ಶಿವಮೊಗ್ಗದಲ್ಲಿ ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಲೋಕಾಯುಕ್ತ ದಾಳಿ ನಡೆದಿದೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಎಫ್ಡಿಎ ಲಕ್ಷ್ಮಿಪತಿ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ. ಲಕ್ಷ್ಮಿಪತಿಗೆ ಸೇರಿದ ಮೂರು ಕಡೆಗಳಲ್ಲಿ ಲೋಕಾಯುಕ್ತ ದಾಳಿ ಎಸ್ ಪಿ ಮಂಜುನಾಥ್ ಚೌದರಿ ನೇತೃತ್ವದಲ್ಲಿ ಡಿವೈಎಸ್ಪಿ ಚಂದ್ರಶೇಖರ್, ಇನ್ಸ್ಪೆಕ್ಟರ್ಗಳಾದ ರುದ್ರೇಶ್, ಮೃತ್ಯುಂಜಯ, ಗುರುರಾಜ್ ಮೈಲಾರಿ, ಬಸವರಾಜ್ ತಂಡದಿಂದ ದಾಳಿ ನಡೆದಿದೆ. ಶಿವಮೊಗ್ಗದ ಜೆಎಚ್ ಪಟೇಲ್ ಬಡಾವಣೆಯ ನಿವಾಸ ದಾವಣಗೆರೆ ಜಿಲ್ಲೆಯ ಜಗಳೂರು ಹಾಗೂ ಸಿಮ್ಸ್ ಕಾಲೇಜ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಇದರೊಂದಿಗೆ ಸಿಮ್ಸ್ ನಿರ್ದೇಶಕ ಡಾ ವಿರೂಪಾಕ್ಷಪ್ಪ ನಿವಾಸ ಹಾಗೂ ಸಿಮ್ಸ್ ನಿರ್ದೇಶಕರ ಕಚೇರಿಯಲ್ಲೂ ಲೋಕಾಯುಕ್ತ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ
ಲೋಕಾಯುಕ್ತ ಪೊಲೀಸರು
ಶಿವಮೊಗ್ಗದ ಸರ್ಕಾರಿ ವೈದ್ಯಕೀಯ ಕಾಲೇಜು ಎಫ್.ಡಿ.ಎ ಲಕ್ಷ್ಮೀಪತಿ.ಸಿ.ಎನ್ ಮನೆ, ಕಚೇರಿ ಸೇರಿದಂತೆ ಒಟ್ಟು
ಐದು ಕಡೆ ದಾಳಿ ನಡೆಸಿ ಒಟ್ಟು 2.49 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ ಲಕ್ಷ್ಮೀಪತಿ ಬಳಿ 3 ಮನೆಗಳು, 3 ಎಕರೆ 20 ಗುಂಟೆ ಕೃಷಿ ಜಮೀನು ಪತ್ತೆಯಾಗಿದೆ ಒಟ್ಟು ಮೌಲ್ಯ 1,63,80,000 ಎಂದು ಲೋಕಾಯುಕ್ತ ಮಾಹಿತಿ ಪ್ರಕಟಣೆ ಮೂಲಕ ನೀಡಿದೆ
12,01,720 ನಗದು, 23,29,880 ಮೌಲ್ಯದ ಆಭರಣ, 23.04 ಲಕ್ಷ ಮೌಲ್ಯದ ವಾಹನಗಳು, 27,47,881 ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ




