SSLC ಪೂರ್ವ ಸಿದ್ಧತಾ ಪರೀಕ್ಷಾ ಕೊಠಡಿಗೆ ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಭೇಟಿ ; ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಿ ವಿದ್ಯಾರ್ಥಿಗಳಿಗೆ ಧೈರ್ಯದ ನುಡಿ”

ಶಿವಮೊಗ್ಗ

ಶಿವಮೊಗ್ಗ,ಇಂದು ಕೆ.ಆರ್ ಪುರಂನ ಎಸ್.ಈ.ಏ (SEA) ಪ್ರೌಢಶಾಲೆಗೆ ಭೇಟಿ ನೀಡಿ SSLC 3ನೇ ಪೂರ್ವ ಸಿದ್ಧತಾ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಪರೀಕ್ಷೆ ಬರೆಯುತ್ತಿರುವ ಮಕ್ಕಳೊಂದಿಗೆ ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಸಂವಹನ ನಡೆಸಿದರು.

ಮಕ್ಕಳ ಕಣ್ಣಿನಲ್ಲಿರುವ ಆತ್ಮವಿಶ್ವಾಸ ಮತ್ತು ಸಾಧಿಸುವ ಛಲ ಕಂಡು ಹರ್ಷ ವ್ಯಕ್ತಪಡಿಸಿದ ಸಚಿವರು. ನಂತರ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಮಾತನಾಡುತ್ತಾ ಪೂರ್ವ ಸಿದ್ಧತಾ ಪರೀಕ್ಷೆಯು ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಇರುವ ಒಂದು ಅವಕಾಶ.

ಆದರೆ ಇಲ್ಲಿ ಮಾಡುವ ತಪ್ಪುಗಳನ್ನು ವಾರ್ಷಿಕ ಪರೀಕ್ಷೆಯಲ್ಲಿ ಬರದಂತೆ ನೋಡಿಕೊಳ್ಳಿ. ನೀವೆಲ್ಲಾ ವರ್ಷವಿಡೀ ಓದಿದ್ದೀರಿ ನಿಮಗೆ ಉತ್ತರಗಳು ತಿಳಿದಿರುತ್ತವೆ ಸ್ವಲ್ಪ ಯೋಚಿಸಿ ಸರಿಯಾದ ಉತ್ತರ ಬರೆಯಿರಿ ಎಂದು ಸಲಹೆ ನೀಡಿದರು.

ನಂತರ ಪರೀಕ್ಷೆ ಬರೆಯುತ್ತಿರುವ ಎಲ್ಲ ಮಕ್ಕಳಿಗೆ ಶುಭ ಹಾರೈಸಿದರು.

Author