಹಿತಿ ಒದಗಿಸಿ ಅಂದರೆ ನಮ್ಮ ಬಳಿ ದಾಖಲೆಯೇ ಇಲ್ಲ ಎಂಬ ಬೇಜವಾಬ್ದಾರಿ ಉತ್ತರ ಕೊಡುವ ಅಧಿಕಾರಿಗಳು ಇದ್ದಾರೆ.
ಆದರೆ ವಾಸ್ತವದಲ್ಲಿ ದಿಶಾಂಕ್ ಆಪ್, ಮ್ಯಾಪ್ ಗಳಲ್ಲಿ ವೆಬ್ಸೈಟ್ ನಲ್ಲಿ ನಮೂದು ಆಗಿದೆ ಆದರೆ ಫೈಲ್ ದಾಖಲೆಗಳೇ ಇಲ್ಲ ಎನ್ನುವ ಬೇಜವಾಬ್ದಾರಿ ಅಧಿಕಾರಿಗಳು ಇದ್ದಾರೆ ಎಂದರೆ ಜನಸಾಮಾನ್ಯರು ನಂಬಲೇಬೇಕು ನಮ್ಮ ಹದೆಗೆಟ್ಟ ವ್ಯವಸ್ಥೆ ಯಾವತರಯಿದೆ ಎಂದು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಯಾವಾಗ Mutation ಬದಲಾವಣೆ ಆಯಿತು?, ಮಾಲೀಕರ ಹೆಸರು ಬದಲಾವಣೆ ಯಾವಾಗ ಆಯಿತು? ಫೈಲ್ ನಂಬರ್ ಸಹ ನಮೂದಿಸಿ ಕೇಳಿದರೆ ಸಹ ಈ ಕಡತ ನಮ್ಮ ಬಳಿಯಿಲ್ಲ ಅಂತ ಇಲಾಖೆಗಳಿಂದ ಉತ್ತರ ಬರತ್ತೆ ಅಂದರೆ ಎಷ್ಟು ಬೇಜವಾಬ್ದಾರಿ ಆಗಿರಬಹುದು ಎಂಬುದು ಸ್ಪಷ್ಟ ಸಂದೇಶ ರವಾನೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೂ ಎಷ್ಟೋ ಸರ್ಕಾರಿ ಜಮೀನುಗಳನ್ನು ಕನಿಷ್ಠ 30 ವರ್ಷ ಲಿಸ್ ಗೆ ನೀಡಿದ್ದಾರೆ. ಪ್ರತಿವರ್ಷ ಲಿಸ್ ಗೆ ಸರ್ಕಾರಕ್ಕೆ ಪೇಮೆಂಟ್ ಆಗುತ್ತಿಲ್ಲ ಹಣ ಬರುತ್ತಿಲ್ಲ. ಪ್ರತಿ ಎರಡು ವರ್ಷಕ್ಕೊಮ್ಮೆ ಲಿಸ್ ಹಣ ಜಾಸ್ತಿ ಮಾಡಬೇಕು ಅಂತ ಆದೇಶವಿದೆ. ಇದರ ಸಂಬಂಧ ಒಂದು ರೆಜಿಸ್ಟರ್ Maintain ಮಾಡಬೇಕಿದೆ ಅದು ಆಗುತ್ತಿಲ್ಲ. ಎಷ್ಟು ಲಿಸ್ ಗೆ ನೀಡಿದ್ದೇವೆ ಅನ್ನುವ ಮಾಹಿತಿಯೇ ಇಲ್ಲ..!
ಎಷ್ಟು ಸರ್ಕಾರಿ ಜಮೀನು ಲಿಸ್ ಗೆ ಯಾರಿಗೆ ಕೊಟ್ಟಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ಇಲ್ಲದಾಗಿದೆ. ಎಷ್ಟೋ ವರ್ಷಗಳಾದರು ಲಿಸ್ ಹಣ ಬಂದಿಲ್ಲ ಇದನ್ನು ವಸೂಲಿ ಮಾಡುವ ಪ್ರಯತ್ನ ಅಧಿಕಾರಿಗಳು ಮಾಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಇಂತಹ ಮಾಹಿತಿಗಳನ್ನು RTI ನಲ್ಲಿ ಕೇಳಿದಾಗ ನೀವು ಕೇಳಿರುವ ಮಾಹಿತಿ ಪ್ರಶ್ನರ್ಥಕವಾಗಿದೆ ಇಲ್ಲ ನೀವು ಕೇಳಿರುವ ಮಾಹಿತಿ ಸಿದ್ದ ಮಾಹಿತಿ ಆಗಿಲ್ಲ ಈ ರೀತಿ ರಿಜೆಕ್ಟ್ ಮಾಡುವದನ್ನ ಅಧಿಕಾರಿಗಳು ಮಾಡುತ್ತಿದ್ದಾರೆ ಎಂಬ ದೂರು ಆಗಿದೆ.
ಕ್ರಮ ಯಾರಮೇಲೆ?
ಇನ್ನು ವಿಚಿತ್ರ ಸಂಗತಿ ಅಂದರೆ ಮಾಹಿತಿ ಅಧಿಕಾರಿಗಳು ಅಂತ ಇರುತ್ತಾರೆ ಅವರುಗಳೇ ಉತ್ತರ ನೀಡಬೇಕು ಆದರೆ ಆ ಅಧಿಕಾರಿ ಉತ್ತರ ನೀಡಲ್ಲ ಅದರಬದಲು ಬೇರೆ ಯಾರೋ ಅಧಿಕಾರಿಗಳಿಂದ ಉತ್ತರ ನೀಡುತ್ತಾರೆ.
ಆದರೆ Appeal ಯಾರ ವಿರುದ್ಧ ಹೋಗಬೇಕು ಮಾಹಿತಿ ಹಕ್ಕಿನ ಅಧಿಕಾರಿಗಳ ವಿರುದ್ಧ ಮಾತ್ರ ಹೋಗಲು ಅವಕಾಶವಿದೆ. ಯಾರಾದರೂ ಅಧಿಕಾರಿಗಳು ಕಾನೂನು ಬಾಹಿರ ಕೆಲಸ ಮಾಡಿದ್ದಾರೆ ಅಂತ ಮಾಹಿತಿ ಹಕ್ಕಿನಡಿ ತಿಳಿಸಿದರೆ ಆದರೆ ವಿಚಿತ್ರ ಎಂದರೆ ಯಾರ ಮೇಲೆ ಕ್ರಮ ಜರುಗಿಸಿ ಅಂತ ಮಾಹಿತಿ ಹಕ್ಕಿನಡಿ ತಿಳಿಸಿಲಾಗಿರತ್ತೋ ಯಾರು ಅಕ್ರಮ ಕಾನೂನು ಬಾಹಿರ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೋ ಅಂತ ಅಧಿಕಾರಿಗೆ ವಾಪಾಸ್ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಿ ಅಂತ ಅದೇ ಅಧಿಕಾರಿಗೆ ಲೆಟರ್ ಕಳಸಲಗುತ್ತಿದೆ.
ಇದೆಲ್ಲ ಯಾವ ರೀತಿ ಸಂದೇಶ? ಕಳ್ಳನಿಗೆ ಕೋಲು ಕೊಟ್ಟು ನಿನಗೆ ನೀನು ಹೊಡೆದಿಕೋ ಎಂಬಂತ ಅವ್ಯವಸ್ಥೆಯಾಗಿದೆ. ಯಾರು ಆರೋಪಿ ಸ್ಥಾನದಲ್ಲಿ ಇರುತ್ತಾನೋ ಆತನಿಗೆ ನಿನ್ನ ಮೇಲೆ ಆರೋಪ ಬಂದಿದೆ ನೋಡು ಅಂತ ತಿಳಿಸುವುದು ಇದು ಯಾವತರ ವ್ಯವಸ್ಥೆ ಎಂಬ ಪ್ರಶ್ನೆ ಎದ್ದಿದೆ!
ಅವ್ಯವಸ್ಥೆಯ RTI ಗೆ ಪರಿಹಾರ :
ಇಷ್ಟೆಲ್ಲಾ ಅವ್ಯವಸ್ಥೆ ಯಿಂದ ಕೂಡಿರುವ ಮಾಹಿತಿ ಹಕ್ಕು ಅನ್ನೋ ವ್ಯವಸ್ಥೆ ಈಗ ICU ನಲ್ಲಿ ಚಿಂತಾಜಾನಕ ಸ್ಥಿತಿಗೆ ತಲುಪಿ ಶೋಚನಿಯವಾಗಿದೆ.ಇನ್ನು ಸರ್ಕಾರಿ ಇಲಾಖೆಯ ಅಧಿಕಾರಿಗಳಿಗೆ ಹೆದರಿಕೆ ಮತ್ತೊಂದು ಏನು ಇಲ್ಲದಾಗಿದೆ.
ಮಾಹಿತಿ ಹಕ್ಕು ಅನ್ನುವುದು ಇಂದು ಒಂದು ನಾಗೇಪಾಟಲಿನಂತೆ ಆಗೋಗಿದೆ.
ಇಂತಹ ಒಂದು ದುಸ್ಥಿತಿಯಲ್ಲೂ ಜನಸಾಮಾನ್ಯರು ತಮಗೆ ಸುಲಭವಾಗಿ ಮಾಹಿತಿ ಬೇಕಾದ್ರೆ ಒಂದು ಕೆಲಸ ಮಾಡಬಹುದು ನೇರವಾಗಿ ಇಲಾಖೆಯ ಕಚೇರಿಗೆ ಹೋಗಿ ದಾಖಲೆಗಳ ಪರಿಶೀಲನೆ ಮಾಡಿ ಮೇಲ್ಕಂಡ ತಿಳಿಸಿದಂತೆ ಗಂಟೆಗೆ 20₹ ನೀಡಿ ನಿಮಗೆ ಬೇಕಾಗಿರೋ ಮಾಹಿತಿ ಪಡೆದುಕೊಳ್ಳಿ, ನೀವು ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿ ಪೋಸ್ಟ್ ಮಾಡಿ ಕನಿಷ್ಠ ಪಕ್ಷ ನಿಮಗೆ 100₹ ಉಳಿತಾಯವಾಗಲಿದೆ ಹಾಗೂ ನಿಮ್ಮ ಅಮೂಲ್ಯ ಸಮಯ ಕೂಡ ವ್ಯರ್ಥ ಆಗುವುದನ್ನ ತಡೆಗಟ್ಟ ಬಹುದಾಗಿದೆ ಎಂಬುದನ್ನು ಸಾಮಾಜಿಕ ಹೋರಾಟಗಾರರು ನಮ್ಮ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಾಹಿತಿ ಹಕ್ಕು ಮತ್ತು ಬ್ಲಾಕ್ಮೇಲ್ :
ಕೊನೆಯದಾಗಿ ಒಂದಷ್ಟು ಪ್ರಶ್ನೆಗೆ ಉತ್ತರ ಮಾಹಿತಿ ಹಕ್ಕು ಅಂತ ನಮಗೆ ಬ್ಲಾಕ್ಮೇಲ್ ಮಾಡುತ್ತಾರೆ ಎನ್ನುವ ಅಧಿಕಾರಿಗಳು ಸರಿಯಾದ ದಾಖಲೆ ಇದ್ದಮೇಲೂ ಸಹ ಬ್ಲಾಕ್ಮೇಲ್ ಬರುತ್ತಿದೆ ಅಂದರೆ ದೂರು ನೀಡಬಹುದು ಕ್ರಮ ಜರುಗಿಸಬಹುದಾಗಿದೆ.
ಮೊದಲು ಅಧಿಕಾರಿಗಳು ಮಾಡಬೇಕಾದ ಕರ್ತವ್ಯ ಮಾಡಿದರೆ ಇಷ್ಟೆಲ್ಲಾ ಅವ್ಯವಸ್ಥೆ ಆಗಲಿದೆಯಾ? ಎಂಬುದು ಜನಸಾಮಾನ್ಯರ ಪ್ರಶ್ನೆ?

