ಶಿವಮೊಗ್ಗ ,ಹೋರಾಟದ ಹಾದಿಯಲ್ಲಿ ಕಟ್ಟಿದ ಎನ್ ಎಸ್ ಯು ಐ ಸಂಘಟನೆಗೆ ಶಿವಮೊಗ್ಗದಲ್ಲಿ ಶಕ್ತಿ ತುಂಬಿ ಯುವ ಹೋರಾಟನಾಗಿ ಹಿರಿಯ ಮುತ್ಸದ್ದಿಗಳ ಪ್ರೀತಿಗೆ ಪಾತ್ರಾನಾಗಿ ಇಂದು ಪ್ರತಿಷ್ಟಿತ ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಮಧುಸೂದನ್ ಅವರ ಶ್ರಮಕ್ಕೆ ಸಿಕ್ಕ ಫಲ ಎನ್ನಬಹುದು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಯುವ ನಾಯಕ ವಿದ್ಯಾರ್ಥಿ ಸಂಘಟನೆಯ ಯುವ ಮುಖಂಡ ಹಾಗೆ ಸದ್ದಿಲ್ಲದ ಪಕ್ಷದ ಸಂಘಟನೆಗೋಸ್ಕರ ಅವಿರತವಾಗಿ ಶ್ರಮಿಸಿದ ಗಿರಿಜಮ್ಮ ಟೀಚರ್ ಮಗ ಮಧುಸೂದನ್ ಅವರಿಗೆ ಈಗ ಕಾಂಗ್ರೆಸ್ ಪಕ್ಷ ಬಹುದೊಡ್ಡ ಮನ್ನಣೆ ನೀಡಿ ಗೌರವಿಸಿರುವುದನ್ನು ಇಡೀ ಕಾಂಗ್ರೆಸ್ ಬಳಗ ಹಾಗೂ ಯುವ ಕಾಂಗ್ರೆಸ್ ಶಕ್ತಿ ವಿದ್ಯಾರ್ಥಿ ಸಂಘಟನೆ ಹಾಗೂ ಎಲ್ಲ ಯುವ ನಾಯಕರು ಪ್ರಶಂಸಿದ್ದಾರೆ.

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಯುವ ಕಾಂಗ್ರೆಸ್ ಪ್ರಮುಖ ಮಧುಸೂದನ್ ಅವರನ್ನು ಆಯ್ಕೆ ಮಾಡಿರುವುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ, ಮೆಚ್ಚಿಕೊಂಡಿದ್ದಾರೆ.ಹಾಲಿ ಸೂಡಾ ಅಧ್ಯಕ್ಷರಾಗಿ ಮಧುಸೂದನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ನಮ್ಮ ಇ -ಕನ್ನಡ ಮಾಧ್ಯಮ ವತಿಯಿಂದ ಮಧುಸೂದನ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು.


