ದಿನಕ್ಕೊಂದು, ಕ್ಷಣಕ್ಕೊಂದು ಮಾತನಾಡಬೇಡಿ ; ಇರಾನ್ ಯುದ್ಧದ ಬಗ್ಗೆ ಟ್ರಂಪ್​ಗೆ ಮ್ಯಾಕ್ರನ್ ಕಿವಿ ಮಾತು

ವಿದೇಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಪ್ರಾಚ್ಯ ಸಂಘರ್ಷದ ಬಗ್ಗೆ ಪದೇ ಪದೇ ಮಾತನಾಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗುರುವಾರ ಹೇಳಿದ್ದಾರೆ.

“ನೀವು ಗಂಭೀರವಾಗಿರಬೇಕು. ದಿನಕ್ಕೊಂದು ಕ್ಷಣಕ್ಕೊಂದು ಮಾತನಾಡಬೇಡಿ. ಒಂದು ದಿನ ಒಂದು ಮಾತು, ಮತ್ತೊಂದು ದಿನ ಇನ್ನೊಂದು ಮಾತು ಹೇಳಬಾರದು. ನಿತ್ಯವೂ ಇಂತಹ ಹೇಳಿಕೆಗಳನ್ನು ನೀಡುವ ಬದಲು, ಪರಿಸ್ಥಿತಿಯನ್ನು ತಿಳಿಗೊಳಿಸಿ ಶಾಶ್ವತ ಶಾಂತಿಯತ್ತ ಗಮನ ಹರಿಸುವುದು ಉತ್ತಮ” ಎಂದು ಮ್ಯಾಕ್ರನ್ ಅವರು ಟ್ರಂಪ್​ಗೆ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ.

“ಕದನ ವಿರಾಮ ಘೋಷಿಸಬೇಕು*”ಹೋರ್ಮುಜ್ ಜಲಸಂಧಿಯನ್ನು ಸ್ವತಂತ್ರಗೊಳಿಸಲು ಮಿಲಿಟರಿ ಕಾರ್ಯಾಚರಣೆ ನಡೆಸುವುದು “ಅವಾಸ್ತವಿಕ” ಎಂದು ಮ್ಯಾಕ್ರನ್ ಹೇಳಿದ್ದಾರೆ.

“ಮಿಲಿಟರಿ ಕಾರ್ಯಾಚರಣೆಯ ಮೂಲಕ ಬಲವಂತವಾಗಿ ಹಾರ್ಮುಜ್ ಜಲಸಂಧಿಯನ್ನು ವಿಮೋಚನೆಗೊಳಿಸಲು ಪ್ರತಿಪಾದಿಸುವವರಿದ್ದಾರೆ, ಈ ನಿಲುವನ್ನು ಕೆಲವೊಮ್ಮೆ ಯುನೈಟೆಡ್ ಸ್ಟೇಟ್ಸ್ ವ್ಯಕ್ತಪಡಿಸಿದೆ.

ಇದು ಅವಾಸ್ತವಿಕ. ಏಕೆಂದರೆ ಇದು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಜಲಸಂಧಿಯನ್ನು ದಾಟುವ ಪ್ರತಿಯೊಬ್ಬರು ಇರಾನಿನ ಕ್ರಾಂತಿಕಾರಿ ಗಾರ್ಡ್‌ಗಳಿಂದ ಭಾರೀ ಬೆದರಿಕೆ ಎದುರಿಸಬೇಕಾಗುತ್ತದೆ. ಹೀಗಾಗಿ ಕದನ ವಿರಾಮ ಘೋಷಿಸಬೇಕು” ಎಂದು ಮ್ಯಾಕ್ರನ್ ಹೇಳಿದ್ದಾರೆ.

‘ನ್ಯಾಟೋವನ್ನು ದುರ್ಬಲಗೊಳಿಸಿದ ಟ್ರಂಪ್*ಮ್ಯಾಕ್ರಾನ್ ಅವರು ಗುರುವಾರ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಟ್ರಂಪ್ ಅವರು ಅಮೆರಿಕದ ಮೈತ್ರಿಕೂಟದ ಬದ್ಧತೆಯ ಬಗ್ಗೆ “ನಿತ್ಯವೂ ಅನುಮಾನ” ಸೃಷ್ಟಿಸುವ ಮೂಲಕ ನಾರ್ತ್ ಆಟ್ಲಾಂಟಿಕ್ ಟ್ರೀಟಿ ಆರ್ಗ್ನೈಸೇಷನ್ (ನ್ಯಾಟೋ)ಅನ್ನು ದುರ್ಬಲಗೊಳಿಸಿದ್ದಾರೆ ರಂದು ಹೇಳಿದ್ದಾರೆ

Author