ಬೆಳ್ಳಿ ಗದೆ ನೀಡಿ ಸನ್ಮಾನಿಸಿರುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣ : ಮಂಜು ಬಾಬು ಸಮನ್ವಯಾಧಿಕಾರಿ

ಚಿತ್ರದುರ್ಗ

ಶಿವಮೊಗ್ಗ, ನನ್ನ ಜೀವನದ ಅದ್ಬುತ ಮತ್ತು ಅವಿಸ್ಮರಣೀಯ ಕ್ಷಣವಾಗಿದೆ” ಬೆಳ್ಳಿ ಗದೆ ” ನೀಡಿ ಸನ್ಮಾನ ಮಾಡಿ ಗೌರವಿಸಿದ, ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಹಾಗೂ ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಮೇಗರವಳ್ಳಿಯ ಸರ್ವ ಸದಸ್ಯರು ಹಾಗೂ ಜೀವದ ಸ್ನೇಹಿತರು, ಆಪತ್ಪಾಂಧವ ವಿಜೇತಣ್ಣ ಮತ್ತು ಕುಟುಂಬ ವರ್ಗಕ್ಕೆ ಹಾಗೂ ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ನ ಸರ್ವ ಕ್ರೀಡಾ ಪಟುಗಳಿಗೂ ನನ್ನ ವೈಯಕ್ತಿಕವಾಗಿ ಹಾಗೂ ನನ್ನ ಕುಟುಂಬದ ಪರವಾಗಿ ಅನಂತ ಅನಂತ ಧನ್ಯವಾದಗಳನ್ನು ಮಂಜು ಬಾಬು ಸಮನ್ವಯಾಧಿಕಾರಿಗಳು ಚಳ್ಳಕೆರೆ ತಾ ಚಿತ್ರದುರ್ಗ ಜಿಲ್ಲೆ ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಮುಂದಿವೆರೆದು ಮಾತನಾಡಿದ ಅವರು,ನಾನು ನನ್ನ ತಂಡದ ಜೊತೆಗೆ ಎಲೆ ಮರೆಯ ಕಾಯಿಯಂತೆ ನಿಸ್ವಾರ್ಥವಾಗಿ ಸರ್ಕಾರಿ ಶಾಲೆಗಳ ಅಭ್ಯುದಯಕ್ಕೆ, ದುಡಿದ ಪುಣ್ಯದ ಕೆಲಸ ಸರ್ಕಾರಿ ಶಾಲೆಗಳ ಮಕ್ಕಳ ನಮ್ಮ ನಿಸ್ವಾರ್ಥ ಸೇವೆಗೆ ಇದಕ್ಕಿಂತ ಹೆಚ್ಚಿನ ಬೆಲೆ ಕಟ್ಟಲು ಸಾಧ್ಯವಿಲ್ಲವೆಂದರು.

ನನ್ನ ಮಕ್ಕಳಿಗೆ, ಶಿಕ್ಷಕರಿಗೆ, ಅಪರೂಪದ ನನ್ನ ಮತ್ತು ವಿಜೇತಣ್ಣನ ಸ್ನೇಹಕ್ಕೆ ಈ ಗೌರವ ಅರ್ಪಣೆಯನ್ನ ಸಲ್ಲಿಸುತ್ತೇನೆ ಎಂದರು.

ಕೊನೆಯಲ್ಲಿ ‌ಭಗವಂತ ಆಂಜನೇಯಯನ ಕೃಪಾಶಿರ್ವಾದದಿಂದ ಈ ಒಂದು ಗೌರವಕ್ಕೆ ಭಾಗಿಯಾಗಿದ್ದೇನೆ ಎಂದು ತಿಳಿಸಿರುತ್ತಾರೆ.

Author