ಶಿವಮೊಗ್ಗ | ಅನಾಮಧೇಯ ಗಂಡಸಿನ ಶವ ಪತ್ತೆ ; ರೈಲ್ವೆ ಪೊಲೀಸ್ ಪ್ರಕಟಣೆ

ಶಿವಮೊಗ್ಗ

ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣಾ ರೈಲ್ವೆ ಕಿ.ಮೀ. ನಂ.63/500-63/800ರ ರೈಲ್ವೆ ಹಳಿಯ ಪಕ್ಕದಲ್ಲಿ ಏ. 12 ರಂದು ಸಮಾರು 30 ವರ್ಷದ ಗಂಡಸಿನ ಶವ ಪತ್ತೆಯಾಗಿದೆ.

ಈತನ ಹೆಸರು, ವಿಳಾಸ ಹಾಗೂ ವಾರಸುದಾರರ ಬಗ್ಗೆ ಯಾವುದೇ ಸುಳಿವು ಇರುವುದಿಲ್ಲ.

ಈ ಮೃತನ ಚಹರೆ 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಬಲಗೈ ಮೇಲೆ ತ್ರಿಶೂಲದ ಚಿಹ್ನೆಯ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ತುಂಬು ತೋಳಿನ ಬಿಳಿ ಬಣ್ಣದ ಕಪ್ಪು ಗೆರೆಗಳುಳ್ಳ ಶರ್ಟ್ ಧರಿಸಿರುತ್ತಾರೆ.

ಈ ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ

ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ

ದೂ.ಸಂ.: 08182-222974/ 9480802124 ಗಳನ್ನು ಸಂಪರ್ಕಿಸುವಂತೆ ರೈಲ್ವೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Author