ಶಿವಮೊಗ್ಗ | ಗಣರಾಜ್ಯೋತ್ಸವದಲ್ಲಿ ರಾಷ್ಟ್ರಪತಿ ಪದಕ ಭಾಜನರಾದ ಪೊಲೀಸ್ ಉಪನಿರೀಕ್ಷಕರಾದ ಶಕುಂತಲಾ ಅವರಿಗೆ ಎಸ್ಪಿ ಅಭಿನಂದನೆ

ಶಿವಮೊಗ್ಗ

ಶಿವಮೊಗ್ಗ,ಪೊಲೀಸ್ ಅಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ಸಲ್ಲಿಸಿದ ಅತ್ಯುತ್ತಮ ಶ್ಲಾಘನೀಯ ಸೇವೆಗಾಗಿ, 2026ನೇ ಸಾಲಿನ ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ಮಾನ್ಯ ರಾಷ್ಟ್ರಪತಿಗಳ ಪದಕಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯ ಟ್ರಯಲ್ ಮಾನಿಟರಿಂಗ್ ಸೆಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಕುಂತಲಾ, ಪೊಲೀಸ್ ಉಪ ನಿರೀಕ್ಷಕರು ಭಾಜನರಾಗಿದ್ದು,

ಇವರಿಗೆ ಜ. 31- ರಂದು ಬೆಳಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸಿಸಿ ಅಭಿನಂದಿಸಲಾಯಿತು.

ಎಸ್ ಪಿ‌ ನಿಖಿಲ್ ಅವರು ಶಕುಂತಲಾ ಅವರನ್ನು ಗೌರವಿಸಿದರು.

Author