ಹುಬ್ಬಳ್ಳಿ | ಜೀರೋ ಟ್ರಾಫಿಕ್ ನಲ್ಲಿ ತಂದಿದ್ದ ನವಜಾತ ಶಿಶು ದುರ್ಮರಣ

ಹುಬ್ಬಳ್ಳಿ

ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನವಜಾತ ಶಿಶು ಸಾವನಪ್ಪಿರುವ ಘಟನೆ ವರದಿಯಾಗಿದೆ.

ವಿಜಯಲಕ್ಷ್ಮಿ ಎಂಬುವವರ ನವಜಾತ ಶಿಶುವಿನ ಹೊಟ್ಟೆಯ ಮೇಲಿನ ಚರ್ಮ ಬೆಳೆಯದ ಹಿನ್ನೆಲೆ ಕರುಳು, ಕಿಡ್ನಿ ಹೊರಬಂದಿತ್ತು.

ಇದೆ ತಿಂಗಳ 28ರಂದು ಕೊಪ್ಪಳದಿಂದ ಹುಬ್ಬಳ್ಳಿಗೆ ಕರೆತರಲಾಗಿದ್ದ ನವಜಾತ ಶಿಶು ಚಿಕಿತ್ಸೆಗೆ ಸ್ಪಂದಿಸಿದೆ ಸಾವು ಕಂಡಿದೆ.

ಕೊಪ್ಪಳ ಜಿಲ್ಲೆಯ ಕುಕುನೂರ ತಾಲೂಕಿನ ಬೂದಗುಂಪ ಗ್ರಾಮದ ವಿಜಯಲಕ್ಷ್ಮಿ ಎಂಬುವರ ಶಿಶು ಕುಕನೂರ ತಾಲೂಕಾ ಆಸ್ಪತ್ರೆಯಲ್ಲಿ 27ರ ರಾತ್ರಿ ಹನ್ನೊಂದು ಮೂವತ್ತಕ್ಕೆ ಹೆರಿಗೆಯಾಗಿತ್ತು.

ಮಗುವಿನ ಕರಳು ಮತ್ತು ಕಿಡ್ನಿ ಹೊರಬಂದ ಹಿನ್ನೆಲೆ ಕೊಪ್ಪಳ ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಡಿ.28ರ ಬೆಳಗ್ಗೆ 10 ಗಂಟೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.

ಈ ವೇಳೆ ಜೀರೋ ಟ್ರಾಫಿಕ್ ನಲ್ಲಿ ನವಜಾತ ಶಿಶುವನ್ನು ಕರೆತಲಾಗಿತ್ತು ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಿದರು ಸ್ಪಂದಿಸಿದೆ ನವಜಾತ ಶಿಶು ದುರ್ಮರಣವಾಗಿದೆ.

Author