ಶಿವಮೊಗ್ಗ,ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ (ರಿ) ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧ್ಯಕ್ಷರಾದ ಕಲ್ಲೂರ್ ಮೇಘರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸ್ಮಾರ್ಟ್ ಕಾರ್ಡ್ ಜಾರಿಗೆ ತರಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಿಪಡಿಸಿದರು.
ಹಾಗೂ ಜಿಲ್ಲಾಧಿಕಾರಿಗಳ ಮುಖೇಣ ಮುಖ್ಯಮಂತ್ರಿಗಳಿಗೆ KSRTC Bus ನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಮತ್ತೊಂದು ಸ್ಮಾರ್ಟ್ ಕಾರ್ಡ್ ಅವಶ್ಯಕತೆಯಿಲ್ಲ ಇದೊಂದು ಅವೈಜ್ಞಾನಿಕ ಯೋಜನೆ ಎಂದು ದೂರಿದರು.
ಮುಂದುವರೆದು ಈ ಕೆಳಕಂಡ ಮಾಹಿತಿ ತಿಳಿಸಿದರು, ಕನಾಟಕ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಶಕ್ತಿ ಯೋಜನೆ ಅಡಿಯಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ತಮ್ಮ ಸರ್ಕಾರ ಕಳೆದ ವಾರ ತೀರ್ಮಾನಿಸಿರುವುದು ಅವೈಜ್ಞಾನಿಕ, ಅಪ್ರಸ್ತುತ ಹಾಗೂ ಕಾರ್ಯಸಾದುವಲ್ಲದ ಕ್ರಮವಾಗಿರುವುದರಿಂದ ಕೂಡಲೆ ಈ ನಿರ್ಧಾರದಿಂದ ತಮ್ಮ ಸರ್ಕಾರ ಹಿಂದೆ ಸರಿಯಬೇಕೆಂದು ನಮ್ಮ ಟ್ರಸ್ಟ್ ಒತ್ತಾಯಿಸುತ್ತದೆ ಎಂದು ತಿಳಿಸಿದೆ .
ಈಗಾಗಲೇ ಕೇಂದ್ರ ಸರ್ಕಾರದ ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರವು (Unique Identification Authority of India) ದೇಶಾದ್ಯಂತ ಎಲ್ಲಾ ರಾಜ್ಯಗಳ, ಎಲ್ಲಾ ಜಿಲ್ಲೆಗಳ, ಎಲ್ಲಾ ತಾಲ್ಲೂಕುಗಳ ಹಾಗೂ ಕುಗ್ರಾಮಗಳ ಜನತೆಗೆ ಈಗಾಗಲೇ ಆಧಾರ ಗುರುತಿನ ಚೀಟಿಯನ್ನ ವಿತರಿಸಿದೆ.
ಅಲ್ಲದೆ ಕೇಂದ್ರದ ಚುನಾವಣಾ ಆಯೋಗ ಹಾಗೂ ರಾಜ್ಯದ ಚುನಾವಣಾ ಆಯೋಗಗಳು ಈಗಾಗಲೇ ರಾಜ್ಯಾದ್ಯಂತ ಪಟ್ಟಣ ಹಾಗೂ ಕುಗ್ರಾಮಗಳ ಜನತೆಗೆ ಚುನಾವಣಾ ಗುರುತಿನ ಚೀಟಿಯನ್ನ ನೀಡಿದೆ. ಈ ಆಧಾರ ಚೀಟಿ ಅಥವಾ ಚುನಾವಣಾ ಗುರುತಿನ ಚೀಟಿಗಳನ್ನು ಬಳಸಿಕೊಂಡು ರಾಜ್ಯದಲ್ಲಿ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವಾರು ಯೋಜನೆಗಳನ್ನ ಜನತೆ ಪಡೆಯುತ್ತಿದ್ದಾರೆ.
ಇದೇ ರೀತಿ ಶಕ್ತಿ ಯೋಜನೆಯ ಫಲಾನುಭವಿಗಳು ರಾಜ್ಯ ಸರ್ಕಾರದ ಸಾಮಾನ್ಯ ದರದ ಕೆ ಎಸ್ ಆರ್ ಟಿ ಸಿ ಬಸ್ಗಳಲ್ಲಿ ಎರಡುವರೆ ವರ್ಷಗಳಿಂದ ಉಚಿತವಾಗಿ ಆಧಾರ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿಗಳನ್ನು ಬಳಸಿಕೊಂಡು ಪ್ರಯಾಣ ಮಾಡುತ್ತಿದ್ದಾರೆ.
ಆಧಾರ ಕಾರ್ಡ್ ಅಲ್ಲದೆ ಮತಪತ್ರದ ಗುರುತಿನ ಚೀಟಿ ಅಥವಾ ಇತರೆ ಅಧಿಕೃತ ದಾಖಲೆಗಳನ್ನು ತೋರಿಸಿ ಮಹಿಳೆಯರು ಶಕ್ತಿ ಯೋಜನೆಯಡಿಯಲ್ಲಿ ಉಚಿತವಾಗಿ ದೇವಸ್ಥಾನಗಳು, ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ಪ್ರವಾಸಿ ತಾಣಗಳಿಗೆ ಉಚಿತವಾಗಿ ಪ್ರಯಾಣವನ್ನ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ಉದ್ದೇಶಿಸಿರುವ ಸ್ಯಾಟ್ ಕಾರ್ಡ್ ಗಳನ್ನ ಕಂದಾಯ ಇಲಾಖೆ ಅಥವಾ ಸಾರಿಗೆ ಇಲಾಖೆ ಮೂಲಕ ರಾಜ್ಯಾದ್ಯಂತ ಪ್ರತಿಯೊಬ್ಬ ಮಹಿಳೆಯರಿಗೂ ವಿತರಿಸುವುದು ಅಸಾಧ್ಯವಾದ ಸಂಗತಿಯಾಗಿದೆ ಎಂದು ದೂರಿದರು.
ಈ ಉದ್ದೇಶಿತ ಸ್ಮಾರ್ಟ್ ಕಾರ್ಡ್ ವಿತರಣೆಯ ಯೋಜನೆಯಿಂದ ಬಹುತೇಕ ಶಕ್ತಿ ಯೋಜನೆಯ ಮಹಿಳೆಯರು ವಂಚಿತರಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ .

ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಅಡಿಯಲ್ಲಿ ಎಸ್ ಸಿ ಮತ್ತು ಎಸ್ ಟಿ ಗಳ ಮಹಿಳೆಯರು ಎಷ್ಟು ಪ್ರಮಾಣದಲ್ಲಿ ಪ್ರಯಾಣ ಮಾಡಿದ್ದಾರೆ ಎಂಬ ಅಂಕಿಅಂಶ ಬೇಕಾದರೆ, ಅದಕ್ಕೆ ಬೇರೆದೇ ಆದಂತಹ ಮಾರ್ಗವನ್ನು ಕಂಡುಕೊಳ್ಳಲಿ ಎಂದು ಟ್ರಸ್ಟ್ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಿಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಪತ್ರ ಬರೆದು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕಲ್ಲೂರ್ ಮೇಘರಾಜ್,G. M. ವಿಜಯ್ ಕುಮಾರ್ ಮಾಧಪ್ಪ, ಆಲಿಮ್ ಖಾನ್, ಜನಮೆಜಿ ರಾವ್, H N ವೆಂಕಟೇಶ್, ಬಸವರಾಜ್ ಇನ್ನಿತರರು ಉಪಸ್ಥಿತರಿದ್ದರು.



