ಶಿವಮೊಗ್ಗದಲ್ಲೊಂದು ಗೋಲ್ಡ್ ಸ್ಕೀಮ್ ಹೆಸರಲ್ಲಿ ಲಾಟರಿ ಜಾಲ

ಶಿವಮೊಗ್ಗ

ಶಿವಮೊಗ್ಗದಲ್ಲೊಂದು ಲಾಟರಿ ದಂಧೆಯ ಕಥೆ ಯಾವದೋ ಗೋಲ್ಡ್ ಸ್ಕೀಮ್ ಹೆಸರಲ್ಲಿ 100 ಜನರು 1000₹ ಹಣ ಪಾವತಿ ಮಾಡಿದಲ್ಲಿ ಒಬ್ಬರಿಗೆ ಲಾಟರಿ ಮುಖೇಣ 50,000₹ ಮೌಲ್ಯದ Ornaments ರೂಪದಲ್ಲಿ ನೀಡಲಾಗುತ್ತಂತೆ.

ಅದೇ ರೀತಿ 24 ತಿಂಗಳು ಪೂರ್ಣಗೋಳಿಸಿದ್ದಲ್ಲಿ 1,25,000₹ ಮೌಲ್ಯದ Ornaments ಗಳನ್ನ ಲಾಟರಿ ಮುಖೇಣ ಲಾಟರಿ ಎತ್ತಿ ನೀಡುತ್ತಾರಂತೆ. ಇದುಕ್ಕೆ 100 ಜನಗಳ ಒಂದು ಗುಂಪು ರಚನೆ ಒಬ್ಬರಿಂದ 1,000₹ ಪಡೆಯಲಾಗುತ್ತಿದೆಯಂತೆ.

ಇನ್ನು ಈ ರೀತಿ ಗೋಲ್ಡ್ ಸ್ಕೀಮ್ ಹೆಸರಲ್ಲಿ ಮಾಡುತ್ತಿದ್ದಾರಂತೆ ಹಾಗೂ ಕಳೆದ ಸೆಪ್ಟೆಂಬರ್ 2025 ರಿಂದ ಈ ವ್ಯವಹಾರ ಶಿವಮೊಗ್ಗದಲ್ಲಿ ಪ್ರಾರಂಭ ಮಾಡುವ ಮೂಲಕ ಹಲವಾರು ಜನರ ಬಳಿ 1,000₹ ಹಣ ಸಂಗ್ರಹಿಸಿದ್ದಾರಂತೆ ಹಾಗೂ ಇವರು ಕಚೇರಿ ವಿಳಾಸದ ಸ್ಥಳ ಒಂದು ಕಡೆ ಇದ್ದರೆ, ವ್ಯವಹಾರ ಮಾಡುತ್ತಿರುವ ಸ್ಥಳ ಮತ್ತೊಂದು ಆಗಿದೆ ಅಂತೆ.

ಯಾರೇ 1000₹ ಹಣ ಪಾವತಿ ಮಾಡಿ Membership ಮಾಡಿಕೊಳ್ಳುವುದಾದರೆ ಅವರು ಇರುವ ಸ್ಥಳಕ್ಕೆ ಹೋಗಿ ಸದಸ್ಯತ್ವ ಮಾಡಿಕೊಡುತ್ತಾರಂತೆ.

ಹೀಗೆಲ್ಲ ವಂಚನೆ ಆಗುತ್ತಿರುವ ಸಂಬಂಧ ಶಿವಮೊಗ್ಗದಲ್ಲಿ ಸಹಕಾರ ಸಂಘಗಳ ಇಲಾಖೆ ನಿಭಂದಕ ಅಧಿಕಾರಿಗಳ (Cooperative Department ) ಬಳಿ ಈ ರೀತಿಯ ವಂಚನೆ ಆಗುತ್ತಿದೆ ಹೀಗೆಲ್ಲ ಹಣ ಎತ್ತುತ್ತಿದ್ದಾರೆ, ಇವರುಗಳು ಕಚೇರಿಯ GST ನಂಬರ್ ಕಚೇರಿ ಮಾಹಿತಿ ಹಾಗೂ ಹಣ ಪಡೆದವರಿಗೆ ರಶೀದಿ ನೀಡದೆ ಪೆನ್ ಪೇಪರ್ ನಲ್ಲಿ ಕಾರ್ಡ್ ನಲ್ಲಿ ಹಣ ಸಂದಾಯವಾಗಿದೆ ಅಂತ ಬರೆದು ಕೊಡುತ್ತಿದ್ದಾರೆ ಇದರ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಜರುಗಿಸಿ ಎಂದು ಸಾಮಾಜಿಕ ಹೋರಾಟಗಾರಾರೊಬ್ಬರೂ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರೆ, ಈ ವಂಚನೆ ಸಂಬಂಧ ಅಧಿಕಾರಿಗಳು ಉಚಿತ ಸಲಹೆ ನೀಡುವ ಮೂಲಕ ವಂಚನೆ ಆಗುತ್ತಿದೆ, ಅನಿಸಿದರೆ ನಿಮ್ಮ ಹಣ ವಾಪಾಸ್ ಪಡೆದುಕೊಳ್ಳಿ ಎಂದು ಸಲಹೆ ನೀಡುತ್ತಿದ್ದಾರೆ ಎಂಬುದು ಆರೋಪವಾಗಿದೆ.

ಹಾಗೂ ಸ್ವಯಂ ಪ್ರೇರಿತವಾಗಿ ಪರಿಶೀಲನೆಗೆ ಮುಂದಾಗದೆ ದೂರು ಅರ್ಜಿ ನೀಡಿ ನಂತರ ತನಿಖೆ ಮಾಡುವ ಮೂಲಕ ಕ್ರಮ ಜರುಗಿಸುತ್ತೇವೆ ಎಂದು ಸಾಬೂಬು ನೀಡುತ್ತಿದ್ದಾರೆ ಎಂಬ ಮಾಹಿತಿಯಾಗಿದೆ.

ಜನರಿಗೆ ವಂಚನೆ ಆಗಿದೆ ಅಂತೆಲ್ಲ ಮಾಹಿತಿ ಬರುವವರೆಗೂ ಅಧಿಕಾರಿಗಳು ಕ್ರಮ ಜರುಗಿಸುವುದು ಆಗಲಿ ಪರಿಶೀಲನೆ ಮಾಡುವ ಗೋಜಿಗೆ ಹೋಗಲ್ಲವೇನೋ ಎಷ್ಟೋ ಜನರು ವಂಚನೆಗೆಗೊಳಾಗಿ ತೊಂದರೆ ಉಂಟಾದ ನಂತರ ಅಧಿಕಾರಿಗಳು ಕ್ರಮ ಜರುಗಿಸಲು ಮುಂದಾಗುತ್ತರ ಎಂಬುದು ಸದ್ಯದ ಪ್ರಶ್ನೆಯಾಗಿದೆ?

ನಮ್ಮ ಕರ್ನಾಟಕದಲ್ಲಿ ಲಾಟರಿ ಬ್ಯಾನ್ ಆಗಿದ್ದರು ಸಹ ಅದು ಹೇಗೆ ಲಾಟರಿ ಎತ್ತುವ ಪ್ರಕ್ರಿಯೆ ನಡೆಯುತ್ತಿದೆ ಎನ್ನುವ ಪ್ರಶ್ನೆ ಉದ್ಭವವಾಗಿದೆ?

ಕಾನೂನು ಉಲ್ಲಂಘನೆ ಆಗುತ್ತಿರುವ ಕುರಿತು ಹಾಗೂ ಜನಸಾಮಾನ್ಯರು ಅನ್ಯಾಯಕ್ಕೆ ವಂಚನೆಗೆ ಒಳಗಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತು ಕೊಳ್ಳುವ ಮೂಲಕ ಜನಸಾಮಾನ್ಯರು ಈ ರೀತಿಯ ವಂಚನೆಗಳಿಗೆ ಒಳಗಗಬೇಡಿ ಎಂಬ ಸಂದೇಶ ರವಾನಿಸುವ ತುರ್ತು ಅವಶ್ಯಕತೆಯಿದೆ.

ಹಾಗೂ ಕಾನೂನು ರೀತಿಯಲ್ಲಿ ಈ ರೀತಿಯಲ್ಲಿ ಲಾಟರಿ ಮಾಡಲು ಅದು ಯಾವ ಕಾನೂನು ಮೂಲಕ ಅವಕಾಶಯಿದೆ ಎಂಬ ಮಾಹಿತಿ ತಿಳಿಯಬೇಕಿದೆ ಹಾಗೂ ಈ ಸಂಬಂಧ ಅಧಿಕಾರಿಗಳು ಸಮಗ್ರ ತನಿಖೆ ನಡೆಸುವ ಮೂಲಕ ವಂಚನೆ ಆಗುತ್ತಿದ್ದಲ್ಲಿ ಶೀಘ್ರ ಕ್ರಮ ಜರುಗಿಸುವ ಕೆಲಸ ಮಾಡಬೇಕಾದ ಪರಿಸ್ಥಿತಿಯಿದೆ.

Author