ಶಿವಮೊಗ್ಗ, ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಹಿತ ಶಿವಮೊಗ್ಗ ಜಿಲ್ಲೆಯಾದ್ಯಂತ ಸುಮಾರು 1 ಲಕ್ಷ ವಿವಿಧ ವರ್ಗದಲ್ಲಿ ದುಡಿಯುವ ಕಾರ್ಮಿಕರನ್ನು ಗುರುತಿಸಿ, ಅವರಿಗೆ ಸಂಘಟನೆ ವತಿಯಿಂದ ನೋಂದಣಿ ಮಾಡಿಸಿಕೊಡುವ ಗುರಿಯನ್ನು ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ {ಇಂಟಕ್}ಜಿಲ್ಲಾ ಶಾಖೆ ಹೊಂದಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಇಂಟಕ್ ಜಿಲ್ಲಾಧ್ಯಕ್ಷ ಮಕ್ಬೂಲ್ ಅಹಮದ್, ಪ್ರಮುಖ ನಾಲ್ಕು ವರ್ಗದ ಕಾರ್ಮಿಕರನ್ನು ಗುರುತಿಸಿ ಅವರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳಿಗೆ ಅರ್ಜಿಯನ್ನು ಕೊಡಿಸಲಾಗುವುದು.ಕಟ್ಟಡ ಕಾರ್ಮಿಕರು ಅಂದರೆ, ಮೇಷನ್, ಎಲೆಕಟ್ರಿಷಿಯನ್, ಪ್ಲಂಬರ್, ಬಾರ್ ಬೆಂಡರ್, ಸೆಂಟ್ರಿಂಗ್, ಕಾರ್ಪೆಂಟರ್, ಗಾರೆ ಸಹಾಯಕ, ಇಟ್ಟಿಗೆ ಕೆಲಸಗಾರರು ಇನ್ನು ಮುಂತಾದ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು, ಅಸಂಘಟಿತ ಕಾರ್ಮಿಕರೆಂದರೆ, ಟೈಲರ್, ಹಮಾಲಿ, ಮೆಕ್ಯಾನಿಕ್, ಕಮ್ಮಾರ, ಚಮ್ಮಾರ, ಕ್ಷೌರಿಕ, ಅಕ್ಕಸಾಲಿಗ, ಬೀದಿ ಬದಿ ವ್ಯಾಪಾರಿಗಳು, ಹೋಟೆಲ್ಕಾರ್ಮಿಕರು, ಬೀಡಿ ಕಾರ್ಮಿಕರು ಸೇರಿದಂತೆ ಒಟ್ಟು-99 ವರ್ಗದ ಕೆಲಸಗಾರರು ಇದರ ವ್ಯಾಪ್ತಿಗೆ ಬರುತ್ತಾರೆ ಎಂದರು.-
ಅಪಘಾತ ಮರಣ ಧನಸಹಾಯ, ವೈದ್ಯಕೀಯ ಧನಸಹಾಯ, ಸಹಜ ಮರಣ ಧನಸಹಾಯ, ಹೆರಿಗೆ ಧನಸಹಾಯ ಮಾಡಲಾಗುವುದು ಎಂದರು.
ಖಾಸಗಿ ವಾಹನ ಚಾಲಕರ ಮಂಡಳಿಯಡಿ ಕಾರ್ಮಿಕರು ಅಂದರೆ:ಡ್ರೈವರ್, ಕಂಡಕ್ಟರ್, ಮೆಕ್ಯಾನಿಕ್, ವೀಲ್ ಅಲೈಮೆಂಟ್, ಪಂಚರ್ ಷಾಪ್ ಕಾರ್ಮಿಕ, ವಾಟರ್ ವಾಷ್, ಬಸ್ ಏಜೆಂಟರು, ಕ್ಲೀನರ್ ಕಾರ್ಮಿಕರು ಇದರ ವ್ಯಾಪ್ತಿಗೆ ಬರುತ್ತಾರೆ.
ಗಿಗ್ ಕಾರ್ಮಿಕರು, ಸ್ವಿಗ್ಗಿ, ಝೋಮ್ಯಾಟೋ, ಇನ್ನಿತರೆ ಆನ್ ಲೈನ್ ಡೆಲಿವರಿ ಮಾಡುವ ಕಾರ್ಮಿಕರು ಇದರ ವ್ಯಾಪ್ತಿಗೆ ಬರುತ್ತಾರೆ ಎಂದರು.
ಈ ಮೇಲ್ಕಂಡ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಅವರಿಗೆ ಸಿಗಬಹುದಾಂತಹ ಮೆಲ್ಕಂಡ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು “ಇಂಟೆಕ್” ಸಂಘಟನೆ ಮಾಡುವ ಗುರಿಯನ್ನು ಹೊಂದಿದೆ ಎಂದು ವಿವರಿಸಿದರು.



