ಶಿವಮೊಗ್ಗ ನಗರದ ಸೀಗೆಹಟ್ಟಿಯಲ್ಲಿ NES ನ ಅಜೀವ ಸದಸ್ಯರು, ಪಾಸಿಟಿವ್ ಮೈಂಡ್ ಆಸ್ಪತ್ರೆಯ ಖ್ಯಾತ ಮನೋವೈದ್ಯರಾದ ಡಾ. ಎಸ್ ಟಿ ಅರವಿಂದ್ ರವರು ತಮ್ಮ ತಂದೆ ಯವರಾದ,NES ನ ಕಾರ್ಯದರ್ಶಿಗಳಾಗಿದ್ದ ದಿವಂಗತ ಎಸ್ವಿ. ತಿಮ್ಮಯ್ಯ ನವರ 12ನೆ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಯೋಜಿಸಿದ್ದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿಗಳಾದ K.S. ಈಶ್ವರಪ್ಪ ನವರು ಭಾಗವಹಿಸಿದ್ದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ ಎಸ್ ವಿ ತಿಮ್ಮಯ್ಯ ಅವರೊಂದಿಗೆ ಇದ್ದ ಒಡನಾಟ ಹಾಗೂ ಶಾಲಾ ಕಾಲೇಜು ದಿನಗಳಲ್ಲಿ ಅವರೊಂದಿಗೆ ಇದ್ದ ಗೆಳತನ ಸ್ಮರಿಸಿ ಮಾತನಾಡಿದ ಅವರು ಸೈದ್ದಂತಿಕ ವಿಚಾರಗಳಿಂದ ಬೇರೆ ಬೇರೆ ಪಕ್ಷಗಳಲ್ಲಿ ಇದ್ದೆವು ಎಂದರು.
ವೇದಿಕೆಯ ಮೇಲಿದ್ದಂತ ಅತಿಥಿಗಳು ಎಸ್ ವಿ ತಿಮ್ಮಯ್ಯ ಅವರ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಂತ ಸಾಧನೆಗಳು ಹಾಗೂ ಅವರು ನಡೆದು ಬಂದಂತಃ ಹಾದಿಯನ್ನು ಸ್ಮರಿಸಿ ಹೊಗಳಿದರು.

ಈ ಒಂದು ಕಾರ್ಯಕ್ರಮದಲ್ಲಿ ಮಾಜಿ MLC ರುದ್ರೇಗೌಡರು, NES ನ ಅಧ್ಯಕ್ಷರಾದ GS ನಾರಾಯಣರಾವ್ NES ನ ನಿರ್ದೇಶಕರಾದ ಅನಂತದತ್ತ, NES ನ ಮಾಜಿ ನಿರ್ದೇಶಕರಾದ ಶ್ರೀಮತಿ ರುಕ್ಮಿಣಿ ವೇದವ್ಯಾಸ್ , ಡಾ. ಅರವಿಂದ್ ತಿಮ್ಮಯ್ಯ ಅವರ ಪತ್ನಿ ಐಶ್ವರ್ಯ, NES ನ ಹಾಲಿ, ಮಾಜಿ ಉದ್ಯೋಗಿಗಳು, ವಿವಿಧ ಸಂಘಸಂಸ್ಥೆ ಗಳ ಪದಾಧಿಕಾರಿಗಳು, ಸ್ಥಳೀಯರು, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಈ ಒಂದು ಕಾರ್ಯಕ್ರಮದಲ್ಲಿ ದಿ. SVT ಯವರಿಗೆ ಗೌರವ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಆರೋಗ್ಯ ತಪಾಸಣೆ , ನಡೆಸಲಾಯಿತು.
ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನ ಜೆ ಪಿ ಎನ್ ಶಾಲೆಯ ಮುಖ್ಯ್ಯೊಪಾಧ್ಯರಾದ ಇಮ್ತಿಯಾಜ್ ಅಹ್ಮದ್ ನೆರವೇರಿಸಿದರು.



