ಸೊರಬ | ರಂಗನಾಥ ಸ್ವಾಮಿಗೆ ರಥ ಸಮರ್ಪಿಸಿದ ಕುಮಾರ್ ಬಂಗಾರಪ್ಪ

ಶಿವಮೊಗ್ಗ

ಸೊರಬ,ಭಕ್ತರ ನೂರಾರು ವರ್ಷಗಳ ಬೇಡಿಕೆಯಾಗಿದ್ದ ನೂತನ ರಥವನ್ನು ಶ್ರೀರಂಗನಾಥ ದೇವರು ತನ್ನ ಶಕ್ತಿಯಿಂದಲೇ ಇಂದು ಸಮರ್ಪಿಸಿಕೊಂಡಿರುವುದು ಭಕ್ತ ಸಮೂಹಕ್ಕೆ ಸಂತೋಷ ಉಂಟು ಮಾಡಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.

ಶುಕ್ರವಾರ ಪಟ್ಟಣದ ಶ್ರೀರಂಗನಾಥ ದೇವಸ್ಥಾನದ ಆವರಣದಲ್ಲಿ ನೂತನ ರಥ ಲೋಕಾರ್ಪಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ತಮ್ಮ ಮ್ಮ ಪತ್ನಿ ವಿದ್ಯುಲ್ಲತಾ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಅವರು ರಾಜ್ಯ ಸರ್ಕಾರದ ಅನುದಾನದಡಿ ಹಾಗೂ ಅನೇಕ ದಾನಿಗಳ ಸಹಾಯದಿಂದ ಸುಂದರ ಕಲಾಕೃತಿಯೊಂದಿಗೆ ರಥ ನಿರ್ಮಾಣಗೊಂಡಿದೆ. ಇದು ಬಹು ಕಾಲದ ಕನಸಾಗಿದ್ದು, ಪ್ರತಿಯೊಬ್ಬರೂ ತಮ್ಮ ಶಕ್ತಾನುಸಾರದೇವರ ಸೇವೆ ಮಾಡಿದ್ದಾರೆ. ಒಂದು ರೀತಿಯಲ್ಲಿ ಆರಾಧ್ಯ ದೈವ ರಂಗನಾಥ ಸ್ವಾಮಿಯೇ ಭಕ್ತರ ಮೂಲಕಈ ಮಹತ್ವದ ಕಾರ್ಯ ಕೈಗೊಂಡಿದ್ದಾನೆ.

ಮಾರ್ಚ್ 30 ರಂದು ನೂತನ ರಥ ಲೋಕಾರ್ಪಣೆಗೊಳ್ಳಲಿದ್ದು,ರಾಜ್ಯದ ಜನತೆಗೆ ದೇವರು ಸುಖ,ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ರಂಗನಾಥ ದೇವರ ಬ್ರಹ್ಮ ರಥೋತ್ಸವವು ಮೇ 1 ರಂದು ಜರುಗಲಿದ್ದು, ರಥವು ಶಿಥಿಲಾವಸ್ಥೆಯಿಂದ ದೂರದವರೆಗೂ ಎಳೆಯ ಎಳೆಯಲು ಆಗುತ್ತಿರಲಿಲ್ಲ. ದೇವರ ಶಕ್ತಿಯಿಂದ ನೂತನ ರಥವನ್ನು ಪಟ್ಟಣದ ಮುಖ್ಯ ರಸ್ತೆಯಲ್ಲಿ ಎಳೆಯಲು ಅನುಕೂಲವಾಗಲಿದೆ. ಇಂತಹ ಶುಭ ಗಳಿಗೆಗೆ ತಾಲ್ಲೂಕಿನ ಜನರು ಎದುರು ನೋಡುತ್ತಿದ್ದು, ರಥ ನಿರ್ಮಾಣಗೊಂಡು ಸಾಕಾರಗೊಂಡಿರುವುದು ನನಗೂ ಕೂಡ ಭಾವ ತುಂಬಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

`ಕುಮಾ‌ರ್ ಬಂಗಾರಪ್ಪ ಅವರ ಪತ್ನಿ ವಿದ್ಯುಲ್ಲತಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಕುಮಾರ್ ಪಾಟೀಲ್, ಪ್ರಮುಖರಾದ ಟಿ.ಆರ್.ಸುರೇಶ್, ಗುರುಮೂರ್ತಿ ಗುಡಿಗಾರ್, ಎಂ.ಡಿ.ಉಮೇಶ್, ಗುರುಮೂರ್ತಿ ಹಿರೇಶಕುನ, ಸುಧೀ‌ರ್ ಪೈ, ಪ್ರಶಾಂತ್ ಮೇಸ್ತಿ, ಕೃಷ್ಣಮೂರ್ತಿ ಕೊಡಕಣಿ, ಕೆ.ಜಿ.ಬಸವರಾಜ್ ಇದ್ದರು.

Author