ಮಂಗಳೂರು | ಪೊಲೀಸರಿಂದ ಭರ್ಜರಿ ಬೇಟೆ ; 50 ಲಕ್ಷ ಮೌಲ್ಯದ ಭಾರೀ ಡ್ರಗ್ಸ್ ವಶಕ್ಕೆ

ದಕ್ಷಿಣ ಕನ್ನಡ

ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಬಳಿ ಕಾರಿನಲ್ಲಿ ಮಾದಕ ವಸ್ತು ಮಾರಾಟ ಮಾಡಲು ಯತ್ನ ಬೆಂಗಳೂರಿನ ನೈಜೀರಿಯಾದ ವ್ಯಕ್ತಿಯಿಂದ ಮಾದಕ ವಸ್ತು ಖರೀದಿಸಿ ತಂದು ಮಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟಕ್ಕೆ ಯತ್ನ ಹಿನ್ನಲೆ,

ಮಂಗಳೂರು ಸಿಸಿಬಿ ಎ.ಸಿ.ಪಿ. ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಾಲ್ವರು ಆರೋಪಿಗಳ ಸಹಿತ 50 ಲಕ್ಷ ಮೌಲ್ಯದ ಸುಮಾರು 517.76 ಗ್ರಾಂ ಎಂಡಿಎಂಎ ವಶಕ್ಕೆ, 50 ಲಕ್ಷ ಮೌಲ್ಯದ ಭಾರೀ ಡ್ರಗ್ಸ್ ಭೇಟೆಯಾಡಿದ ಮಂಗಳೂರು ಪೊಲೀಸರು!

ಈ ವೇಳೆ ಕುಂದಾಪುರದ ಮೊಹಮ್ಮದ್ ಶಿಯಾಬ್ @ ಶಿಯಾಬ್, ಉಳ್ಳಾಲದ ಮೊಹಮ್ಮದ್ ನೌಷದ್, ಕಸಬಾ ಬೆಂಗ್ರೆಯ ಇಮ್ರಾನ್ ಹಾಗೂ ಬಂಟ್ವಾಳದ ನಿಸಾರ್ ಅಹಮ್ಮದ್ ಬಂಧನ ಮಾಡಿದ ಪೊಲೀಸರು.

ಈ ಕೃತ್ಯಕ್ಕೆ ಬಳಸಿದ 10 ಲಕ್ಷ₹ ಮೌಲ್ಯದ ನೀಲಿ ಬಣ್ಣದ ಮಾರುತಿ FRONX ಕಾರು ವಶಕ್ಕೆ ಪಡೆಯುವುದರ ಜೊತೆಗೆ 5 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡ ಪೊಲೀಸರು.

ಎನ್.ಡಿ.ಪಿ.ಎಸ್. ಕಾಯ್ದೆ ಜೊತೆಗೆ 3(5) ಬಿ.ಎನ್.ಎಸ್. ರಂತೆ ಪ್ರಕರಣ ದಾಖಲಾಗಿದೆ.

Author