ಶಿವಮೊಗ್ಗ ನಗರದ ಸವಳಂಗ ರಸ್ತೆಯ ಅಕ್ಕಮಹಾದೇವಿ ವೃತ್ತದ ಬಳಿಯಿರುವ ರಾಜ ಕಾಲುವೆಯ ಭಪರ್ ಜೋನ್ ಜಾಗವನ್ನು ಅತಿಕ್ರಮಿಸಿಕೊಂಡಿರುವ ಕಟ್ಟಡ ತೆರವಿಗೆ ಹಾಗೂ ಪಾಲಿಕೆಯ ಕಟ್ಟಡ ಪರವಾನಿಗೆ, ವಿದ್ಯುತ್ ಸಂಪರ್ಕ ಹಾಗೂ ಕೆಪಿಎಂಇ ನಿಯಮಗಳ ಉಲ್ಲಂಘಿಸಿರುವ ನರ್ಸಿಂಗ್ ಹೋಂಗಳ ಪರವಾನಿಗೆಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ಇಂದು ೦೪-೦೪-೨೦೨೬ರಂದು ಮಾನ್ಯ ಜಿಲ್ಲಾಧಿಕಾರಿಗಳು, ಆಯುಕ್ತರು, ಶಿವಮೊಗ್ಗ ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಎಕ್ಸಿಕ್ಯೂಟಿವ್ ಇಂಜೀನಿಯರ್, ಮೆಸ್ಕಾಂ ಇವರಿಗೆ ಕರವೇ ಸ್ವಾಭಿಮಾನಿ ಬಣ ಅಗ್ರಹಿಸಿದೆ.
ಶಿವಮೊಗ್ಗ ನಗರದ ಸವಳಂಗ ರಸ್ತೆಯ ಅಕ್ಕಮಹಾದೇವಿ ವೃತ್ತದ ಬಳಿಯಿರುವ ರಾಜಕಾಲುವೆಯ ಭಪರ್ ಜೋನ್ ವ್ಯಾಪ್ತಿಯ ೨.೦೦ ಕಿ.ಮೀ ಜಾಗವನ್ನು ಅತಿಕ್ರಮಿಸಿಕೊಂಡಿರುವ ಭಾರಿ ಕಟ್ಟಡಗಳನ್ನು ತೆರವುಗೊಳಿಸುವಂತೆ ಹಾಗೂ ಮಹಾನಗರ ಪಾಲಿಕೆಯ ಕಟ್ಟಡ ಪರವಾನಿಗೆ, ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಹಾಗೂ ಡಿಹೆಚ್ಓ ಇಲಾಖೆಯಿಂದ ಕೆಪಿಎಂಇ (ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್) ನಿಯಮಗಳ ಉಲ್ಲಂಘಿಸಿರುವ ಖಾಸಗಿ ನರ್ಸಿಂಗ್ ಹೋಂಗಳ ಪರವಾನಿಗೆಯನ್ನು ರದ್ದು ಪಡಿಸದಿದ್ದರೆ ಕರ್ನಾಟಕ ಲೋಕಾಯುಕ್ತ ತನಿಖೆಗೆ ದೂರು ಅನಿವಾರ್ಯವೆಂದು ಕರವೇ ಸ್ವಾಭಿಮಾನಿ ಬಣದಿಂದ ಆಗ್ರಹಿಸಿದೆ.

ಕರ್ನಾಟಕ ಸರ್ಕಾರವು ರಾಜ್ಯ ಕಾಲುವೆಗಳ ನಿರ್ವಹಣೆ ಹಾಗೂ ರಕ್ಷಣೆಗಾಗಿ ಕಟ್ಟು ನಿಟ್ಟಿನ ಕಾನೂನು ಕಾಯಿದೆಗಳನ್ನು ರೂಪಿಸಿ ಅದರಂತೆ ಜಾರಿಗೆ ಬರುವಂತೆ ಆಯಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದರೂ ಅಕ್ಷರಶಃ ಈ ನಿಯಮಗಳು ಪಾಲನೆ ಆಗುತ್ತಿದಿಯಾ..?!
ಎನ್ನುವ ಪ್ರಶ್ನೆಗಳು ಹಾಗೂ ಕಾಯಿದೆಗಳನ್ನು ನಗರದ ಸವಳಂಗರಸ್ತೆಯ ಅಕ್ಕಮಹಾದೇವಿ ವೃತ್ತದ ಬಳಿಯಿರುವ ರಾಜಕಾಲುವೆಯ ಭಪರ್ ಜೋನ್ ಜಾಗ ಅತಿಕ್ರಮಿಸುವಿಕೆ ಅಣುಕಿಸುವಂತೆ ಮಾಡಿದೆ.
ಇದು ನೈಸರ್ಗಿಕವಾದ ಮಳೆನೀರಿನ ಒಳಹರಿವಿಗೆ ಅಡ್ಡಿಯೂ ಆಗಿದೆ ಅಲ್ಲದೆ, ಘನ ತ್ಯಾಜ್ಯ ಹಾಗೂ ಒಳಚರಂಡಿ ನೀರನ್ನು, ಸಂಪ್ ಪುಟ-೨ ಪೈಪ್ಗಳನ್ನು ಕನೆಕ್ಟ್ ಮಾಡಿರುವ ಸುಮಾರು ೨.೦೦ ಕಿ.ಮೀ ವ್ಯಾಪ್ತಿಯ ಈ ರಾಜಕಾಲುವೆಯ ಭಪರ್ ಜೋನ್ ಜಾಗದ ಅತಿಕ್ರಮಣವನ್ನು ತೆರವುಗೊಳಿಸಬೇಕು ಹಾಗೂ ಕೊಟ್ಟಿರುವ ಕಟ್ಟಡ ಪರವಾನಿಗೆಗಳನ್ನು, ಕಂದಾಯ ನಿಗದಿಗಳನ್ನು ರದ್ದುಪಡಿಸಬೇಕೆಂದು ಕರವೇ ಸ್ವಾಭಿಮಾನಿ ಬಣವು ಆಗ್ರಹಿಸುತ್ತದೆ ಎಂದು ಹೇಳಿದೆ.
ಇದೇ ಅಕ್ಕಮಹಾದೇವಿ ವೃತ್ತದ ಬಳಿಯಿರುವ ಖಾಸಗಿ ಕಟ್ಟಡವೊಂದು ರಾಜಕಾಲುವೆಯ ಭಪರ್ ಜೋನ್ ಜಾಗವನ್ನು ಅಕ್ರಮಿಸಿಕೊಂಡಿದ್ದು ಅಲ್ಲದೆ ಶ್ರೀ ಸಾಮಾನ್ಯ ರೋಗಿಗಳಿಗೆ ಹಾಗೂ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ದಾಖಲುಗೊಳ್ಳುವ ಒಳ-ಹೊರ ರೋಗಿಗಳ ಚಿಕಿತ್ಸೆಗೆಂದು ತೆರೆಯಲಾಗಿರುವ ಚಂದ್ರಗಿರಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಅದು ಹೇಗೆ ಸುರಕ್ಷಿತವಾದ ಕಟ್ಟಡವೆಂದು ಭಾವಿಸಿದೆ..?
ಎನ್ನುವುದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಬೇಕಾಗಿದೆ ಎನ್ನುವುದು ಕರವೇ ಸ್ವಾಭಿಮಾನಿ ಬಣ ತಮ್ಮ ಆವಗಾಹನೆಗೆ ತರಬಯಸುತ್ತದೆ ಎಂದು ಪ್ರಶ್ನಿಸಿದ್ದಾರೆ.

ಇಂತಹ ಭಾರಿ ಆಸ್ಪತ್ರೆ ತೆರೆಯುವಿಕೆಗೆ, ಕೆಪಿಎಂಇ (ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್) ಪ್ರಕಾರ ರೋಗಿಗಳ ಸುರಕ್ಷತೆ ಹಾಗೂ ಹಕ್ಕುಗಳ ರಕ್ಷಣೆ, ಗುಣಮಟ್ಟ ಚಿಕಿತ್ಸೆಗೆ ಆಧ್ಯತೆಯನ್ನು ಕೊಟ್ಟಿದೆ, ಹೀಗಿದ್ದರೂ ಜಿಲ್ಲಾ ಆರೋಗ್ಯಾಧಿಕಾರಿಗಳು ಅದ್ಯಾವ ರಾಜಕೀಯ ಒತ್ತಡಕ್ಕೆ ಮಣಿದು, ಅಥವಾ ನಿರೀಕ್ಷೆಗೆ ಮಣಿದು ನೈಸರ್ಗಿಕ ಮಳೆನೀರಿನ ಒಳಹರಿವಿಗೆ ಅಡ್ಡಿಯಾಗಿರುವ ಹಾಗೂ ರಾಜಕಾಲುವೆಯ ಭಪರ್ ಜೋನ್ ವ್ಯಾಪ್ತಿಯ ಜಾಗವನ್ನು ಅತಿಕ್ರಮಿಸಿಕೊಂಡಿರುವ ಭಾರಿ ಅಕ್ರಮ ಕಟ್ಟಡದಲ್ಲಿ ಚಂದ್ರಗಿರಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ತೆರೆಯಲು ಕೆಪಿಎಂಇ ನೊಂದಣಿ ಪ್ರಮಾಣ ಪತ್ರ ನೀಡಿರುವುದು ಸಂಪೂರ್ಣ ನಿಯಮ ಬಾಹಿರ ಆಗಿದ್ದು, ರೋಗಿಗಳಿಗೆ ಅಸುರಕ್ಷಿತವಾಗಿರುವ ಅಕ್ರಮ ಕಟ್ಟಡದಲ್ಲಿ ನರ್ಸಿಂಗ್ ಹೋಂ ತೆರೆಯಲು ನೀಡಿರುವ ಪರವಾನಿಗೆಯನ್ನು ಇದೀಗಲೇ ರದ್ದುಪಡಿಸಿ ಸುರಕ್ಷಿತವಾದ ಕಟ್ಟಡಕ್ಕೆ ರೋಗಿಗಳನ್ನು ಸ್ಥಳಾಂತರಿಸಲು ಕರವೇ ಸ್ವಾಭಿಮಾನಿ ಬಣ ಈ ಮೂಲಕ ಆಗ್ರಹಿಸುತ್ತದೆ.
ಇಂತಹ ನೂರಾರು ಕಟ್ಟಡಗಳು, ಇನ್ನೂ ರಾಜಕಾಲುವೆಯ ಭಪರ್ ಜೋನ್ ಜಾಗವನ್ನು ಅತಿಕ್ರಮಿಸಿಕೊಂಡು ತಲೆ ಎತ್ತುತ್ತಲೇ ಇದ್ದು, ಶಿವಮೊಗ್ಗ ನಗರದ ಮಧ್ಯ ಭಾಗವಾದ ಈ ರಾಜಕಾಲುವೆಯ ಜಾಗದಲ್ಲಿರುವ ಬಡ ಮತ್ತು ಮದ್ಯಮ ನಿವಾಸಿಗಳ ಮನೆಗಳು ಸಂಪೂರ್ಣವಾಗಿ ತೆರೆವಿಗೆ ಒಳಗಾಗುವಂತಿದ್ದರೆ ಅಂತಹ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಟ್ಟು ತೆರವು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆಗೆ ಕರವೇ ಸ್ವಾಭಿಮಾನಿ ಬಣ ಮನವಿ ಮಾಡುತ್ತದೆ.
ಇನ್ನೂ ಕಮರ್ಷಿಯಲ್ ಭಾರಿ ಕಟ್ಟಡಗಳು, ಆದಾಯ ತೆರಿಗೆ ಪಾವತಿಸುವ ಭಾರಿ ಕಟ್ಟಡಗಳು, ಶೇಕಡ ಎಂಬತ್ತರಷ್ಟಿದ್ದು ರಾಜಕಾಲುವೆ ಭಪರ್ ನಿಯಮಗಳ ಕಾಯಿದೆಯಂತೆ ಯಾವುದೇ ನೋಟಿಸ್ ನೀಡದೆ ತೆರವುಗೊಳಿಸಲು ಮಹಾನಗರ ಪಾಲಿಕೆಗೆ ಆಧಿಕಾರವಿದ್ದು ಕೂಡಲೇ ಈ ಕಟ್ಟಡಕ್ಕೆ ನಿಯಮ ಬಾಹಿರವಾಗಿ ಕೊಟ್ಟಿರುವ ಕಟ್ಟಡ ಪರವಾನಿಗೆ ಹಾಗೂ ಕಂದಾಯ ನಿಗದಿಗಳನ್ನು ರದ್ದು ಪಡಿಸಿ ತೆರವುಗೊಳಿಸಬೇಕೆಂದು ಈ ಮೂಲಕ ಕರವೇ ಸ್ವಾಭಿಮಾನಿ ಬಣ ಆಗ್ರಹಿಸುತ್ತಿದೆ.
ಮೆಸ್ಕಾಂ ಇಲಾಖೆಯು ಇವ್ಯಾವ ಪರಿವೆಗಳಿಲ್ಲದೆ ವಿದ್ಯುತ್ ಸಂಪರ್ಕ ನೀಡಿರುವುದು ಅಕ್ಷಮ್ಯ ಅಪರಾಧವಾಗಿದ್ದು ಮೊದಲು ಭಾರಿ ಕಟ್ಟಡಗಳು, ಅಕ್ರಮ ಕಾಂಪ್ಲೆಕ್ಸ್ಗಳು, ಅಪಾರ್ಟ್ಮೆಂಟ್ಗಳು, ಕಮರ್ಷಿಯಲ್ ಖಾಸಗಿ ನರ್ಸಿಂಗ್ ಹೋಂಗಳಿಗೆ ನೀಡಿರುವ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿ ಕೊಟ್ಟಿರುವ ನಿಯಮ ಬಾಹಿರ ಪರವಾನಿಗೆ, ಹೆಚ್ಚುವರಿ ವಿದ್ಯುತ್ ಸಂಪರ್ಕಗಳನ್ನು ಕೂಡ ಸ್ಥಗಿತಗೊಳಿಸಿ ರಾಜಕಾಲುವೆಯ ಭಪರ್ ಜೋನ್ ನಿಯಮದ ಪಾಲನೆ ಮಾಡಿ ಸಾಂವಿಧಾನಿಕವಾಗಿ ನಡೆದುಕೊಳ್ಳುವಂತೆ ಈ ಮೂಲಕ ಕರವೇ ಸ್ವಾಭಿಮಾನಿ ಬಣ ತಿಳಿಸಲಿಚ್ಚಿಸುತ್ತದೆ ಎಂದು ಪ್ರತಿಭಟನೆ ಮೂಲಕ ತಿಳಿಸಿದ್ದಾರೆ.



