ಶಿವಮೊಗ್ಗ | ಬಿಜೆಪಿಗೆ ಭ್ರಷ್ಟಾಚಾರ ಬಗ್ಗೆ ಮಾತಾಡಲು ಯಾವ ನೈತಿಕತೆಯಿದೆ : ನಾರ್ತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ್ ಪ್ರಶ್ನೆ?

ರಾಜಕೀಯ

ಬೆಂಗಳೂರು ,ಪೊಲೀಸ್‌ ಇಲಾಖೆಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಅಸ್ತಿಯನ್ನು ಕಬಳಿಸಲು ಯತ್ನಿಸಿದ ಪ್ರಕರಣದಲ್ಲಿ ಶಿವಮೊಗ್ಗದ ಬಿಜೆಪಿ ಮುಖಂಡರಾದ ಶ್ರೀನಾಥ್ ನಗರ ಗದ್ದೆ ಸೇರಿ ಮೂವರನ್ನು ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ವಸತಿ ಗೃಹದಲ್ಲಿ ವಾಸವಾಗಿದ್ದ ಇನ್ಸ್‌ಪೆಕ್ಟ‌ರ್ ಕುಮಾ‌ರ್ ಅವರ ಮನೆಗೆ ಬೆಸ್ಕಾಂ ಅಧಿಕಾರಿಗಳು ನೀಡಿದ್ದ ವಿದ್ಯುತ್ ಬಿಲ್‌ನಲ್ಲಿ ಮಹಾಲಕ್ಷ್ಮೀ ಹೆಸರು ನಮೂದಾಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು.

ಇನ್ನು ಈ ಘಟನೆ ಹಿನ್ನಲೆ ಬಿಜೆಪಿ ಪಕ್ಷದ ಮೇಲೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಾರ್ತ್ ಬ್ಲಾಕ್ ಅಧ್ಯಕ್ಷರಾದ ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದು.

ಬಿಜೆಪಿ ಎಂದರೆ ಭ್ರಷ್ಟಾಚಾರದ ಪಕ್ಷ ಅಂತ ಮತ್ತೊಮ್ಮೆ ಈ ಘಟನೆಯಿಂದ ಸಾಬೀತಾಗಿದೆ ಎಂದು ಕುಟುಕ್ಕಿದ್ದಾರೆ.

ಬಿಜೆಪಿ, ಆರ್ ಎಸ್ ಎಸ್, ಭ್ರಷ್ಟಾಚಾರಕ್ಕೆ ಈಗ ಮತ್ತೊಂದು ಕೂಡಿ ಸೇರ್ಪಡೆಯಾಗಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಅವರಿಗೆ ರಾಜ್ಯ ಕಾಂಗ್ರೆಸ್ ಸಾರ್ಕಾರದ ಮೇಲೆ ಯಾವ ನೈತಿಕತೆ ಇದೆ ಅಂತ ಭ್ರಷ್ಟಾಚಾರದ ಆರೋಪದ ಬಗ್ಗೆ ಮಾತಾಡುತ್ತಾರೆ. ಇಲ್ಲಿಯವರೆಗೆ ಬಿಜೆಪಿ ಆರೋಪಿಸಿರುವ ಯಾವದನ್ನ ಸಹ ನಿರೂಪಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ ಎಂದರು.

ಮೊದಲು ನಿಮ್ಮ ಪಕ್ಷದ ಹುಳುಕು ಸರಿಪಡಿಸಿಕೊಳ್ಳಿ ಎಂದು ಬಿಜೆಪಿಗೆ ಕಿವಿ ಮಾತು ಹೇಳಿದ್ದಾರೆ.

Author