ಶಿವಮೊಗ್ಗ ನಗರದಲ್ಲಿ ಯಾರೇ ಅಸಹಾಯಕರು, ನಿರ್ಗತಿಕರು, ಯಾವದೇ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಾಗಿರಲಿ, ಯಾವದೇ ಸಂಘ ಸಂಸ್ಥೆ ಇರಲಿ, ಕ್ರಿಕೆಟ್ ಪಂದ್ಯಾವಳಿ ನಡೆಸುವುದಾಗಲಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವಿರಲಿ ಯಾರೇ ಏನೇ ಸಹಾಯಹಸ್ತ ಕೇಳಿದರೆ ಕೂಡ ಮರು ಮಾತನಾಡದೇ ಸಹಾಯ ಹಸ್ತ ಚಾಚುವ ಏಕೈಕ ವ್ಯಕ್ತಿ ಎಂದರೆ ಅವರೇ ಶಿವಮೊಗ್ಗ ನಗರದ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಆಗಿದ್ದಾರೆ.
ಇಂದಿನ ಪರಿಸ್ಥಿತಿಯಲ್ಲಿ ಯಾರು ಯಾರ ಸಹಾಯಕ್ಕೂ ಆಗಮಿಸದಂತಹ ಸಂದರ್ಭದಲ್ಲಿ ಇವರ ಮಾನವೀಯ ಸೇವೆ ಮಾಡುವ ಮನಸ್ಸು ತುಂಬಾ ದೊಡ್ಡದಾಗಿದೆ. ಸಮಾಜಕ್ಕೆ ಇಂತಹ ವ್ಯಕ್ತಿಗಳ ಅವಶ್ಯಕತೆ ಹೆಚ್ಚಾಗಿದೆ.ಶ್ರೀಕಾಂತ್ ಅವರ ಬಗ್ಗೆ ಎಷ್ಟು ಹೇಳಿದರು ಪದಗಳಲ್ಲಿ ಸಾಲಲ್ಲ ಅಷ್ಟು ವಿಶಾಲ ಹೃದಯವಂತಿಕೆ ಇರುವ ವ್ಯಕ್ತಿ ಆಗಿದ್ದಾರೆ ಎಂದರೆ ತಪ್ಪಾಗಲಾರದು.
ಇಂದು ಶಿವಮೊಗ್ಗ ನಗರದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಲನಚಿತ್ರ ನಿರ್ದೇಶಕ ಸಂಗೀತ ಸಾಗರ್ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಈ ವೇಳೆ ಆಸ್ಪತ್ರೆಗೆ ಹಣ ಕಟ್ಟಲು ಆಗದೆ ಚಿತ್ರತಂಡ ಹಾಗೂ ಕುಟುಂಬದವರು ಪರದಾಟ ನಡೆಸುತ್ತಿದ್ದರು ಇದೆ ವೇಳೆ ಪತ್ರಕರ್ತ ರಾಜೇಶ್ ಅವರು ನಿರ್ಮಾಪಕ ಸಂಘದ ಉಮೇಶ್ ಬಣಕಾರ್ ಅವರಿಗೆ ಮಾಹಿತಿ ತಿಳಿಸುತ್ತಿದ್ದಂತೆಉಮೇಶ್ ಬಣಕಾರ್ ಅವರು ಎಂ. ಶ್ರೀಕಾಂತ್ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಅದರಂತೆ ತಕ್ಷಣ ಎಂ ಶ್ರೀಕಾಂತ್ ಅವರು ಒಂದೇ ಕರೆಗೆ ಯಾವುದೇ ಪ್ರಶ್ನೆ ಮಾಡದೇ ಕೇವಲ 10 ನಿಮಿಷದೊಳಗೆ 30,000₹ ಹಣ ಮ್ಯಾಕ್ಸ್ ಆಸ್ಪತ್ರೆಗೆ ಪಾವತಿ ಮಾಡಿದ್ದಾರೆ.
ಈ ಮೂಲಕ ಆಸ್ಪತ್ರೆಯ ಬಿಲ್ ಪಾವತಿ ಮಾಡದೆ ಆಸ್ಪತ್ರೆಯಲ್ಲಿ ಉಳಿದಿದ್ದ ನಿರ್ದೇಶಕ ಸಂಗೀತ ಸಾಗರ್ ಮೃತ ದೇಹ ಕುಟುಂಬಸ್ಥರಿಗೆ ಸಿಗುವಲ್ಲಿ ನೆರವಾಗಿದ್ದಾರೆ.
ಎಂ ಶ್ರೀಕಾಂತ್ ಪ್ರಸ್ತುತ ರಾಜಕೀಯವಾಗಿ ಶಿವಮೊಗ್ಗ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ರಾಜಕೀಯವಾಗಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದಾರೆ. ಇಂದು ಶ್ರೀಕಾಂತ್ ಅವರ ನೀಡಿದ ಸಹಾಯಹಸ್ತಕ್ಕೆ ಪಾತ್ರಧಾರಿ ಚಲನಚಿತ್ರದ ತಂಡದವರಾದ ಡೇವಿಡ್, ಕೃಷ್ಣ ನೀಲಿ, ಮಮತಾ ಶ್ರೀನಿವಾಸ್, ನಿರ್ಮಾಪಕ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಪತ್ರಕರ್ತ ರಾಜೇಶ್ ಮೊದಲಾದವರು ಮಾನವೀಯ ಗುಣಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಅದೇ ರೀತಿ ಎಂ. ಶ್ರೀಕಾಂತ್ ಅವರ ರಾಜಕೀಯ ಬೆಳವಣಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತುಂಗಕ್ಕೆ ಏರುವಲ್ಲಿ ಯಶಸ್ವಿಯಾಗಲಿ ಹಲವರ ಸಂಕಷ್ಟಕ್ಕೆ ಇವರ ಸೇವೆ ಓದುಗುವಂತಾಗಲಿ, ಜನಸಾಮಾನ್ಯರ ಆಶಯದಂತೆ ಮುಂದಿನ ಚುನಾವಣೆಯಲ್ಲಿ ಎಂ ಶ್ರೀಕಾಂತ್ ರವರು ಎಂ ಎಲ್ ಎ ಆಗಬೇಕು ಜನಸಾಮಾನ್ಯರ ಸೇವೆ ಮಾಡಬೇಕು ಎಂಬ ಆಶಯ ಈಡೇರುವಂತೆ ಆಗಲಿ ಎಂಬುದು ಬಹು ಜನರ ಅಪೇಕ್ಷೆ ಆಗಿದೆ.



