ಶಿವಮೊಗ್ಗ | ಗಾಂಜಾ ನಶೆಗೆ ಕಾರು ಪೀಸ್ ಪೀಸ್

ಶಿವಮೊಗ್ಗ

ಶಿವಮೊಗ್ಗದ ಶರಾವತಿ ನಗರದ ಹಂದಿ ಜೋಗಿ ಕ್ಯಾಂಪ್ನಲ್ಲಿ ಮನೆಯ ಮುಂದೆ ನಿಂತಿದ್ದ ಕಾರಿನ ಗಾಜನ್ನು ಪುಡಿಗಟ್ಟಿದ ಗಾಂಜಾ ವ್ಯಸನಿಗಳು ಮುಸುಕುಧಾರಿಯಾಗಿ ಬಂದು ಹಾವಳಿಯಿಟ್ಟಿದ್ದಾರೆ. ಪುಂಡರ ಹಾವಳಿಗೆ ಕಾರಿನ‌ ಗಾಜು ಪುಡಿ ಪುಡಿಯಾಗಿದೆ.

ಸುರೇಶ್ ಎಂಬುವರಿಗೆ ಸೇರಿದ ಸ್ವಿಫ್ಟ್ ಕಾರಿನ‌ ಮುಂದಿನ ಗ್ಲಾಸು ಬಲಗಡೆ ಹಾಗೂ ಹಿಂಬದಿಯ ಕಾರು ಪುಡಿ ಪುಡಿಯಾಗಿದೆ. ನಾಲ್ಕು ತಿಂಗಳ ಹಿಂದಷ್ಟೇ ಹೊಸ ಕಾರನ್ನು ಸುರೇಶ್ ಖರೀದಿಸಿದರು.

ನಿನ್ನೆ ರಾತ್ರಿ 11-45 ಕ್ಕೆ ದುರ್ಘಟನೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಯುವಕರಿಂದ ಕೃತ್ಯ ನಡೆದಿದೆ. ಕಾರಿನ ಗಾಜನ್ನು ಪುಡಿಗಟ್ಟುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ. ಘಟನೆಯಿಂದ ಸುರೇಶ್ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ.

ಶರಾವತಿ ನಗರ ಸುತ್ತಮುತ್ತ ವರ್ಷಕ್ಕೊಮ್ಮೆ ಈ ಘಟನೆಗಳು ನಡೆಯುತ್ತಲೇ ಇವೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತಮಾಡಿದ ಸುರೇಶ್ ಅವರ ಸಂಬಂದಿ ಲೋಕೇಶ್ ಗಾಂಜಾ ನಶೆಯಲ್ಲೊ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಕಬ್ಬಿಣದ ರಾಡಿನಿಂದ ವಾಹನವನ್ನ ಹಾನಿಗೊಳಿಸಿದ್ದಾರೆ. ಅತ್ತಿಗೆಯವರ ಅನಾರೋಗ್ಯಕ್ಕಾಗಿ ಅವರನ್ನ ಹೊತ್ತೊಯ್ಯಲು ಕಾರು ಖರೀದಿಸಲಾಗಿತ್ತು. ಕಿಡಿಗೇಡಿಗಳ ಹಾವಳಿಗೆ ಈ ದುರ್ಘಟನೆ ನಡೆದಿದೆ ಎಂದರು.

ಸುರೇಶ್ ಅವರ ಪತ್ನಿ ಪ್ರತಿಕ್ರಿಯಿಸಿದ್ದು ಶರಾವತಿ ನಗರದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ಮನೆಯಲ್ಲಿ ಮಹಿಳಯರು ಒಬ್ಬರೆ ವಾಸವಾಗಲು ಭಯವಾಗುತ್ತದೆ. ಪೊಲೀಸರ ಬೀಟ್ ಇಲ್ಲದ ಕಾರಣ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದೆ. ವೀಲಿಂಗು, ಗಾಂಜಾ ಶರಾವತಿ ನಗರದಲ್ಲಿ ಹೆಚ್ಚಾಗಿದೆ. ಅವರ ಉದ್ದೇಶವೇನು ಎಂಬುದರ ಬಗ್ಗೆ ಆತಂಕವಿದೆ. ನಮಗೆ ಹೊಡೆಯಲು ಬಂದಿದ್ರಾ ಅಥವಾ ಕಾರನ್ನ ಜ್ಯಾಮ್ ಮಾಡಲು ಬಂದಿದ್ದರಾ ಎಂಬುದು ಆತಂಕ ಮೂಡಿಸಿದೆ ಎಂದಿದ್ದಾರೆ .

Author