ಶಿವಮೊಗ್ಗ | ಕೇಂದ್ರ ಕಾರಾಗೃಹದಲ್ಲಿ ಬೀಡಿ, ಸಿಗರೇಟು, ಮೊಬೈಲ್ ಮತ್ತು ಮೊಬೈಲ್ ಚಾರ್ಜ್ ರ್ ಗಳನ್ನ ಬಿಸಾಕಿದ್ದ ಆರೋಪಿಗಳ ಬಂಧನ

ಶಿವಮೊಗ್ಗ

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಬೀಡಿ, ಸಿಗರೇಟು, ಮೊಬೈಲ್ ಮತ್ತು ಮೊಬೈಲ್ ಚಾರ್ಜ್ ರ್ ಗಳನ್ನ ಬಿಸಾಕಿದ ಪ್ರಕರಣಕ್ಕೆ ಬಮಸಂಬಂಧಿಸಿದಂತೆ ಮೂವರನ್ನ ತುಂಗ ನಗರ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ: 30/01/2026 ರಂದು ಕೇಂದ್ರ ಕಾರಾಗೃಹ ಸೋಗಾನೆ ಒಳಗಡೆ ಯಾರೋ ವ್ಯಕ್ತಿಗಳು ಮೊಬೈಲ್, ಸಿಗರೇಟ್ ಹಾಗೂ ಬೀಡಿಗಳನ್ನು ಕಪ್ಪು ಬಣ್ಣದ ಗಮ್ ಟೇಪ್ ನಿಂದ ಪ್ಯಾಕ್ ಮಾಡಿ ಎಸೆದಿದ್ದು ಈ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ.ರಂಗನಾಥ್ ರವರು ನೀಡಿದ ದೂರಿನ ಮೇರೆಗೆ

ದಿನಾಂಕ: 31/01/2026 ರಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 66/2026 ಕಲಂ: 42 ಕರ್ನಾಟಕ ಕಾರಾಗೃಹ (ತಿದ್ದುಪಡಿ) ಕಾಯ್ದೆ-2022 ಅನ್ವಯ ಪ್ರಕರಣ ದಾಖಲಿಸಿಕೊಂಡು, ಮೊಬೈಲ್‌ ಫೋನ್‌, ಬೀಡಿ ಹಾಗೂ ಸಿಗರೇಟ್‌ ಅನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಲಾಗಿತ್ತು.

ಪ್ರಕರಣದಲ್ಲಿ ಆರೋಪಿತರಾದ ಟಿಪ್ಪುನಗರದ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಎ1- ಇಮ್ರಾನ್ ಪಾಷಾ @ ಇಮ್ಮು ಬಿನ್ ಅಮಾನುಲ್ಲಾ, (25), ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಎ2 ಆರೋಪಿ ಸೈಯ್ಯದ್ ಮಲ್ಲಿಕ್ @ ತಬ್ರೇಜ್ @ ತಂಬಲ್ ಬಿನ್ ಆದಿಲ್ ಪಾಷಾ, (22) ಮತ್ತು ಎ 3-ಅಲ್ಲಾ ಬಕಶ್ @ ಪೊಟ್ಯಾಟೋ ಬಿನ್ ಅಮೀರ್ ಅಹಮ್ಮದ್, 20 ವರ್ಷ, ಟೈಲ್ಸ್ ಕೆಲಸ. ವಾಸ ಅಂಬೇಡ್ಕರ್ ನಗರ, ಪದ್ಮಾ ಟಾಕೀಸ್ ಹಿಂಭಾಗ, ಶಿವಮೊಗ್ಗ ಇರವರನ್ನು ಬಂಧಿಸಲಾಗಿದೆ.

Author