ಹಾವೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಸಚಿವ ಸಂಪುಟದ ವಿಸ್ತಾರಣೆ ಮಾಡೋದು ಸಿ.ಎಂ ಮತ್ತು ಪಕ್ಷದ ಹೈಕಮಾಂಡ್ ಬಿಟ್ಟಿದ್ದು, ಯಾರನ್ನ ಸೇರಿಸಬೇಕು ಅನ್ನೋದು ಅವರೆ ತೀರ್ಮಾನ ಮಾಡೋದು ಎಂದರು.
ಪ್ರತಿಯೊಬ್ಬರಿಗೆ ಸಚಿವರು ಆಗಬೇಕು ಅನ್ನೋ ಆಸೆ ಇದ್ದೆ ಇರುತ್ತೆ. ನಾನು ಒಬ್ಬ ಕಾರ್ಯಕರ್ತನಾಗಿದ್ದೆನೆ.42 ವರ್ಷದಿಂದ ಪಕ್ಷದ ಕೆಲಸ ಮಾಡಿದ್ದೇನೆ.7 ಜಿಲ್ಲೆಯ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ.
ನಾಲ್ಕು ಕಾರ್ಯಧ್ಯಕ್ಷರಲ್ಲಿ ಮೂವರನ್ನು ಕಾರ್ಯಧ್ಯಕ್ಷರು ಮಂತ್ರಿ ಮಾಡಿದರು,ನನ್ನ ಮಾಡಲಿಲ್ಲ, ಯಾಕೆ ಮಾಡಿಲ್ಲ ಅಂತಾ ಇವತ್ತಿಗೂ ನನಗೆ ಗೊತ್ತಿಲ್ಲ ಎಂದರು.ಈ ಸರ್ಕಾರ ಬರುವಲ್ಲಿ ನಮ್ಮದು ಪಾತ್ರ ಇದೆ ಎಂದರು.
ಕಾಂಗ್ರೆಸ್ ವರಿಷ್ಟರ ನಡೆಗೆ ಕಾಂಗ್ರೆಸ್ ಎಂ.ಎಲ್ ಸಿ ಸಲೀಂ ಅಹ್ಮದ್ ಬೇಸರದ ಮಾತು
ಅಷ್ಟು ವರ್ಷ ದುಡಿದಿದ್ದೇವೆ. ಯಾಕೆ ಮಾಡಿಲ್ಲ ಅನ್ನೋದು ಇನ್ನು ಗೊತ್ತಿಲ್ಲ,ಮುಂದಿನ ದಿನಗಳಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತೆ,ಯಾರನ್ನ ಮಾಡಬೇಕು , ಯಾರನ್ನ ಮಾಡಬಾರದು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು.ನಾವು ಯಾರಿಗೆ ಹೇಳಬೇಕು, ಹೇಳಿದ್ದೇವೆ. ಅವರು ತೀರ್ಮಾನ ಮಾಡುತ್ತಾರೆ ಎಂದರು.
ಕಾಂಗ್ರೆಸ್ ನಲ್ಲಿ ಯಾವ ಬಣ ಇಲ್ಲ. ಕಾಂಗ್ರೆಸ್ ಒಂದೇ ಬಣ. ಸಣ್ಣಪುಟ್ಟ ವ್ಯತ್ಯಾಸಗಳು ಇವೆ ಹೈಕಮಾಂಡ್ ಬಗೆಹರಿಸುತ್ತದೆ ಎಂದರು.
ಹೈಕಮಾಂಡ್ ಮಾತನಾಡಬಾರದು ಅಂತಾ ಸೂಚನೆ ನೀಡಿದೆ, ಹಾಗಾಗಿ ಮುಖ್ಯಮಂತ್ರಿ ಯಾರ ಆಗಬೇಕು ಅನ್ನೋದು ನಾವು ಹೇಳೋದು ಅಲ್ಲಾ , ಅದು ಹೈಕಮಾಂಡ್ ಗೆ ಬಿಟ್ಟ ವಿಚಾರವೆಂದರು.
ಬಿಜೆಪಿ ಪಕ್ಷದವರಿಗೆ ಮಾಡೋಕೆ ಬೇರೆ ಇಲ್ಲ. ಬಿಜೆಪಿಗೆ ನಾಚಿಗೆ ಮಾನ ಮರ್ಯಾದೆ ಇಲ್ಲ.ಬಿಜೆಪಿಗೆ ಮಾನ ಮರ್ಯಾದೆ ಇದ್ದರೆ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಕೊಡಿಸಿ ಎಂದು ಕಿಡಿ ಕಾರಿದರು.
ಬಿಜೆಪಿಗೆ ಟೀಕೆ ಮಾಡುವ ನೈತಿಕತೆಯ ಇಲ್ಲ,ಮೊಸರಲ್ಲಿ ಕಲ್ಲು ಹುಡುಕಬೇಡಿ.ನಾವು ಇಲ್ಲಿ ಐದು ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ.ಯಾವ ಕುದುರೆ ವ್ಯಾಪಾರ ಇಲ್ಲ.ಯಾವುದೇ ಭಿನ್ನಾಭಿಪ್ರಾಯ ಇಲ್ಲ.ಪಕ್ಷದ ವರಿಷ್ಟರು ಬಂದು ತೀರ್ಮಾನ ಮಾಡುತ್ತಾರೆ ಎಂದರು.
ಕಾಂಗ್ರೆಸ್ ನಲ್ಲಿ ಹೈಕಮಾಂಡ್ ಅಂದರೆ, ಬಿಜೆಪಿಯಲ್ಲಿ ಮೋದಿ ತರಹ ಒನ್ ಮ್ಯಾನ್ ಶೋ ಅಲ್ಲ ಹೈಕಮಾಂಡ್ ಅಂದರೆ ವರ್ಕಿಂಗ್ ಕಮೀಟಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ,ಎಐಸಿಸಿ ಕಾರ್ಯದರ್ಶಿಗಳು ತೀರ್ಮಾನ ಮಾಡುತ್ತಾರೆ ಎಂದರು.
ನರೇಂದ್ರ ಮೋದಿ ತರಹ ಹಿಟ್ಲರ್ ವಾದಿ ತರಹ ತೀರ್ಮಾನ ಮಾಡೋದಿಲ್ಲ.ನಮ್ಮಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ. ಕಾಂಗ್ರೆಸ್ ಹೈಕಮಾಂಡ್ ಎಲ್ಲಾ ವಿದ್ಯಮಾನಗಳ ಗಮನಿಸುತ್ತಿದೆ, ಜೀರ್ಣೀಸಿಕೊಳ್ಳುವ ಶಕ್ತಿ ಇದೆ.
ಅಂತಿಮವಾಗಿ ಸಿ.ಎಂ ಯಾರು, ಡಿಸಿ.ಎಂ ಯಾರು ಅನ್ನೋದು ಹೈಕಮಾಂಡ್ ತೀರ್ಮಾನ ಮಾಡುತ್ತಿದೆ.ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇವೆ. ಅದನ್ನ ಸರಿಪಡಿಸುತ್ತೇವೆ ಎಂದು ತಿಳಿಸಿದರು.



