ಶಿವಮೊಗ್ಗ ನಗರದಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಶಾಲೆ ಕಾಲೇಜುಗಳಲ್ಲಿ ಒಂದಾದ ಕಮಲಾ ನೆಹರು ಪದವಿ ಕಾಲೇಜು ಹಾಗೂ ಕಸ್ತೂರಿಬಾ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಮಧ್ಯ ಇರುವ ರಾಜಕಾಲುವೆಯನ್ನ NES ಸಂಸ್ಥೆ ಒತ್ತುವರಿ ಮಾಡಿದೆ.
ರಾಜಕಾಲುವೆ ಒತ್ತುವರಿ ಕಾನೂನು ಬಾಹಿರವಾಗಿದೆ, ಸಾಕಷ್ಟು ಹೆಸರು ಮಾಡಿರುವಂತ ಶಿಕ್ಷಣ ಸಂಸ್ಥೆಗೆ ರಾಜಕಾಲುವೆ ಒತ್ತುವರಿ ಕಾನೂನು ರೀತಿಯ ಅಪರಾಧ ಎಂಬುದು ತಿಳಿದಿಲ್ಲವೇ?
ಈ ಸಂಬಂಧ ಒತ್ತುವರಿ ತೆರವುಗೊಳಿಸದೆ ಮಹಾನಗರ ಪಾಲಿಕೆ ಮೀನಾ,ಮೇಷ ಎಣಿಸುತ್ತ ಕೂತಿರುವುದಕ್ಕೆ ಕಾರಣವಾದರೂ ಏನು ಎಂಬ ಪ್ರಶ್ನೆ ನಾಗರೀಕರಲ್ಲಿ ಮೂಡಿದೆ!
ನಗರದ ನೆಹರು ರಸ್ತೆಯಲ್ಲಿರುವ ವರ್ತಕರು ಈ ಸಂಬಂಧ ಮಹಾನಗರ ಪಾಲಿಕೆಗೆ ಮನವಿ ಮಾಡಿದೆ ಹಾಗೂ ಟ್ರಾಫಿಕ್ ಪೊಲೀಸ್ ಇಲಾಖೆ ಕೂಡ ನಗರದಲ್ಲಿ ಸುಗಮ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆ ಸಂಬಂಧ ಸ್ಥಳ ಪರಿಶೀಲನೆ ಮಾಡುವಾಗ ರಾಜಕಾಲುವೆ ಒತ್ತುವರಿ ಹಾಗೂ ಕನ್ಸೆರ್ವೆಂನ್ಸಿ ಸಹ ಒತ್ತುವರಿ ಮಾಡಿ ಕಟ್ಟಡ ಕಟ್ಟಿರುವುದನ್ನು ಗುರುತಿಸುವ ಮೂಲಕ ಟ್ರಾಫಿಕ್ ಪೊಲೀಸ್ ಇಲಾಖೆ ಕೂಡ ಮಹಾನಗರ ಪಾಲಿಕೆಗೆ ಪತ್ರ ಕೂಡ ಬರೆದು, ನಗರದ ನೆಹರು ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರವಾಗಿದೆ ಹಾಗಾಗಿ ಈ ಕಾನೂನು ಬಾಹಿರವಾಗಿ ರಾಜಕಾಲುವೆ ಒತ್ತುವರಿ ಹಾಗೂ ಕನ್ಸೆರ್ವೆಂನ್ಸಿ ಒತ್ತುವರಿ ತೆರವುಗೊಳಿಸಬೇಕೆಂದು ಪತ್ರ ಬರೆದು ಬಹಳಷ್ಟು ದಿನಗಳು ಕೂಡ ಕಳೆದಿದೆ.

ಇಷ್ಟೆಲ್ಲಾ ಆದ ನಂತರ ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರ ಕೊನೆಯ ಸಭೆಯಲ್ಲಿ ಸಹ ಈ ಸಂಬಂಧ ಚರ್ಚೆ ಆಗಿದ್ದು ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕೆಂದು ತಿಳಿಸಿದ್ದಾಗಿ ಮಾಹಿತಿಯಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೂ ಸಹ ಎಲ್ಲಾ ವಿಷಯ ತಿಳಿದಿರುವುದೇ ಆಗಿದೆ.
ಆದರೂ ಸಹ ಇಲ್ಲಿವರೆಗೂ ಒತ್ತುವರಿ ವಿರುದ್ದ ಮಹಾನಗರ ಪಾಲಿಕೆ ಯಾವದೇ ಕ್ರಮ ಜರುಗಿಸದೆ ನಿರ್ಲಕ್ಷ ತೋರಿಸುತ್ತಿದೆ,
ಈ ರಾಜಕಾಲುವೆ ಹಾಗೂ ಕನ್ಸೆರ್ವೆಂನ್ಸಿ ಒತ್ತುವರಿ ತೆರವುಗೊಳಿಸಿದಲ್ಲಿ ನಗರದ ಹೃದಯಭಾಗವಾಗಿರುವ ನೆಹರು ರಸ್ತೆಯಲ್ಲಿ ವಾಹನ ಸವಾರರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಬಹುದು ಹಾಗೂ ಸಾರ್ವಜನಿಕರೆಲ್ಲರಿಗೂ ಅನುಕೂಲವಾಗಲಿದೆ.

ರಾಜಕಾಲುವೆ ಒತ್ತುವರಿ ಸಂಬಂಧ ಕಾನೂನು ಏನು ಹೇಳತ್ತೇ?
ಮೊದಲನೆಯದಾಗಿ : – ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ, 1976(ಶಿವಮೊಗ್ಗ ಮಹಾನಗರ ಪಾಲಿಕೆಗೆ ಅನ್ವಯ)•
ವಿಧಿ 58 ಮತ್ತು ಅನುಸೂಚಿ–III➜ ಸಂರಕ್ಷಣೆ, ಸ್ವಚ್ಛತೆ, ಒಳಚರಂಡಿ, ಮಳೆನೀರು ಕಾಲುವೆಗಳು ಪಾಲಿಕೆಯ ಕಡ್ಡಾಯ ಕರ್ತವ್ಯಗಳು.•
ವಿಧಿಗಳು 288–292➜
ಕೆಳಕಂಡವುಗಳಿಗೆ ನಿಷೇಧ: ಕಾಲುವೆಗಳಿಗೆ ಅಡ್ಡಿ ರಾಜಕಾಲುವೆಗಳಲ್ಲಿ ಅತಿಕ್ರಮಣ ತ್ಯಾಜ್ಯ ಸುರಿಯುವುದು•
ವಿಧಿಗಳು 321–322➜ ರಸ್ತೆ, ಕಾಲುವೆ, ಸಾರ್ವಜನಿಕ ಆಸ್ತಿಗಳ ಮೇಲಿನ ಅತಿಕ್ರಮಣವನ್ನು ತೆಗೆಯುವ ಅಧಿಕಾರ.•
ವಿಧಿಗಳು 343–344➜ ಸಾರ್ವಜನಿಕ ತೊಂದರೆ, ಕಾಲುವೆ ತಡೆ, ಹಾನಿಗೆ ದಂಡ ಮತ್ತು ಶಿಕ್ಷೆ.📌 ನಗರ ಮಿತಿಯೊಳಗಿನ ರಾಜಕಾಲುವೆಗಳು ಪಾಲಿಕೆಯ ಆಸ್ತಿಯೇ ಆಗಿವೆ.
ಅಲ್ಲದೆ : – ಕರ್ನಾಟಕ ನಗರ ಮತ್ತು ಗ್ರಾಮ ಯೋಜನಾ ಕಾಯ್ದೆ, 1961• ರಾಜಕಾಲುವೆ, ನದಿ ಕಣಿವೆ, ನೈಸರ್ಗಿಕ ನೀರುಹಾದಿಗಳು ಮಾಸ್ಟರ್ ಪ್ಲಾನ್ / ಸಿಡಿಪಿಯ ಭಾಗವಾಗಿದೆ.
ಕೆಳಗಿನ ಸ್ಥಳಗಳಲ್ಲಿ ಕಟ್ಟಡಕ್ಕೆ ಪೂರ್ಣ ನಿಷೇಧ: ಪ್ರಾಥಮಿಕ / ದ್ವಿತೀಯ / ತೃತೀಯ ಕಾಲುವೆಗಳು ಕಣಿವೆ ಪ್ರದೇಶಗಳು.

ಕಾನೂನು ರೀತಿಯಲ್ಲಿ ಎಲ್ಲವನ್ನು ಉಲ್ಲಂಘನೆ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟಾಗುವಂತೆ ಮಾಡುತ್ತಿರುವ ರಾಷ್ಟ್ರೀಯ ಶಿಕ್ಷಣ ಸಮಿತಿ ವಿರುದ್ಧ ಮಹಾನಗರ ಪಾಲಿಕೆ ಮಾತ್ರ ಸಾಫ್ಟ್ ಕಾರ್ನರ್ ರೀತಿಯಲ್ಲಿ ಕ್ರಮ ಜರುಗಿಸದೆ ಮೀನಮೇಷ ಎಣಿಸುತ್ತಿರುವುದು ನಗರದ ನಾಗರಿಕರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರು ಈ ಕೂಡಲೇ ಕ್ರಮ ಜರುಗಿಸುವ ಮೂಲಕ ತಪ್ಪಿಸ್ತರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಹಾಗೂ ಮುಂದುವರೆದು ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತ ಇಲಾಖೆ ಕೂಡ ಇಂತಃ ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆಸಿ ನಗರದಲ್ಲಿ ಇನ್ನು ಮುಂದೆ ಯಾವದೇ ಕಾರಣಕ್ಕೂ ಇಂತಃ ಪ್ರಕರಣಗಳು ನಡೆಯದಂತೆ ತಡೆಗಟ್ಟಬೇಕಿದೆ.



