ಕ್ಲಾಸ್ ರೂಮ್ ನಲ್ಲೆ ಮೆಡಿಕಲ್ ವಿದ್ಯಾರ್ಥಿನಿಗೆ ಪ್ರೊಪೋಸ್ ಮಾಡಿದ ಪ್ರೊಫ್. ಅಬ್ದುಲ್ಲಾಗೆ ಬಿತ್ತು ಗೂಸಾ..!

ಬೆಂಗಳೂರು

ಬೆಂಗಳೂರು ಗ್ರಾಮಾಂತರ ನೆಲಮಂಗಲದಲ್ಲಿರೋ ಖಾಸಗಿ ಕಾಲೇಜಿನಲ್ಲಿ ಹುಡುಗಿ ವಿಚಾರಕ್ಕೆ ಪ್ರಾಧ್ಯಪಕ ಹಾಗೂ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಮೆಡಿಕಲ್ ವಿದ್ಯಾರ್ಥಿನಿಗೆ ಪ್ರೊಫೆಸರ್​​ ಅಬ್ದುಲ್ ಎಂಬುವವರು ಕ್ಲಾಸ್ ರೂಮ್​​ನಲ್ಲೇ ಪ್ರಪೋಸ್​ ಮಾಡಿದ್ದು, ವಿದ್ಯಾರ್ಥಿಗಳ ಮೊಬೈಲ್​​ನಲ್ಲಿ ವಿಡಿಯೋ ರೆಕಾರ್ಡ್​​ ಆಗಿದೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

ನೆಲಮಂಗಲ ತಾಲೂಕಿನ ಟಿ. ಬೇಗೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕ್ಲಾಸ್​​ ರೂಮ್​​ನಲ್ಲಿ ಎಲ್ಲಾ ವಿದ್ಯಾರ್ಥಿಗಳು ಇದ್ದ ಸಮಯದಲ್ಲೇ ಪ್ರೊಫೆಸರ್​ ಅಬ್ದುಲ್ ಎಂಬುವವರು ವಿದ್ಯಾರ್ಥಿನಿಗೆ ಐ ಲವ್​ ಯೂ ಎಂದು ಪ್ರಪೋಸ್​ ಮಾಡಿದ್ದು, ಸ್ಟೂಡೆಂಟ್​ ಮೊಬೈಲ್​ನಲ್ಲಿ ಈ ದೃಶ್ಯ ಸೆರೆಯಾಗಿದೆ.

ಲೆಕ್ಚರರ್​ ಪ್ರಪೋಸ್ ಮಾಡಿದ ವೇಳೆ ವಿದ್ಯಾರ್ಥಿನಿ ಅಲ್ಲೇ ವಿರೋಧ ಮಾಡಿದ್ದಾಳೆ. ಈ ಹಿಂದೆ ನೀನು ನನಗೆ ಪ್ರಪೋಸ್​ ಮಾಡಿಲ್ವಾ ಎಂದು ಪ್ರಾಧ್ಯಾಪಕ ವಿದ್ಯಾರ್ಥಿನಿಯನ್ನು ಕೇಳಿದ್ದು, ಸಾಕ್ಷಿಗೆ ಸಿಸಿಟಿವಿ ದೃಶ್ಯವಿದೆ ಎಂದಿದ್ದಾರೆ.

ಕೋಪಗೊಂಡ ವಿದ್ಯಾರ್ಥಿನಿ ಸಿಸಿಟಿವಿ ವಿಡಿಯೋ ತೋರಿಸಿ ಎಂದಿದ್ದಾಳೆ. ಈ ಬಗ್ಗೆ ನಾಳೆ ಮಾತಾಡುವೆ ಎಂದು ಲೆಕ್ಚರರ್​ ಕ್ಲಾಸ್​​ನಿಂದ ಹೊರಗೆ ಹೋಗಿದ್ದಾರೆ.

ಕ್ಲಾಸ್ ರೂಮ್​​ನಲ್ಲಿ ಚಾಕಲೇಟ್ ಕೊಟ್ಟು ಪ್ರಪೋಸ್ ಮಾಡುವುದಾಗಿ ಪ್ರಾಧ್ಯಾಪಕ ಅಬ್ದುಲ್ ಹೇಳಿಕೊಂಡಿದ್ದರಂತೆ. ಈ ವೇಳೆ ರೊಚ್ಚಿಗೆದ್ದ ಇತರೆ ಸ್ಟೂಡೆಂಟ್ಸ್​​ ವಿದ್ಯಾರ್ಥಿನಿ ಪರ ನಿಂತು ಪ್ರಾಧ್ಯಾಪಕನ ಜೊತೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ವರದಿ ಆಗಿದೆ.

ಕಾಲೇಜು ಪ್ರಾಧ್ಯಾಪಕ ಅಬ್ದುಲ್ ಅವರಿಂದ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಮೆಡಿಕಲ್ ಕಾಲೇಜು ಕ್ಯಾಂಪಸ್ ನಲ್ಲಿ ಲೆಕ್ಚರರ್ ​​ನನ್ನು ಅಟ್ಟಾಡಿಸಿಕೊಂಡ ವಿದ್ಯಾರ್ಥಿಗಳು ಥಳಿಸಿದ್ದಾರೆ ಎನ್ನಲಾಗ್ತಿದೆ.

ಅಷ್ಟೇ ಅಲ್ಲದೇ ವಿದ್ಯಾರ್ಥಿನಿ ಕೂಡ ಪ್ರಪೋಸ್ ಮಾಡಿದ ಪ್ರೊಫೆಸರ್ ​​ಗೆ ಚಪ್ಪಲಿಯಿಂದ ಥಳಿಸಿದ್ದಾರೆ ಎನ್ನಲಾಗ್ತಿದೆ.

ಸದ್ಯ ಪ್ರಿನ್ಸಿಪಾಲ್ ಅವರನ್ನ ಕರೆದು ಪೊಲೀಸರು ಮಾಹಿತಿ ಪಡೆದಿದ್ದಾರೆ ಎನ್ನಲಾಗ್ತಿದೆ. ವಿದ್ಯಾರ್ಥಿನಿ ದೂರು ಕೊಟ್ರೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಸಿದ್ದರಾಗಿದ್ದಾರೆ. ವಿದ್ಯಾರ್ಥಿಗಳಿಂದ ಹಲ್ಲೆ ಹಿನ್ನೆಲೆ ಲೆಕ್ಚರರ್ ರಿಂದಲೂ ಕೌಂಟರ್ ಕಂಪ್ಲೆಂಟ್ ದಾಖಲಾಗುವ ಸಾಧ್ಯತೆ ಇದೆ.

Author