ಶಿವಮೊಗ್ಗ | ರಂಜಿತ ಎಸ್. ವಿ. ಗೆ ರಾಜ್ಯ ಯುವ ಪ್ರಶಸ್ತಿ

ಶಿವಮೊಗ್ಗ

ಶಿವಮೊಗ್ಗ,ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಯುವಜನ ವತಿಯಿಂದ ಕನ್ನಡ ರಾಜ್ಯ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಬಾಲಾಜಿ ಅವರ ನೇತೃತ್ವದಲ್ಲಿ ನೀಡುವ ‘ಯುವ ಸಂಭ್ರಮ 2026’ ‘ರಾಜ್ಯ ಯುವ ಪ್ರಶಸ್ತಿ 2025-26’ಕ್ಕೆ ಶಿವಮೊಗ್ಗ ಜಿಲ್ಲಾ ಜಾನಪದ ಪರಿಷತ್, ಯುವ ಬ್ರಿಗೇಡ್ ಜಾನಪದ ಕಲಾವಿದೆ ಹಾಗೂ ನಿರೂಪಕಿ ರಂಜಿತ ಎಸ್ ವಿ ಆಯ್ಕೆಯಾಗಿದ್ದಾರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜನವರಿ 18ರಂದು ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪಂಜದಲ್ಲಿ ನೆರವೇರಿದ್ದು, ಸಮಾಜ ಸೇವೆ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ, ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಯುವಜನ ಒಕ್ಕೂಟ ಮಂಗಳೂರು ಹಾಗೂ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇವರ ಸಂಯುಕ್ತ ಆಶಯದಲ್ಲಿ ‘ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ.

ತಮ್ಮಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ಮೂಡಿಬರಲಿ ಎಂದು ಭವಿಷ್ಯದ ದಿನಗಳಿಗೆ ಎಂದು ರಾಜ್ಯ ಯುವ ಒಕ್ಕೂಟವು ಶುಭ ಹಾರೈಸಿದೆ.

ಇನ್ನು ರಂಜಿತ ಶಿವಮೊಗ್ಗ ಜಿಲ್ಲೆಯ ಡಿವಿಎಸ್ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಡಿವಿಎಸ್ ಆಡಳಿತ ಮಂಡಳಿ, ಶಿವಮೊಗ್ಗ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಹಾಗೂ ಡಿವಿಎಸ್ ಪದವಿ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಭಿನಂದಿಸಿದ್ದು, ಇದು ಕುವೆಂಪು ವಿಶ್ವವಿದ್ಯಾಲಯಕ್ಕೂ ಹೆಮ್ಮೆಯ ಕ್ಷಣವಾಗಿದೆ.

Author