ದಿ.ರಾಮಕೃಷ್ಣ ಹೆಗಡೆಯವರ ಪತ್ನಿ ಶಕುಂತಲಾ ಹೆಗಡೆಯವರ ಆರೋಗ್ಯ ವಿಚಾರಿಸಿದ ಸಿಎಂ

ರಾಜಕೀಯ

ಬೆಂಗಳೂರು, ಇಂದು ದಿವಂಗತ ರಾಮಕೃಷ್ಣ ಹೆಗಡೆ ಅವರ ಸದಾಶಿವ ನಗರದ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ, ಹೆಗಡೆಯವರ ಪತ್ನಿ ಶಕುಂತಲಾ ಹೆಗಡೆಯವರ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆಯೊಂದಿಗಿನ ತನ್ನ ಬಾಂಧವ್ಯವನ್ನು ನೆನೆದು, ಶಕುಂತಲಾ ಹೆಗಡೆಯವರಿಗೆ ಆಯುರಾರೋಗ್ಯ ಲಭಿಸಲೆಂದು ಶುಭ ಹಾರೈಸಿದರು.

ಹೆಗಡೆ ಅವರ ಪುತ್ರಿಯರಾದ ಮಮತಾ, ಸಮತಾ, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಮಾಜಿ ಸಚಿವರಾದ ಬಿ.ಎಲ್. ಶಂಕರ್ ಹಾಜರಿದ್ದರು.

Author