ಶಿವಮೊಗ್ಗ,ರಾಜ್ಯ ಪೊಲೀಸ್ ಇಲಾಖೆಯ ಹೊರಡಿಸಿರುವ ವರ್ಗಾವಣೆ ಪಟ್ಟಿಯಲ್ಲಿ ಶಿವಮೊಗ್ಗದ ಅಧಿಕಾರಿಗಳ ಹೆಸರು ಸಹ ಇವೆ. ವರ್ಗಾವಣೆ ಲಿಸ್ಟ್ ಗಮನಿಸಿದಾಗ ಜಿಲ್ಲೆಯ ದೊಡ್ಡಪೇಟೆ, ಜಯನಗರ ಮತ್ತು ಮಹಿಳಾ ಠಾಣೆಗೆ ಹೊಸ ಇನ್ಸ್‌ಪೆಕ್ಟರ್‌ಗಳ ಆಗಮನವಾಗಿದೆ.
ಓರ್ವ ಡಿವೈಎಸ್‌ಪಿ (DySP) ಮತ್ತು ಇಬ್ಬರು ಇನ್ಸ್‌ಪೆಕ್ಟರ್‌ಗಳು ಜಿಲ್ಲೆಯಿಂದ ವರ್ಗಾವಣೆಗೊಂಡಿದ್ದಾರೆ.
ಶಿವಮೊಗ್ಗದ ಸೈಬರ್ ಪೊಲೀಸ್ ವಿಭಾಗದಲ್ಲಿದ್ದ CCPS ಡಿವೈಎಸ್‌ಪಿ ಕೃಷ್ಣಮೂರ್ತಿ ಕೆ. ಅವರನ್ನು ದಾವಣಗೆರೆಯ ಪೂರ್ವ ವಲಯ ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಿದ್ದೇಗೌಡ ಹೆಚ್.ಎಂ.ರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.
ಸತ್ಯನಾರಾಯಣ ವೈ. ದೊಡ್ಡಪೇಟೆಗೆ ನೂತನ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಇವರು ಈ ಹಿಂದೆ ಕರ್ನಾಟಕ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಜಯನಗರ ಪೊಲೀಸ್ ಠಾಣೆಗೆ ರವಿ ಸಂಗನಗೌಡ ಪಾಟೀಲ್ ಅವರು ವರ್ಗಾವಣೆಯಾಗಿ ಬಂದಿದ್ದಾರೆ. ಈ ಮೊದಲು ಇವರು ದೊಡ್ಡ ಪೇಟೆ ವೃತ್ತದಲ್ಲಿ ಇನ್ಸ್‌ಪೆಕ್ಟರ್ ಆಗಿದ್ದರು.
ಮಹಿಳಾ ಪೊಲೀಸ್ ಠಾಣೆಗೆ ಸುರೇಶ್ ಇನ್ಸ್‌ಪೆಕ್ಟರ್ ಆಗಿ ಆಗಮಿಸಿದ್ದಾರೆ. ಇವರು ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡದಲ್ಲಿ (SIT) ಕಾರ್ಯನಿರ್ವಹಿಸುತ್ತಿದ್ದರು.
ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಭರತ್ ಕುಮಾರ್ ಡಿ.ಆರ್. ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರಿಗೆ ಸದ್ಯ ಯಾವುದೇ ಸ್ಥಳ ನಿಯುಕ್ತಿಗೊಳಿಸಿಲ್ಲ



