ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಂಬಲಾಗದ ಪವಾಡ ನಡೆದಿದೆ. ಇಲ್ಲಿ ನಡೆದ ಐಪಿಎಲ್ 2026ರ 35ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 265 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ರನ್ ಚೇಸ್ ಎಂಬ ದಾಖಲೆಗೆ ಪಾತ್ರವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 264 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಈ ಗುರಿಯನ್ನು ಪಂಜಾಬ್ ಕಿಂಗ್ಸ್ ತಲುಪಲು ಆಗುವುದಿಲ್ಲ ಎಂದೇ ಬಹುತೇಕ ಮಂದಿಯ ಲೆಕ್ಕಾಚಾರವಾಗಿತ್ತು.
ಆದರೆ ಇದು ಲಕ್ಕಾಚಾರ ಉಲ್ಟಾ ಹೊಡೆದಿದ್ದು, ಪ್ರೀತಿ ಝಿಂಟಾ ಮಾಲೀಕತ್ವದ ಪಿಬಿಕೆಎಸ್ 18.5 ಓವರ್ಗಳಿಗೆ ಈ ಟಾರ್ಗೆಟ್ ತಲುಪಿ ಯಾರೂ ಊಹಿಸಲಾಗದ ಸಾಧನೆ ಮಾಡಿದೆ.
ಡೆಲ್ಲಿ ಪರ ಮಿಂಚಿದ ಕೆ.ಎಲ್.ರಾಹುಲ್
ಯಾರೂ ಊಹಿಸದ ರೀತಿಯಲ್ಲಿ ಬ್ಯಾಟ್ ಬೀಸಿದ ಪಂಜಾಬ್ ಕಿಂಗ್ಸ್, ಡೆಲ್ಲಿ ನೀಡಿದ್ದ 265 ರನ್ಗಳ ಗುರಿಯನ್ನು ತಲುಪಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ. ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 264 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು.
ಡೆಲ್ಲಿ ಪರ ಕೆ.ಎಲ್.ರಾಹುಲ್ ಕೇವಲ 67 ಎಸೆತಗಳಲ್ಲಿ 16 ಬೌಂಡರಿ, 9 ಸಿಕ್ಸರ್ಳ ಸಹಿತ ಅಜೇಯ 152 ರನ್ ಚಚ್ಚಿದರು. ಈ ರನ್ ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬ್ಯಾಟರ್ ಒಬ್ಬರು ದಾಖಲಿಸಿದ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ.
ರಾಹುಲ್, ನಿತೀಶ್ ರಾಣಾ ಹೋರಾಟ ವ್ಯರ್ಥ ಕೆ.ಎಲ್.ರಾಹುಲ್ ಕೇವಲ 67 ಎಸೆತಗಳಲ್ಲಿ 16 ಬೌಂಡರಿ, 9 ಸಿಕ್ಸರ್ಳ ಸಹಿತ ಅಜೇಯ 152 ರನ್ ಚಚ್ಚಿದರೆ, ಇವರಿಗೆ ಸಾಥ್ ನೀಡಿದ ನಿತೀಶ್ ರಾಣಾ ಕೇಲವಲ 44 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಸಹಿತ 91 ರನ್ ಸಿಡಿಸಿದರು. ಈ ಜೋಡಿಯು ಎರಡನೇ ವಿಕೆಟ್ಗೆ ಕೇವಲ 95 ಎಸೆತಗಳಲ್ಲಿ 220 ರನ್ಗಳ ಉತ್ತಮ ಜೊತೆಯಾಟವಾಡಿತು.
ಆದರೆ, ಕೆ.ಎಲ್. ರಾಹುಲ್ ಅವರ ಐತಿಹಾಸಿಕ ರನ್ಗಳ ಹೊರತಾಗಿಯೂ, ಪಂಜಾಬ್ ಕಿಂಗ್ಸ್ ತಂಡವು ದಾಖಲೆಯ ರನ್ ಚೇಸ್ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.
ಪಂಜಾಬ್ ಕಿಂಗ್ಸ್ ಬ್ಯಾಟರ್ಗಳ ಸ್ಫೋಟಕ ಪ್ರದರ್ಶನ
ಪಂಜಾಬ್ ಕಿಂಗ್ಸ್ ಪರ ನಾಯಕ ಶ್ರೇಯಸ್ ಅಯ್ಯರ್ ಕೇವಲ 36 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಸಹಿತ ಅಜೇಯ 71 ಹಾಗೂ ಪ್ರಭ್ಸಿಮ್ರಾನ್ ಸಿಂಗ್ 76(26) ರನ್ಗಳನ್ನು ಕಲೆಹಾಕುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಉಳಿದಂತೆ ಪ್ರಿಯಾಂಶ್ ಆರ್ಯ 43(17), ನೆಹಾಲ್ ವಧೇರಾ 25(15), ಕೂಪರ್ ಕೊನೊಲಿ 17(10), ಶಶಾಂಕ್ ಸಿಂಗ್ ಅಜೇಯ 19 ರನ್ಗಳ ಕೊಡುಗೆ ನೀಡಿದರು.
ಒಟ್ಟಿನಲ್ಲಿ ಹೇಳುವುದಾದರೆ, ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಈವರೆಗೆ ಕಂಡಿರದ ಅತ್ಯಂತ ರೋಚಕ ಪಂದ್ಯವೊಂದಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಸಾಕ್ಷಿಯಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 265 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ನಂಬಲಾಗದ ರೀತಿಯಲ್ಲಿ ಜಯ ಸಾಧಿಸಿ ಇತಿಹಾಸ ಬರೆದಿದೆ.

