ಶಿವಮೊಗ್ಗ | ಅಡಿಕೆ ಸುಲಿಯಲೆಂದು ಬಂದು ಮಾಲೀಕನ ವಾಹನ‌ ಕದ್ದು ಪರಾರಿ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಅಡಿಕೆ ಸುಲಿಯುವ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೊಬ್ಬ ಮಾಲೀಕರ ಬೊಲೆರೋ ವಾಹನವನ್ನೇ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ ಎಂಬ ಮಾಹಿತಿಯಾಗಿದೆ. ತೀರ್ಥಹಳ್ಳಿ ತಾಲೂಕು ಮೇಳಿಗೆ ಸಮೀಪದ ಮಂಡವಳ್ಳಿಯಲ್ಲಿ ಘಟನೆ ನಡೆದಿದೆ.

ದೇವರಾಜ ಎಂಬವವರು ಅಡಿಕೆ ವ್ಯಾಪಾರಿಯಾಗಿದ್ದು, ಕೆಲಸಕ್ಕಾಗಿ ಹೊರ ಜಿಲ್ಲೆಗಳಿಂದ ಸುಮಾರು 40 ಕಾರ್ಮಿಕರನ್ನು ಕರೆತಂದಿದ್ದರು.

ಜನವರಿ 6ರಂದು ಮಧ್ಯರಾತ್ರಿ ಮನೆಯ ಕಾಂಪೌಂಡ್ ಪಸಕ್ಕದಲ್ಲಿ ನಿಲ್ಲಿಸಿದ್ದ ಅಳಿಯ ಮನೋಜ್ ಅವರಿಗೆ ಸೇರಿದ ಮಹೇಂದ್ರ ಬೊಲೆರೋ ವಾಹನ ಕಳ್ಳತನವಾಗಿದೆ. ಎಲ್ಲೆಡೆ ವಿಚಾರಿಸಿದಾಗ ಅಡಿಕೆ ಸುಲಿಯುವ ಕೆಲಸಕ್ಕೆ ಬಂದಿದ್ದ ವಿಜಯನಗರ ಜಿಲ್ಲೆಯ ಸಿದ್ದಪ್ಪ ಕಳ್ಳತನ ಮಾಡಿದ್ದಾನೆ ಎಂದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಘಟನೆ ಸಂಬಂಧ ದೇವರಾಜ ಅವರು ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

Author