ಶಿವಮೊಗ್ಗ ನಗರದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಕಳ್ಳತನವಾಗಿದೆ.ಹೌದು ಕೆಲವಾರು ದಿನಗಳಿಂದ ನಗರದಲ್ಲಿ ಇದೇ ವಿಚಾರವಾಗಿ ಗುಮ್ಮಾನಗುಸ್ಸಾ ಸುದ್ದಿ ಎಲ್ಲರು ಬಾಯಲ್ಲಿ ಕೇಳಿ ಬರುತ್ತಿದೆ.
ನಗರದ ಅಧಿ ದೇವತೆಯಾದ ಶ್ರೀ ಮಾರಿಕಾಂಬ ಅಮ್ಮನವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದೂ ಯಾರು? ಇಲ್ಲಿವರೆಗೂ ಯಾಕೆ ಕಳ್ಳನನ್ನು ರಕ್ಷಿಸುತ್ತಿದ್ದಾರೆ?
ಇನ್ನೇನು ಜಾತ್ರೆ ಸಮೀಪಸುತ್ತಿದೆ ನಗರದ ದೇವತೆಗೆ ಹಲವಾರು ಭಕ್ತಾದಿಗಳು ನಗರದಾದ್ಯಂತ ದೇವಸ್ಥಾನಕ್ಕೆ ಸೇವೆ ರೂಪದಲ್ಲಿ ದಾನ ಮಾಡುತ್ತಿದ್ದಾರೆ.
ಇನ್ನೇನು ಸಮೀಪದಲ್ಲಿರುವ ಜಾತ್ರೆಗೆ ಲಕ್ಷಾಂತರ ಜನ ಅಮ್ಮನವರ ದರ್ಶನಕ್ಕೆ ಆಗಮಿಸುತ್ತಾರೆ.ಈ ವೇಳೆಯಲ್ಲಿ ಇಂತಃ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಮಾರಿಕಾಂಬ ದೇವಸ್ಥಾನ ಸಮಿತಿಯ ಸದಸ್ಯನೊಬ್ಬ ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ. ಸುಮಾರು 10 ಲಕ್ಷ ರೂಪಾಯಿ ಸಂಗ್ರಹವಾಗಿದ್ದು ಅದರಲ್ಲಿ 6 ಲಕ್ಷ ರೂಪಾಯಿ ಬ್ಯಾಂಕ್ ಗೆ ಹಣ ಕಟ್ಟಲು ಇಟ್ಟಿದ್ದರು. ಈ ವೇಳೆ ಸಮಿತಿ ಸಭೆ ನಡೆಯುತ್ತಿರುವಾಗ ಸಮಿತಿಯ ಸದಸ್ಯ ಪ್ರಭಾಕರ್ ಎಂಬಾತನು 50,000₹ ರೂಪಾಯಿಗು ಅಧಿಕ ಹಣವನ್ನು ಕವರ್ ಗೆ ಹಾಕಿಕೊಂಡು ತೆರಳಿದ್ದಾನೆ. ತದ ನಂತರ ಖಜಾಂಚಿ ತಿಮ್ಮಪ್ಪರವರು ಹಣವನ್ನು ಪರಿಶೀಲನೆ ಮಾಡಿದಾಗ ಕಡಿಮೆ ಇರುವುದು ತಿಳಿದುಬಂದಿದೆ.ನಂತರ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಕಳ್ಳತನ ಮಾಡಿರುವುದು ಗೊತ್ತಾಗಿದೆ.

ನಂತರ ಪ್ರಭಾಕರನಿಂದ ಹಣ ವಸೂಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ.ಈ ವಿಚಾರವು ಸಮಿತಿಯ ಎಸ್ ಕೆ ಮರಿಯಪ್ಪರಿಂದ ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲಿವರೆಗೂ ಪೊಲೀಸ್ ಠಾಣೆಗೆ ಯಾರು ಸಹಿತ ದೂರು ನೀಡದಿರುವುದು ಆಘಾತಕಾರಿಯಾಗಿದೆ.
ನಗರ ದೇವತೆಯ ಹಣ ಕದ್ದವಂತವರ ರಕ್ಷಣೆ ಯಾತಕ್ಕಾಗಿ ಎಂಬುದು ಭಕ್ತಾದಿಗಳ ಪ್ರಶ್ನೆಯಾಗಿದೆ? ಹಾಗೂ ಜಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಅಮ್ಮನವರ ದರ್ಶನ ಪಡೆಯಲು ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದ ಆಗಮಿಸುತ್ತಾರೆ. ಭಕ್ತಾದಿಗಳು ದೇವಸ್ಥಾನಕ್ಕೆ ಸೇವೆ ರೂಪದಲ್ಲಿ ತಲುಪಿಸುವ ಹಣ ಕುರಿತಾಗಿ ಕೂಡ ಭಕ್ತಾದಿಗಳಲ್ಲಿ ಆತಂಕ ಹೆಚ್ಚಾಗಿದೆ.
ಈ ಒಂದು ದೇವಸ್ಥಾನದ ಸಮಿತಿ ಮೇಲೆ ಹಲವಾರು ಆರೋಪಗಳು ಕೇಳಿ ಬಂದಿದೆ. ಇಷ್ಟೆಲ್ಲಾ ವಿಚಾರಗಳ ನಡುವೆ ಕಳ್ಳತನ ಮಾಡಿದಂತ ವ್ಯಕ್ತಿ ಹಾಗೂ ಅವರನ್ನು ರಕ್ಷಣೆ ಮಾಡುತ್ತಿರುವವರಿಗೆ ಮಾರಿಕಾಂಬ ದೇವಿಯೆ ಸದ್ಬುದ್ದಿ ನೀಡಬೇಕು ಎಂದು ಮಾರಿಕಾಂಬ ದೇವಿಯ ಭಕ್ತಾದಿಗಳು ಮಾತನಾಡಿಕೊಳ್ಳುತ್ತಿದ್ದಾರೆ!



