ಶಿವಮೊಗ್ಗ,ತಾಲ್ಲೂಕಿನ ಆಯನೂರು ಗ್ರಾಮದ ವಿದ್ಯಾರ್ಥಿನಿ ಮಹಿನ್ ಖಾನ್ ಅಫ್ರಿದಿ ಅವರು 600ರಲ್ಲಿ 596 ಅಂಕಗಳನ್ನು ಪಡೆದು ಜಿಲ್ಲೆಯ ಪ್ರಥಮ ಬ್ಯಾಂಕ್ ಗಳಿಸಿ ಹೆಮ್ಮೆಯ ಸಾಧನೆ ಮಾಡಿದ್ದಾರೆ.
ಪ್ರಸ್ತುತ ಅವರು ನಗರದ ಪೇಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಇವರ ತಂದೆ ಜಬೀರ್ ಮತ್ತು ತಾಯಿ ಆಯುಷಾ.
“ನಾನು ದಿನನಿತ್ಯದ ಪಾಠಗಳನ್ನು ಅದೇ ದಿನ ಓದಿ ಮುಗಿಸುವ ಅಭ್ಯಾಸ ಮಾಡಿಕೊಂಡಿದ್ದೆ. ಯಾವುದೇ ಟ್ಯೂಷನ್ಗೆ ಹೋಗದೆ ಶ್ರದ್ಧೆಯಿಂದ ಓದಿದ್ದೇನೆ. ವೈದ್ಯೆಯಾಗುವುದು ನನ್ನ ಕನಸು, ಅದಕ್ಕಾಗಿ ಅಗತ್ಯವಾದ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದೇನೆ,” ಎಂದು ಮಹಿನ್ ಖಾನ್ ಅಫ್ರಿದಿ ಹೇಳಿದ್ದಾರೆ.
ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ತಂದೆ ಜಬೀರ್, “ತುಂಬಾ ಸಂತೋಷವಾಗಿದೆ. ಅವಳು ಬಹಳ ಪರಿಶ್ರಮ ಪಟ್ಟಿದ್ದಾಳೆ. ವೈದ್ಯೆಯಾಗುವ ಕನಸು ಕಂಡಿದ್ದು, ಅದಕ್ಕೆ ನಾವು ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದೇವೆ. ಓದಿನ ಮೇಲೆ ಅವಳ ಶ್ರದ್ದೆ ಈ ಸಾಧನೆಗೆ ಕಾರಣವಾಗಿದೆ,” ಎಂದಿದ್ದಾರೆ.
ವಿಷಯವಾರು ಅಂಕಗಳು:ಇಂಗ್ಲಿಷ್ – 98,ಹಿಂದಿ- 100,ಫಿಜಿಕ್ಸ್ – 100,ಕೆಮಿಸ್ಟ್ರಿ – 99,ಗಣಿತ – 100 -ಜೀವಶಾಸ್ತ್ರ – 99 ಅಂಕ ಪಡೆದಿದ್ದಾರೆ.


