ಭಾರತದ ರಾಜಕೀಯದ ಇತಿಹಾಸದಲ್ಲೇ ಪ್ರಧಾನಿ ಮೋದಿ ಹೊಸ ದಾಖಲೆ

ದೇಶ

ನವದೆಹಲಿ, ಭಾರತದ ರಾಜಕೀಯದಲ್ಲಿ ಮುಟ್ಟಿದ್ದೆಲ್ಲವನ್ನೂ ಚಿನ್ನ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಭೂತಪೂರ್ವ ಮೈಲಿಗಲ್ಲು ಸಾಧಿಸಿದ್ದಾರೆ.

ಅವರು ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ಅತಿ ಹೆಚ್ಚು ದಿನ ಅಧಿಕಾರ ನಡೆಸಿದ ಮೊದಲ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮೋದಿ ಅವರು ಮುಖ್ಯಮಂತ್ರಿ, ಪ್ರಧಾನಿಯಾಗಿ ಸರ್ಕಾರದ ಚುಕ್ಕಾಣಿಯನ್ನು ಹಿಡಿದು ಇಂದಿಗೆ 8931 ದಿನಗಳಾಗಿವೆ. ಈ ಮೂಲಕ ಸಿಕ್ಕೀಂನ ಮುಖ್ಯಮಂತ್ರಿ ಪವನ್​ ಕುಮಾರ್ ಚಾಮ್ಲಿಂಗ್​ ಅವರ ದಾಖಲೆಯನ್ನು ಮುರಿದರು. ಚಾಮ್ಲಿಂಗ್​ ಅವರು 8930 ದಿನಗಳು ಅಧಿಕಾರ ನಡೆಸಿ ದೇಶದಲ್ಲಿಯೇ ಅತಿಹೆಚ್ಚು ದಿನ ಆಡಳಿತ ನಡೆಸಿದ ಮೊದಲಿಗರಾಗಿದ್ದರು.

ಮೋದಿ ಅವರ ಅಧಿಕಾರಾವಧಿಯನ್ನು ಎರಡು ಹಂತದಲ್ಲಿ ವಿಂಗಡಿಸಲಾಗಿದೆ. ಗುಜರಾತ್ ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ದಿನಗಳನ್ನು ಒಟ್ಟುಗೂಡಿಸಲಾಗಿದೆ.

ಸರ್ಕಾರದ ಮುಖ್ಯಸ್ಥರಾಗಿ 25ನೇ ವರ್ಷಕ್ಕೂ ಅವರು ಕಾಲಿಟ್ಟಿರುವುದು ವಿಶೇಷ. ಈ ಮೈಲಿಗಲ್ಲನ್ನು ಅಪರೂಪದ ಮತ್ತು ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ.

Author