ಶಿವಮೊಗ್ಗ ನಗರದಲ್ಲಿ ನೂತನವಾಗಿ ಜಗಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆಯಾಗಿದೆ. ಟ್ರಸ್ಟ್ ನ ಮುಖ್ಯಸ್ಥರಾದ ನಾಗರತ್ನಮ್ಮ ಅವರು ಟ್ರಸ್ಟ್ ನ ಉದ್ದೇಶ ಕುರಿತು ಸಭೆಯಲ್ಲಿ ತಿಳಿಸಿದರು.

ನಂತರ ಈ ಒಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅರ್ಚನ ನಿರಂಜನ್ ಮಾತನಾಡಿ ಹೆಣ್ಣಮಕ್ಕಳು ಮನೆಯಲ್ಲಿ ಮಗಳಾಗಿ ಸೊಸೆಯಾಗಿ ಸಮಾಜದಲ್ಲಿ ಮಹಿಳೆಯರು ಪಾತ್ರದ ಕುರಿತಾಗಿ ವಿವರಿಸುವ ಮೂಲಕ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸೈ ಅನಿಸಿಕೊಂಡಿದ್ದಾರೆ ಹಾಗೂ ಮಹಿಳಾ ಪ್ರಾಮುಖ್ಯತೆ ಕುರಿತು ತಿಳಿಸಿದರು.

ನಂತರ ಮಹಾನಗರ ಪಾಲಿಕೆಯ ಅಧಿಕಾರಿ ಅನುಪಮ ಮಾತನಾಡಿ ಈ ಒಂದು ಕಾರ್ಯಕ್ರಮಕ್ಕೆ ಅಹ್ವಾನ ನೀಡಿದ್ದು ಸಂತಸವಾಗಿದೆ ಎಂದು ತಿಳಿಸಿದರು. ಹಾಗೂ ಈ ಒಂದು ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನಿಸಲಾಯಿತು.ಹಾಗೂ ಟ್ರಸ್ಟ್ ನ ನಾಗರತ್ನ ಅವರಿಗೆ ಕೂಡ ಸನ್ಮಾನ ಮಾಡುವ ಮೂಲಕ ಶುಭ ಕೊರಿದಿರು.
ಈ ಒಂದು ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತ ಬಂಡಿ,ಅರ್ಚನ ನಿರಂಜನ್, ಸ್ಟೇಲ್ಲಾ ಮಾರ್ಟೀನ್, ಮಹಾನಗರ ಪಾಲಿಕೆ ಅಧಿಕಾರಿ ಅನುಪಮ ಹಾಗೂ ನಳಿನ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



