ಶಿವಮೊಗ್ಗ | ಕೆ ಎಸ್ ಆರ್ ಟಿ ಸಿ ಯಿಂದ, ಪದೇ ಪದೇ ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ : ಕ್ರಮಕ್ಕೆ ಮುಂದಾಗುತ್ತಾರ ಎಸ್ಪಿ ಮಿಥುನ್ ಕುಮಾರ್

ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆಯಿಂದಾಗಿ ವಾಹನ ಸವರಾರು ಬಸವಳಿದಿದ್ದರೂ, ಈ ವೇಳೆಗೆ ಆಗಲೆ ನಗರಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಬಂದಿದ್ದ ದೇವರಾಜ್ ನಗರದಲ್ಲಿ ತಮ್ಮದೇ ಛಾಪು ಮೂಡಿಸುವ ಮೂಲಕ ನಗರದಲ್ಲಿ ಭರವಸೆ ಮೂಡಿಸಿದ ಅಧಿಕಾರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

ಎಲ್ಲೆಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಬಹುದು ಹಾಗೂ ಎಲ್ಲೆಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ದುರದೃಷ್ಟಿದಿಂದ ವಾಹನ ಸವರಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರು ಪರಿಶೀಲನೆ ನಡೆಸಿ, ನಂತರ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಅವರು ಸಹ ನಗರದಲ್ಲಿ ರೌಂಡ್ಸ್ ಮೂಲಕ ಪಾರ್ಕಿಂಗ್ ಸುಗಮ ಸಂಚಾರ ವ್ಯವಸ್ಥೆ ಅನುಕೂಲ ಕುರಿತು ವೀಕ್ಷಿಸಿದರು.

ಸಾರ್ವಜನಿಕರು ಜನಸಾಮಾನ್ಯರು ಹಾಗೂ ವಾಹನ ಸವಾರರಿಗೆ ಪಾರ್ಕಿಂಗ್ ಗೆ ಅನುಕೂಲ ಹಾಗೂ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾ ಹಾಗೂ ಗಾಂಧಿ ಬಜಾರ್ ಫುಟ್ ಪಾತ್ ಒತ್ತುವರಿ ತೆರವುಗೊಳಿಸಿದರು, ಹಾಗೂ ಫ್ಲವರ್ ಮಾರ್ಕೆಟ್ ಸಮಸ್ಯೆ ಬಗೆಹರಿಸಿದರು.

ನಗರದಲ್ಲಿ ಜನಸಾಮಾನ್ಯರು ವ್ಯಾಪಾರ ವಹಿವಾಟು ನಡೆಸುವರಿಗೂ ವಾಹನ ಸವಾರರಿಗೂ ಎಲ್ಲರಿಗೂ ಅನುಕೂಲ ಮಾಡುವಲ್ಲಿ ಪ್ರತಿನಿತ್ಯ ಶ್ರಮ ವಹಿಸುತ್ತಿದ್ದಾರೆ.

ಹಾಗೆಯೇ ಪಶ್ಚಿಮ ಸಂಚಾರಿ ಠಾಣೆಯ ಪಿ ಎಸ್ ಐ ಸ್ವಪ್ನ ಅವರು ಸಹ ನಗರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಜಿಲ್ಲಾಧಿಕಾರಿ ಆದೇಶವಿದ್ದರೂ ನಗರದಲ್ಲಿ ಸಂಚಾರ ಮಾಡುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ತಡೆದು ಜಿಲ್ಲಾಧಿಕಾರಿ ಆದೇಶ ಪಾಲನೆ ಮಾಡಿ ನಗರದೊಳಗೆ ವಾಹನ ಸವಾರರಿಗೆ ತೊಂದರೆ ಉಂಟು ಮಾಡಬೇಡಿ ಇಲ್ಲವಾದರೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ಸಹ ನೀಡಿದರು.

ಇದೆ ವೇಳೆ ಕೆ ಎಸ್ ಆರ್ ಟಿ ಸಿ ಅಧಿಕಾರಿಯನ್ನೇ ನಗರದ ಟಿ ಸೀನಪ್ಪ ಸರ್ಕಲ್ (ಗೋಪಿ ಸರ್ಕಲ್) ಸ್ಥಳಕ್ಕೆ ಕರೆಸಿ ವಾರ್ನಿಂಗ್ ಕೂಡ ಕೊಟ್ಟಿದ್ದರು.

ಶಿವಮೊಗ್ಗ ನಗರದಲ್ಲಿ ಟ್ರಾಫಿಕ್ ಪೊಲೀಸ್ ಇಲಾಖೆ ಹರಸಾಹಸ ಪಡುವ ಮೂಲಕ ಎಲ್ಲೆಲ್ಲಿ ಏನೆಲ್ಲಾ ಅನುಕೂಲ ಮಾಡಿಕೊಟ್ಟರೆ ವಾಹನ ಸವಾರರು ಹಾಗೂ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಲು ಸಾಧ್ಯವಿದೆಯೋ ಅಲ್ಲೆಲ್ಲ ತಮ್ಮ ಕೈ ಮೀರಿ ಪ್ರಯತ್ನ ಮಾಡುತ್ತಿದ್ದಾರೆ.

ಇದೆಲ್ಲದರ ನಡುವೆ ದಿನ ನಿತ್ಯ ಟ್ರಾಫಿಕ್ ಹೆಚ್ಚಾಗುತ್ತಿರುವ ಕಾರಣ ನಗರದಿಂದ ಬೇರೆ ಜಿಲ್ಲೆಗೆ ತೆರಳುವ ಭಾರಿ ವಾಹನ ಹಾಗೂ ಬಸ್ ಗಳು ಸಹ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ನಗರದಲ್ಲಿ ಸಂಚಾರ ಮಾಡಬಾರದೆಂದು ಜಿಲ್ಲಾಧಿಕಾರಿ ಅದೇಶಿಸಿದ್ದಾರೆ.

ಈ ಆದೇಶ ಮಾಡಿ ಬಹಳ ದಿನಗಳು ಕಳೆಯುತ್ತ ಬಂದಿದೆ, ದಿನ ನಿತ್ಯ ಟ್ರಾಫಿಕ್ ಪೊಲೀಸರಿಗೆ ಕಣ್ಣುತಪ್ಪಿಸುವ ಮೂಲಕ ಚಿತ್ರದುರ್ಗ ಮತ್ತು ದಾವಣಗೆರೆ, ಹರಿಹರ, ಹೊಸಪೇಟೆ ಮಾರ್ಗದ ಕೆ ಎಸ್ ಆರ್ ಟಿ ಸಿ ಬಸ್ ಗಳು ಮಾತ್ರ ಜಿಲ್ಲಾಧಿಕಾರಿ ಆದೇಶಕ್ಕೆ ಕಿಮ್ಮತ್ತು ಕೊಡದೆ ನಗರದಲ್ಲಿ ಸಂಚರಿಸುತ್ತಿದೆ.

ಕೆ ಎಸ್ ಆರ್ ಟಿ ಸಿ ಬೇರೆ ಜಿಲ್ಲೆಗೆ ತೆರಳುವ ಬಸ್ ಟ್ರಾಫಿಕ್ ಪೊಲೀಸರಿಗೆ ನಗರದಲ್ಲಿ ಕಂಡಲ್ಲಿ ವಾಪಾಸ್ ಕಳುಹಿಸುತ್ತಿದ್ದಾರೆ. ಆದರೆ ಖುದ್ದಾಗಿ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳೇ ಆದೇಶವನ್ನು ಪಾಲಿಸಲು ಚಾಲಕ ನಿರ್ವಾಹಕರಿಗೆ ಸುಚಿಸುತ್ತಿಲ್ಲ, ಟ್ರಾಫಿಕ್ ಪೊಲೀಸ್ ತಡೆದರೆ ಸರಿ ಇಲ್ಲವಾದರೆ ನಗರದಿಂದನೇ ಸಂಚಾರ ಮಾಡುತ್ತಿದ್ದಾರೆ.

ವಾಸ್ತವಾಗಿ ಈ ಸುದ್ದಿ ಹಲವು ಬಾರಿ ಬಂದಿದೆ ಆದರೆ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ಕೊಡದ ಕೆ ಎಸ್ ಆರ್ ಟಿ ಸಿ ಅವರ ಪದೇ ಪದೇ ಆದೇಶ ಉಲ್ಲಂಘನೆ ಮಾಡುತ್ತಿದ್ದರು ಸಹ ಇಲ್ಲಿಯವರೆಗೆ ಕೂಡ ಯಾಕೆ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ವಾಹನ ಸವಾರರದ್ದಾಗಿದೆ?

ನಗರ ಬೆಳೆದಂತೆ ಟ್ರಾಫಿಕ್ ಕೂಡ ಹೆಚ್ಚಾಗುತ್ತಿದೆ ಇದರಿಂದ ನಗರದಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಯವರು ಸಹ ಸುಗಮ ಸಂಚಾರಕ್ಕೆ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಅನೇಕ ಆದೇಶ ಮಾಡುತ್ತಾನೆ ಇದ್ದಾರೆ, ಈಗ ಕೆಲವು ದಿನಗಳ ಹಿಂದೆ ನಗರದ ಕೆಲವು ಭಾಗಗಳಲ್ಲಿ ಏಕಮುಖ ಸಂಚಾರಕ್ಕೆ ಆದೇಶ ಮಾಡಿರುತ್ತಾರೆ.

ಹಾಗೂ ಭಾರಿ ವಾಹನ ನಗರದೊಳಗೆ ಬೆಳಿಗ್ಗೆ 7 ರಿಂದ ರಾತ್ರಿ 9 ರ ವರೆಗೂ ಜಿಲ್ಲಾಧಿಕಾರಿ ಆದೇಶದಂತೆ ನಿಷೇದ ಮಾಡಿದ್ದೂ ಸಹ. ಕೆ ಎಸ್ ಆರ್ ಟಿ ಸಿ ಯ ದಾವಣಗೆರೆ, ಹರಿಹರ, ಹೊಸಪೇಟೆ, ಚಿತ್ರದುರ್ಗ ಮಾರ್ಗದ ಚಾಲಕರು ಹಾಗೂ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೆ ಯಾವದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.

ಈ ಸಮಸ್ಯೆ ಬಗ್ಗೆ ಶಿವಮೊಗ್ಗ ಕೆ ಎಸ್ ಆರ್ ಟಿ ಸಿ, ಡಿಸಿ ನವೀನ್ ಅವರನ್ನ ಕೇಳಿದಾಗೆಲ್ಲ ಎಲ್ಲವು ಸರಿ ಇದೆ, ನಿಮ್ಮ ಮಾಹಿತಿಯಿಂದ ಮತ್ತಷ್ಟು ಬಿಗಿ ಮಾಡುತ್ತೇವೆ ಎಂಬ ಸ್ಪಷ್ಟನೆಯಾಗಿದೆ.

ಇಂದು ಸಹ ಮಧ್ಯಾಹ್ನ 2:30 ಸಮಯದಲ್ಲಿ ಹರಿಹರ ಹೊಸಪೇಟೆ ಮಾರ್ಗದ ಕೆ ಎಸ್ ಆರ್ ಟಿ ಸಿ ಬಸ್ ಮಹಾವೀರ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿ ಮುಂದೇನೆ ಚಲಿಸಿದೆ.

ನಗರದಲ್ಲಿ ಟ್ರಾಫಿಕ್ ಪೊಲೀಸ್ ಇಲಾಖೆ ಮಾತಿಗೆ ಕಿಂಚಿತ್ತೂ ಬೆಲೆ ಕೊಡದೆ ನಗರದಲ್ಲಿ ಟ್ರಾಫಿಕ್ ಪೊಲೀಸರಿಗೆ ಸವಾಲು ಎಂಬಂತೆ ವರ್ತಿಸುತ್ತ ನಗರದಲ್ಲಿ ಅದರಲ್ಲೂ ಸಹ ಮಧ್ಯಾಹ್ನ 2 ಗಂಟೆ ಯಿಂದ 4 ಗಂಟೆ ಈ ವೇಳೆಯಲ್ಲಿ ಕೆ ಎಸ್ ಆರ್ ಟಿ ಸಿ ಸಂಚಾರ ಮಾಡುತ್ತಿದೆ.

ನಗರದಲ್ಲಿ 3ಗಂಟೆ 4 ಗಂಟೆ ಸಮಯದಲ್ಲಿ ಶಾಲಾ ಕಾಲೇಜು ಬಿಡುವ ವೇಳೆಯಾಗಿದ್ದು ಈ ವೇಳೆಯಲ್ಲಿ ಕೆ ಎಸ್ ಆರ್ ಟಿ ಸಿ ಸಂಚಾರದಿಂದ ಅಪಘಾತವೇನಾದರೂ ಸಂಭವಿಸಿದಲ್ಲಿ ಜೀವಕ್ಕೆ ಯಾರು ಹೊಣೆಯಾಗುತ್ತರೆ ಎಂದು ನಗರದ ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ?

ಹಾಗೂ ಜಿಲ್ಲಾಧಿಕಾರಿ ಆದೇಶವನ್ನು ಪದೇ ಪದೇ ಉಲ್ಲಂಘನೆ ಮಾಡುತ್ತ ಹಾಗೂ ಟ್ರಾಫಿಕ್ ಪೊಲೀಸ್ ಇಲಾಖೆಗೆ ಬೆಲೆ ಕೊಡದ ಕೆ ಎಸ್ ಆರ್ ಟಿ ಸಿ ಮೇಲೆ ಶಿವಮೊಗ್ಗದ ದಕ್ಷ ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರಾಗಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಕ್ರಮಕ್ಕೆ ಮುಂದಾಗುತ್ತಾರ,? ಸಮಸ್ಯೆ ಬಗೆಹರಿಸಿಕೊಡುತ್ತಾರ ಎಂಬ ನಿರೀಕ್ಷೆಯಲ್ಲಿ ಶಿವಮೊಗ್ಗದ ನಾಗರಿಕರು.

Author