ಇಂದು ಕೃಷ್ಣ ಜನ್ಮಾಷ್ಟಮಿ, ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಪೋಷಕರು ತಮ್ಮ ಮುದ್ದು ಮಕ್ಕಳಿಗೆ ಕೃಷ್ಣ ಮತ್ತು ರಾಧೆಯ ವೇಷ ಹಾಕಿ ಸಂಭ್ರಮಪಡುತ್ತಾರೆ. ಸೋಷಿಯಲ್ ಮೀಡಿಯಾ ತುಂಬೆಲ್ಲಾ ಕಂದಮ್ಮಗಳ ಫೋಟೋಗಳೇ ರಾರಾಜಿಸುತ್ತವೆ. ಮುದ್ದು ಮಕ್ಕಳ ಕೆಲ ಫೋಟೋಗಳು ಇಲ್ಲಿದೆ.
ಕೆಲವರು ಕೃಷ್ಣ ರಾಧೆ ಎರಡು ವೇಷವನ್ನು ಹಾಕಿದರೆ, ಇನ್ನೂ ಕೆಲವರು ಕೇವಲ ಕೃಷ್ಣನ ವೇಷ ಹಾಕಿಸುತ್ತಾರೆ. ಈ ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ರಾಧಾ- ಕೃಷ್ಣ ಸ್ಪರ್ಧೆಗಳು ಸಹ ನಡೆಯುತ್ತದೆ.
ಈ ವಿಶೇಷ ದಿನದಂದು ಮಕ್ಕಳನ್ನು ನೋಡುವುದು ನಿಜಕ್ಕೂ ಒಂದು ಸುಂದರ ಅವಕಾಶ ಎನ್ನಬಹುದು. ಒಬ್ಬರಿಗಿಂತ ಒಬ್ಬರು ಚೆಂದ ಕಾಣುತ್ತಿರುತ್ತಾರೆ. ಗೋಪಾಲನ ವೇಷದಲ್ಲಿ ಮಿಂಚುತ್ತಿರುತ್ತಾರೆ.
ಶಿವಮೊಗ್ಗದ ಸೂಪರ್ ಕಾಪ್ ಎಂದೇ ಪ್ರಸಿದ್ದಿ ಪಡೆದಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿರುಮಲೇಶ್ ಅವರ ಮುದ್ದು ಪುಟಾಣಿ ಪ್ರಾಂಶಿ T.S. ಇವರ ಫೋಟೋ ವೀಕ್ಷಿಸಿ 👇

ಶಿವಮೊಗ್ಗದ ಕರ್ನಾಟಕ ಬ್ಯಾಂಕ್ ಉದ್ಯೋಗಿ ಚಿದಂಬರ ಹಾಗೂ ಮಹಾವೀರ ಶಾಲೆಯ ಶಿಕ್ಷಕರಾದ ವಂದನಾ ಅವರ ಪುತ್ರ ಕ್ರಿಷಿವ್ ಶರ್ಮನನ್ನು ಈ ಕೆಳಗಿನ ಫೋಟೋದಲ್ಲಿ ನೋಡಿ

ಪುಟಾಣಿ ಧ್ವನಿ ತಂದೆ ಮನೋಹರ್ ವೃತ್ತಿ ತೆಂಗಿನಕಾಯಿ ಮಂಡಿ ಹಾಗೂ ತಾಯಿ ರೇಖಾ ಊರು ತಿಪಟೂರ್ ಈ ಪುಟಾಣಿ ಫೋಟೋ 👇


ಪುಟಾಣಿ ನಿಭಾ ತಂದೆ ಭಾರ್ಗವ ಫಾರ್ಮಸಿಸ್ಟ್ ತಾಯಿ ನಿಹಾರಿಕಾ ಉಂಡಿಗನಾಳು ಅರಸೀಕೆರೆ ತಾಲೂಕ್ ಹಾಸನ ಜಿಲ್ಲೆ ಈ ಪುಟಾಣಿ ಫೋಟೋ ವೀಕ್ಷಿಸಿ 👇

ಪುಟಾಣಿ ಯಾಗ್ನಿಕ್ ತಂದೆ ಶ್ರೀಧರ್ ವೃತ್ತಿ BMTC ಉದ್ಯೋಗಿ ತಾಯಿ ರಮ್ಯಾ ಊರು ಸೂಗೂರು ತಿಪಟೂರು ಈ ಪುಟಾಣಿ ಫೋಟೋ ವೀಕ್ಷಿಸಿ 👇

ಆದ್ಯ ಮತ್ತು ನೀವೇದ್ ಪಿ ಭರದ್ವಜ್ ಬೆಂಗಳೂರು ತಂದೆ ಪ್ರದೀಪ್ ಐಟಿ ಉದ್ಯೋಗಿ, ವೇದ ತಾಯಿ ಗೃಹಿಣಿ ಈ ಕೆಳಗೆ ಪುಟಾಣಿಗಳ ಫೋಟೋ ವೀಕ್ಷಿಸಿ 👇



ಇನ್ನು ಈ ದಿನ ಕೃಷ್ಣನ ಪ್ರಿಯ ತಿನಿಸುಗಳನ್ನು ಸಹ ಮಾಡಿ ನೈವೇದ್ಯ ಮಾಡಲಾಗುತ್ತದೆ. ಕೆಲವೆಡೆ ಬೆಣ್ಣೆ ತಿನ್ನುವ ಸ್ಪರ್ಧೆಯನ್ನು ಸಹ ಮಾಡುತ್ತಾರೆ. ಒಟ್ಟಾರೆ ಈ ದಿನ ನೀವು ಕ್ಯೂಟ್ ಕೃಷ್ಣರನ್ನು ಕಣ್ತುಂಬಿಕೊಳ್ಳಬಹುದು.





