ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಹಾಲಪ್ಪ ಕೆ.ಎನ್ ವಿರುದ್ಧ ಮಹಿಳೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ, ಜಾತಿ ನಿಂದನೆ ನ. 26 ರಂದು ಪ್ರಕರಣ ದಾಖಲಾಗಿತ್ತು.
2025 ರಲ್ಲಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಎಎಸ್ಐ ಹಾಲಪ್ಪ ಕೆ.ಎನ್ 35 ವರ್ಷದ ಮಹಿಳೆಯೊಬ್ಬರಿಗೆ ಪರಿಚಯವಾಗಿದ್ದರು. ಈ ವೇಳೆ ಮಹಿಳೆ ನೀಡಿದ ಮೊಬೈಲ್ ನಂಬರ್ ಬಳಸಿಕೊಂಡ ಹಾಲಪ್ಪ ಮೊದಲಿಗೆ ಮಹಿಳೆಯ ಸ್ನೇಹ ಬಯಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಮಹಿಳೆಯ ಪತಿ ಮನೆಯಿಂದ ಡ್ಯೂಟಿಗೆ ಹೋಗುವುದನ್ನ ಗಮನಿಸಿಕೊಂಡು ಹಾಲಪ್ಪ ಒಮ್ಮೆ ಕರೆ ಮಾಡಿ ನಂತರ ಪ್ರತಿದಿನ ಕರೆ ಮಾಡಲು ಆರಂಭಸಿದರು. ಮೊದಲಿಗೆ ಬೆದರಿಕೆಹಾಕಿ ಸ್ನೇಹ ಮಾಡುವಂತೆ ಒತ್ತಾಯಿಸಿದ್ದಾರೆ. ಬೆದರಿಕೆಗೆ ಹೆದರಿದ ಮಹಿಳೆ ಸ್ನೇಹ ಬೆಳೆಸಿದಾಗ ಲೈಂಗಿಕವಾಗಿ ಬಳಸಿಕೊಂಡು ಚಿತ್ರ ಹಿಂಸೆ ನೀಡಿ ಜಾತಿ ನಿಂದನೆ ಮಾಡಿರುವುದಾಗಿ ಮಹಿಳೆ ದೂರಿನಲ್ಲಿ ಆರೋಪಿಸಿದದ್ದರು.
ದೂರಿನ ಆಧಾರದ ಮೇರೆಗೆ ಎಎಸ್ಐ ಹಾಲಪ್ಪರವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನ.26 ರಂದು ದೈಹಿಕ ಮತ್ತು ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ, ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಮುಂದುವರೆದ ಭಾಗವಾಗಿ ಎಎಸ್ಐ ಹಾಲಪ್ಪ ನವರ ಅಮಾನತು ಕೂಡ ಆಗಿದೆ. ಪ್ರಸ್ತುತ ಪ್ರಕರಣ ದಾಖಲಾಗಿ ತಿಂಗಳು ಆಗುತ್ತಾ ಬರುತ್ತಿದೆ ಆದರೆ ಇಲ್ಲಿವರೆಗೂ ಪೊಲೀಸಪ್ಪನ ಬಂಧನವಾಗಿಲ್ಲ.
ಈ ಕುರಿತು ಶಿವಮೊಗ್ಗ ಆಡಿಷನಲ್ ಎಸ್ ಪಿ ಕಾರಿಯಪ್ಪ ಅವರು ನಮ್ಮ ಇ ಕನ್ನಡ ಮಾಧ್ಯಮದೊಂದಿಗೆ ಮಾತನಾಡಿ ಪ್ರಕರಣ ತನಿಖಾ ಹಂತದಲ್ಲಿದೆ ಹಾಗೂ ಇದರ ಸಂಬಂಧ ಡಿಸಿಆರ್ ಅವರ ಬಳಿ ಮಾಹಿತಿ ಪಡೆದುಕೊಳ್ಳಿ ಎಂದು ತಿಳಿಸಿದರು.
ಇನ್ನು ಈ ಎ ಎಸ್ ಐ ಹಾಲಪ್ಪ ಅವರ ಬಗ್ಗೆ ಇದಷ್ಟು ಈ ಪ್ರಕರಣದ ಮಾಹಿತಿ.ಮುಂದುವರೆದು ಹಾಲಪ್ಪ ಅವರ ಬಗ್ಗೆ ತಿಳಿಸಬೇಕೆಂದರೆ ಈತ ಬಹಳಷ್ಟು ವರ್ಷಗಳಿಂದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಆ ವೇಳೆಯಲ್ಲಿ ಇಲ್ಲಿರುವ ಅಕ್ರಮ ದಂಧೆಗಳಿಗೆ ಬೆನ್ನೆಲುಬು ಆಗಿದ್ದರು ಎಂಬ ಆರೋಪಗಳಿವೆ ಮತ್ತು ಪುರಲೇ ಗ್ರಾಮದಲ್ಲಿ ಒಸಿ ನಡೆಸುವವರಿಗೆ ಸಹಕಾರ ನೀಡಿದರು ಎಂಬ ಆರೋಪದ ಫಲವಾಗಿ ಎರಡು ಗುಂಪುಗಳ ನಡುವೆ ವೈಷಮ್ಯ ಮೂಡಿದ ಪರಿಣಾಮ ನಗರದ ಆಟೋ ಕಾಂಪ್ಲೆಕ್ಸ್ ಬಳಿ ಮಧು ಎಂಬಾತನ ಕೊಲೆಯಲ್ಲಿ ಪ್ರಕರಣ ಅಂತ್ಯ ಕಂಡಿತ್ತು.
ಇನ್ನು ಮುಂದುವರೆದು ಮರಳು ದಂಧೆ ಕುರಿತು ಹೊಳೆ ಹಟ್ಟಿ ಪ್ರವೀಣ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಕಾರಣ ಗ್ರಾಮಾಂತರ ಪೊಲೀಸ್ ಕಿರುಕುಳ ಅಂತ ತಿಳಿಸಿದ್ದಾಗಿ ಮಾಹಿತಿ ಅದರಂತೆ ಈ ಆತ್ಮಹತ್ಯೆಯ ಪ್ರಮುಖವಾಗಿ ಎ ಎಸ್ ಐ ಹಾಲಪ್ಪ ಅವರನ್ನ ಉಲ್ಲೇಖಿಸಿದ್ದರು.
ನಂತರ ಆತ್ಮಹತ್ಯೆಗೆ ಒಳಗಾದ ಪ್ರವೀಣ್ ಪತ್ನಿಗೆ ಒತ್ತಡದ ಮೂಲಕ ಈ ಪ್ರಕರಣ ಸಂಬಂಧ ತನಿಖೆ ಮುಂದುವರೆಯದಂತೆ ಪ್ರಕರಣ ಮಣ್ಣು ಪಾಲು ಮಾಡಲಾಗಿತ್ತು.
ಪ್ರಸ್ತುತ ವಿಚಾರಣೆ ಎದುರಿಸುತ್ತಿರುವ ವಿಷಯದಲ್ಲಿ ಮಹಿಳೆಗೆ ತಾನು ಸಚಿವ ಮಧು ಬಂಗಾರಪ್ಪರವರ ಸಂಬಂಧಿ ಎಂದು ಪರಿಚಯ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಈ ಮೇಲ್ಕಂಡವೆಲ್ಲವೂ ಬರಿ ಆರೋಪಗಳಲ್ಲ, ಪ್ರಸ್ತುತ ಎಲ್ಲವು ಜೀವಂತ ಸಾಕ್ಷಿ ಇದ್ದರು ಸಹ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಲ್ಲಿಯವರೆಗೆ ಆರೋಪಿಯ ಬಂಧನವಾಗಿಲ್ಲ ಹಾಗೂ ಈ ಪ್ರಕರಣದಲ್ಲಿ ಮಹಿಳೆ ಮೇಲೆ ದೌರ್ಜನ್ಯ ಹಾಗೂ ATROCITY ಪ್ರಕರಣ ದಾಖಲಿಸಿ ತಿಂಗಳು ಆಗತ್ತಾ ಬಂದಿದೆ. ಆರೋಪಿಯ ರಕ್ಷಣೆ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ನಾಗರಿಕರಲ್ಲಿ ಮೂಡುತ್ತಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಕೂಡ ಇಲ್ಲಿಯವರೆಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಗಮನಿಸಿದರೆ ಪೊಲೀಸ್ ಇಲಾಖೆಗೆ ಇಂತಃ ಅಧಿಕಾರಿಗಳ ಅವಶ್ಯಕತೆ ಇದಿಯೇನೋ ಎಂಬಂತೆ ಮೇಲ್ನೋಟಕ್ಕೆ ಜನಸಾಮಾನ್ಯರಿಗೆ ಅನಿಸುತ್ತಿದೆ.
ಇನ್ನಾದರೂ ಈ ಕೂಡಲೇ ಎ ಎಸ್ ಐ ಹಾಲಪ್ಪನವರ ಬಂಧನವಗತ್ತಾ? ಇಲ್ಲವೇ ಈ ಪ್ರಕರಣ ಕೂಡ ಹಳ್ಳ ಹಿಡಿಯುತ್ತ? ಕಾದು ನೋಡಬೇಕಿದೆ..!



