ಶಿವಮೊಗ್ಗ,ನಗರದ ಮಲ್ಲಿಕಾರ್ಜುನ ಚಿತ್ರಮಂದಿರದ ಎದುರಿಗೆ ಇರುವ ಸುಲ್ತಾನ್ ಗೋಲ್ಡ್ ಅಂಡ್ ಡೈಮಂಡ್ ಬಿಲ್ಡಿಂಗ ಅನ್ನು ಮಹಾನಗರ ಪಾಲಿಕೆ ವಶಕ್ಕೆ ಪಡೆದಿದ್ದು ಇನ್ನು ಮುಂದೆ ಈ ಬಿಲ್ಡಿಂಗ್ ಮಹಾನಗರ ಪಾಲಿಕೆಯ ಆಸ್ತಿಯಾಗಿರುತ್ತದೆ.
ಈ ಹಿಂದೆ ಮಹಾನಗರ ಪಾಲಿಕೆಯ ಮಾಜಿ ಮೆಯರ್ ಮರಿಯಪ್ಪನವರ ಮಕ್ಕಳ ಹೆಸರಿಗೆ ಇದ್ದ ಬಿಲ್ಡಿಂಗ್ ವಿವಾದದ ಕೇಂದ್ರ ಬಿಂದುವಾಗಿತ್ತು.
ಈ ಬಿಲ್ಡಿಂಗ್ ಒತ್ತುವರಿ ತೆರವುಗೊಳಿಸುವಂತೆ ಶಿವಮೊಗ್ಗ ನಾಗರಿಕಾ ಹಿತರಕ್ಷಣಾ ವೇದಿಕೆ ಅಂದಿನ ಪಾಲಿಕೆಗೆ ದೂರನ್ನು ನೀಡಿತ್ತು ಆದರೆ ನಂತರ ಇಡೀ ಪ್ರಕರಣದ ಚಿತ್ರಣವೇ ಬದಲಾಯಿತು ಕಟ್ಟಿರುವ ಬಿಲ್ಡಿಂಗ್ ಅನಧಿಕೃತವಾಗಿದ್ದು ಇದು ಮಹಾನಗರ ಪಾಲಿಕೆಯ ಸೊತ್ತಾಗಿದ್ದು ಅತಿಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಮರಿಯಪ್ಪನವರು ತಮ್ಮ ಮಕ್ಕಳ ಹೆಸರಿಗೆ ಮಾಡಿಸಿದ್ದಾರೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಸದಸ್ಯರು ಮಾನ್ಯ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು ಸುದೀರ್ಘ ವಿಚಾರಣೆಯ ನಂತರ ಕೊನೆಗೂ ಈ ಸ್ವತ್ತು ಮಹಾನಗರ ಪಾಲಿಕೆಗೆ ಸೇರಿದ್ದು ಮಹಾನಗರ ಪಾಲಿಕೆಯವರು ಇದನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು ಎನ್ನುವ ಆದೇಶವನ್ನು ನೀಡಿತ್ತು.
ಇದೀಗ ಶಿವಮೊಗ್ಗ ಮಹಾನಗರಪಾಲಿಕೆ ಈ ಸ್ವತ್ತನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಬೋರ್ಡ್ ಕೂಡ ಅಳವಡಿಸಿದ್ದಾರೆ.



