ಸಾರಾಂಶ :
2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಇತಿಹಾಸ ಸೃಷ್ಟಿಸುವತ್ತ ದಾಪುಗಾಲಿಟ್ಟಿದೆ. ಸಿಎಂ ಎಂ.ಕೆ. ಸ್ಟಾಲಿನ್ ತಮ್ಮ ಭದ್ರಕೋಟೆ ಕೊಳತ್ತೂರಿನಲ್ಲಿ ಟಿವಿಖೆಯ ವಿ.ಎಸ್. ಬಾಬು ಎದುರು ಸೋಲುಂಡಿದ್ದಾರೆ. 234 ಕ್ಷೇತ್ರಗಳ ಪೈಕಿ ಟಿವಿಖೆ 107 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಪ್ರಬಲ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಿಗೆ ತೀವ್ರ ಮುಖಭಂಗವಾಗಿದೆ. ಕೇವಲ ಎರಡು ವರ್ಷಗಳ ಹಿಂದೆ ಸ್ಥಾಪನೆಯಾದ ಪಕ್ಷವೊಂದು ಇದೀಗ ಅಧಿಕಾರಕ್ಕೇರುವ ಹೊಸ್ತಿಲಲ್ಲಿದೆ.

ಪಂಚರಾಜ್ಯ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶಗಳು ಹೊರಬೀಳುತ್ತಿವೆ. ಮೂರು ರಾಜ್ಯಗಳಲ್ಲಿ ಆಡಳಿತ ಪಕ್ಷ ಮಣ್ಣು ಮುಕ್ಕಿದೆ. ಅದರಲ್ಲೂ ತಮಿಳುನಾಡಿನಲ್ಲಿ ದೊಡ್ಡ ಬದಲಾವಣೆ ಸಂಭವಿಸಿದೆ.
ರಾಜ್ಯದ ದೊಡ್ಡ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ ಹಾಗೂ ಎಐಡಿಎಂಕೆ ಪಕ್ಷಗಳಿಗೆ ಹೊಸ ಪಕ್ಷವಾದ ನಟ ಜೋಶೆಫ್ ವಿಜಯ್ ಅವರ ಟಿವಿಕೆ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಇತಿಹಾಸ ಸೃಷ್ಟಿಸುವತ್ತಾ ಹೆಜ್ಜೆಯನ್ನಿಟ್ಟಿದೆ.

ಈಗಾಗಲೆ ಟಿವಿಕೆ ಬರೋಬ್ಬರಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಗೆಲುವಿನತ್ತ ಲಗ್ಗೆ ಇಟ್ಟಿದೆ. ವಿಜಯ್ ಅಬ್ಬರಕ್ಕೆ ಡಿಎಂಕೆ ಅಲ್ಲೋಲ ಕಲ್ಲೋಲವಾಗಿದ್ದು, ಸ್ವತಃ ತಮಿಳುನಾಡು ಹಾಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಸೋಲು ಕಂಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆಗೆ ದೊಡ್ಡ ಆಘಾತವೆಂದರೆ ಸುಮಾರು 15 ಮಂತ್ರಿಗಳು ಸೋಲಿನ ಸುಳಿಗೆ ಸಿಲುಕಿದ್ದಾರೆ. ಡಿಎಂಕೆಗೆ ನುಂಗಲಾರದ ತುತ್ತೆಂದರೆ ಇದರಲ್ಲಿ ಮುಖ್ಯಮಂತ್ರಿ ಮತ್ತು ಪಕ್ಷದ ಸುಪ್ರೀಂ ಲೀಡರ್ ಎಂ.ಕೆ. ಸ್ಟಾಲಿನ್ ಕೂಡ ಸೇರಿದ್ದಾರೆ. ಸ್ಟಾಲಿನ್ ಕೊಲತ್ತೂರ್ ರ್ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.

