ಶಿವಮೊಗ್ಗ, ನಗರದ ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾಜಿ ಶಾಸಕ ಜಿ.ಡಿ.ನಾರಾಯಣಪ್ಪ ಹಾಗೂ ಉಪಾಧ್ಯಕ್ಷರಾಗಿ ಕಲಗೋಡು ರಾಮಕೃಷ್ಣ ಆಯ್ಕೆಯಾಗಿದ್ದಾರೆ.
ಸಹಕಾರಿ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ನಾರಾಯಣಪ್ಪ ಬಣಕ್ಕೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಒಲಿದಿವೆ.
ನಾರಾಯಣಪ್ಪ ಮತ್ತು ರಾಮಕೃಷ್ಣ ಅವರು ತಲಾ 11 ಮತಗಳನ್ನು ಪಡೆದು ವಿಜಯದ ನಗೆ ಬೀರಿದ್ದಾರೆ.ಎದುರಾಳಿ ಪ್ರೊ.ಕಲ್ಲನ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಲ್ಲನ ಮತ್ತುಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಪ್ರದೀಪ್ ಹೆಬ್ಬರು ಅವರು ತಲಾ 5 ಮತ ಪಡೆಯಲಷ್ಟೇ ಶಕ್ತರಾದರು.

ಜ.18ರಂದು ನಡೆದ ನಿರ್ದೇಶಕರ ಚುನಾವಣೆಯಲ್ಲಿ ಜಿ.ಡಿ.ಎನ್ 200 ಮೇಲುಗೈ ಸಾಧಿಸಿತ್ತು. ಗುರುವಾರ ಒಟ್ಟು 17 ಸದಸ್ಯ ಬಲದ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.ಜಿಲ್ಲೆಯಲ್ಲಿ ಪ್ರಭಾವಿಯಾಗಿರುವ ಈಡಿಗ ಪಂಗಡವನ್ನು ಪ್ರತಿನಿಧಿಸುವ ಸೊಸೈಟಿಯ ಚುನಾವಣೆಯು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ನಿರ್ದೇಶಕರ ಚುನಾವಣೆಯನ್ನು ಅವಿರೋಧವಾಗಿ ಮಾಡುವ ಪ್ರಯತ್ನ ನಡೆದಿತ್ತಾದರೂ ಕೊನೆ ಹಂತದಲ್ಲಿ ಅದು ವಿಫಲವಾಗಿತ್ತು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧಆಯ್ಕೆಗೆ ಅವಕಾಶ ಇದ್ದರೂ, ಅಲ್ಲಿಯೂ ಚುನಾವಣೆ ನಡೆದಿರುವುದು ಸೊಸೈಟಿ-ಯಲ್ಲಿರುವ ಪರಸ್ಪರ ಪೈಪೋಟಿಯನ್ನು ಬಿಂಬಿಸಿದೆ.ನಾರಾಯಣಪ್ಪ ಅವರು ಈ ಹಿಂದೆ ಒಮ್ಮೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಕಲಗೋಡು ರಾಮಕೃಷ್ಣ ಇದೇ ಮೊದಲ ಬಾರಿ ನಿರ್ದೇಶಕರಾಗಿ ಮೂರನೇ ಅತೀ ಹೆಚ್ಚು ಮತ ಪಡೆಯುವ ಮೂಲಕ ಆಯ್ಕೆಯಾಗಿದ್ದರು.ಚುನಾವಣಾ-ಅವರು ಮೊದಲ ಅವಧಿಯಲ್ಲಿಯೇ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧಿಕಾರಿಯಾಗಿ ಸಹಕಾರ ಸಂಘಗಳ ಉಪನಿಬಂಧಕರ ನರಸಿಂಹಮೂರ್ತಿ ನಿರ್ವಹಿಸಿದ್ದರು



