ಶಿವಮೊಗ್ಗದಲ್ಲಿ 10 ಕಿಲೋವಾಟ್ ಸಾಮರ್ಥ್ಯದ ಎಫ್ಎಂ ಪ್ರಸಾರಕದ ಉದ್ಘಾಟನಾ ಸಮಾರಂಭ ಜರುಗಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಚೆನ್ನಬಸಪ್ಪ, ನಗರದ ಉದ್ಯಾನವನಗಳು ಹಾಗೂ ಸಾರ್ವಜನಿಕ ಸ್ಥಳಗಳಾದ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಇನ್ನು ಮುಂದೆ ಎಫ್ಎಂ ನೇರ ಪ್ರಸಾರ ಲಭ್ಯವಾಗಲಿದೆ ಎಂದು ತಿಳಿಸಿದರು.

ಇದೇ ವೇಳೆ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ನಾಳೆಯ ಬಿ.ಎಸ್. ಯಡಿಯೂರಪ್ಪ ಅವರ 84ನೇ ಜನ್ಮದಿನಾಚರಣೆಯ ಅಂಗವಾಗಿ ಈ ಉದ್ಘಾಟನೆಯನ್ನು ಅವರಿಗೆ ಅರ್ಪಿಸುತ್ತಿದ್ದೇವೆ ಎಂದು ಹೇಳಿದರು.
2009ರಲ್ಲಿ ಶಿವಮೊಗ್ಗಕ್ಕೆ ಎಫ್ಎಂ ಕೇಂದ್ರ ಅಗತ್ಯವಿದೆ ಎಂಬ ಬೇಡಿಕೆಯನ್ನು ಯಡಿಯೂರಪ್ಪನವರು ಮುಂದಿಟ್ಟಿದ್ದು, ಆ ಪ್ರಯತ್ನದ ಫಲವಾಗಿ ಇಂದು ಸರ್ಕಾರದಿಂದ ಈ ಯೋಜನೆ ಸಾರ್ಥಕಗೊಂಡಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.



