ಟಿ-20 ಕ್ರಿಕೆಟ್ ಯುದ್ಧದಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋತ ಪಾಕಿಸ್ತಾನ

ಕ್ರೀಡೆ

ಶ್ರೀಲಂಕಾ,ಕೊಲಂಬೋ, ಪಾಕಿಸ್ತಾನದ ವಿರುದ್ಧ ಟಿ-20 ಯುದ್ಧದಲ್ಲಿ ನಿರೀಕ್ಷೆಯಂತೆ 61 ರನ್‌ಗಳ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ.

ದಾಖಲೆಯ ಜಯದೊಂದಿಗೆ ಗ್ರೂಪ್‌ ಎ ವಿಭಾಗದಲ್ಲಿ 6 ಅಂಕ ಸಂಪಾದಿಸಿ ಸೂಪರ್‌ 8 ಪ್ರವೇಶಿಸಿದೆ.

ಗೆಲ್ಲಲು 176 ರನ್‌ಗಳ ಕಠಿಣ ಗುರಿಯನ್ನು ಪಡೆದ ಪಾಕಿಸ್ತಾನ 18 ಓವರ್‌ಗಳಲ್ಲಿ114 ರನ್‌ ಗಳಿಸಿ ಹೀನಾಯ ಸೋಲು ಕಂಡಿದೆ.

ಪಾಕಿಸ್ತಾನದ ಪತನಕ್ಕೆ ಮುನ್ನುಡಿ ಬರೆದವರು ಹಾರ್ದಿಕ್‌ ಪಾಂಡ್ಯ. ಮೊದಲ ಓವರ್‌ನಲ್ಲೇ ಸಾಹಿಬ್‌ಜಾದಾ ಫರ್ಹಾನ್ ಶೂನ್ಯಕ್ಕೆ ಔಟ್‌ ಆದರೆ ಬಂದ ಸೈಮ್ ಅಯೂಬ್ 6, ನಾಯಕ ಸಲ್ಮಾನ್ ಆಘಾ ಅವರನ್ನು ಬುಮ್ರಾ ಔಟ್‌ ಮಾಡುತ್ತಾರೆ.

ತಂಡದ ಮೊತ್ತ 34 ಆಗಿದ್ದಾಗ 4 ವಿಕೆಟ್‌ ಕಳೆದುಕೊಂಡಿದ್ದಾಗ ಪಾಕ್‌ ಸೋಲು ಖಚಿತವಾಗಿತ್ತು.ಪಾಕ್‌ ಪರ ಉಸ್ಮಾನ್‌ ಖಾನ್‌ 44 ರನ್‌ (34 ಎಸೆತ, 6 ಬೌಂಡರಿ, 1 ಸಿಕ್ಸ್‌) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.

ಭಾರತದ ಪರ ಪಾಂಡ್ಯ, ಬುಮ್ರಾ ಅಕ್ಷರ್‌ ಪಟೇಲ್‌, ವರುಣ್‌ ಚಕ್ರವರ್ತಿ, ತಲಾ ಎರಡು ವಿಕೆಟ್‌ ಪಡೆದರು. ಕುಲದೀಪ್‌ ಯಾದವ್‌, ತಿಲಕ್‌ ವರ್ಮಾ ತಲಾ 1 ವಿಕೆಟ್‌ ಪಡೆದರು.

ಈ ಪಂದ್ಯಕ್ಕೆ ಮೊದಲು 2022 ರಲ್ಲಿ ಪಾಕ್‌ ವಿರುದ್ಧ ಮೆಲ್ಬರ್ನ್‌ನಲ್ಲಿ ಭಾರತ 160 ರನ್‌ ಗಳಿಸಿದ್ದೇ ದೊಡ್ಡ ಮೊತ್ತವಾಗಿತ್ತು. ಈಗ 175 ರನ್‌ ಹೊಡೆಯುವ ಮೂಲಕ ಅತಿ ಹೆಚ್ಚು ರನ್‌ ಹೊಡದ ದಾಖಲೆ ಬರೆದಿದೆ.

Author