ಮುರುಘಾ ಶರಣರು ನಿರ್ದೋಷಿ ಎಂದು ಚಿತ್ರದುರ್ಗದ ಕೋರ್ಟ್ ತೀರ್ಪು ನೀಡಿದೆ.
ಪೋಕ್ಸೋ ಕೇಸ್ ನಲ್ಲಿ ಬಿಗ್ ರಿಲೀಫ್ ಚಿತ್ರದುರ್ಗದ ಎರಡನೇ ಹೆಚ್ಚುವರಿ ನ್ಯಾಯಾಲಯದ ತೀರ್ಪು ಸಾಕ್ಷಾಧ್ಯಾರಗಳ ಕೊರತೆಯಿಂದ ಮುರುಘಾ ಶರಣರು ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪೋಕ್ಸೋ ಪ್ರಕರಣದ ವಿಚಾರಣೆಯಲ್ಲಿ ನಿರ್ದೋಷಿ ಎಂದು ಚಿತ್ರದುರ್ಗದ 2ನೇ ಅಪರ ಜಿಲ್ಲಾ ನ್ಯಾಯಾಲಯವು ತೀರ್ಪು ನೀಡಿದೆ.
ಇವರು ಸಾಮಾಜಿಕ ಮತ್ತು ವೈಚಾರಿಕ ಸುಧಾರಣೆಗಳಿಗೆ ಹೆಸರುವಾಸಿಯಾಗಿದ್ದಾರೆ, ಆದರೆ ಇವರನ್ನು ಕುರಿತು ವಿವಾದಗಳೂ ಇವೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ನ್ಯಾಯಾಲಯವು ಪೋಕ್ಸೋ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ನಿರ್ದೋಷಿ ಎಂದು ತೀರ್ಪು ನೀಡಿದೆ.
ನ್ಯಾಯಾಧೀಶ ಗಂಗಾಧರ್ ಚನ್ನಬಸಪ್ಪ ಹಡಪದ ಅವರು ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ ನಂತರ ಈ ತೀರ್ಪು ಪ್ರಕಟಿಸಿದರು.
ಈ ಪ್ರಕರಣವು ಇತ್ತೀಚೆಗೆ ಹೆಚ್ಚು ಗಮನ ಸೆಳೆದಿತ್ತು. ಮುಂಚೆ ಶಿವಮೂರ್ತಿ ಮುರುಘಾ ಶರಣರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಶರಣರು ಅಸ್ಪೃಶ್ಯತೆ ಮತ್ತು ಇತರ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ್ದಾರೆ ಮತ್ತು ವೈಜ್ಞಾನಿಕ ತಿಳುವಳಿಕೆಯನ್ನು ಪ್ರಚಾರಪಡಿಸಲು ಶ್ರಮಿಸಿದ್ದಾರೆ.
ಜಾತಿಗೊಂದು ಮಠ ಮಾಡುವಂತಹ ಕೆಲವು ನಿರ್ಧಾರಗಳಿಂದ ವಿವಾದಗಳೂ ಉಂಟಾಗಿವೆ.
ಈ ಪ್ರಕರಣದಲ್ಲಿ ಮುರುಘಾ ಸ್ವಾಮಿ, ಮಠದ ವಾರ್ಡನ್ ರಶ್ಮಿ, ಮಠದ ಮ್ಯಾನೇಜರ್ ಪರಮಶಿವಯ್ಯ ಮೂವರು ಆರೋಪಿಗಳನ್ನು ನಿರ್ದೋಷಿ ಎಂದು ಕೋರ್ಟು ತೀರ್ಪು ನೀಡಿದೆ.
ಪೋಕ್ಸೋ ಪ್ರಕರಣದಲ್ಲಿ ಕೋರ್ಟ್ ತೀರ್ಪು ನಿರ್ದೋಷಿ ಎಂದು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಹೊರಬಂದ ಮುರುಘಾ ಶ್ರೀಗಳು ದಾವಣಗೆರೆಯ ಶಾಖಾ ಮಠಕ್ಕೆ ತೆರಳಿದರು. ಹೈಕೋರ್ಟ್ ವಕೀಲ ಸಿವಿ ನಾಗೇಶ್ ಮುರುಘಾ ಶ್ರೀಗಳ ಪರವಾಗಿ ಪ್ರಬಲ ವಾದವನ್ನು ಮಂಡಿಸಿದ್ದರು



