ಶಿವಮೊಗ್ಗ | ತೋಟದ ಬಳಿ ಯುವಕನ ಶವ ಪತ್ತೆ

ಶಿವಮೊಗ್ಗ

ಶಿವಮೊಗ್ಗ, ನಗರದ ತುಂಗಾನಗರ ಸಮೀಪದ ಕಾಮತ್ ಲೇಔಟ್‌ನ ತೋಟವೊಂದರ ಬಳಿ ಯುವಕನೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಮೇಲಿನ ತುಂಗಾನಗರ ನಿವಾಸಿ ಮಂಜುನಾಥ್ (24) ಮೃತಪಟ್ಟವನು.ಪ್ರಾಥಮಿಕ ಮಾಹಿತಿಯ ಪ್ರಕಾರ, ಮಂಜುನಾಥ್ ಅಡಿಕೆ ಆರಿಸುವ ಹಾಗೂ ಮೂಟೆ ಹೊರುವ ಕೆಲಸ ಮಾಡುತ್ತಿದ್ದನು.

ವಿಪರೀತ ಕುಡಿತದ ಚಟ ಹೊಂದಿದ್ದ ಈತ, ಒಂದು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಮನೆಯಲ್ಲಿದ್ದನು. ನಿನ್ನೆ ಬೆಳಿಗ್ಗೆ ಕೆಲಸದ ನಿಮಿತ್ತ ಮನೆಯಿಂದ ಹೊರಹೋದವನು ಇಂದು ಶವವಾಗಿ ಪತ್ತೆಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಸೋಕೋ ತಂಡ ಹಾಗೂ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಘಟನೆಯ ಕುರಿತಾಗಿ ಮುಂಜುನಾಥ್​ ಅಕ್ಕ ಲಕ್ಷ್ಮೀದೇವಿ ಸುದ್ದಿಗಾರರೊಂದಿಗೆ ಮಾತನಾಡಿ ನನ್ನ ತಮ್ಮನ ಸಾವಿಗೆ ಆತನ ಗೆಳೆಯ ಸಂತೋಷ್​ ಕಾರಣ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಮಂಜುನಾಥ್ ಬಳಿ ಸುಮಾರು 20 ರಿಂದ 30 ಸಾವಿರ ಹಣವಿದ್ದು, ಅದನ್ನು ಖರ್ಚು ಮಾಡಿಸುವ ಉದ್ದೇಶದಿಂದ ಆತನ ಗೆಳೆಯ ಸಂತೋಷ್ ನಿನ್ನೆ ಬೆಳಿಗ್ಗೆ ಮನೆಗೆ ಬಂದು ಆತನನ್ನು ಕರೆದುಕೊಂಡು ಹೋಗಿದ್ದನು ಎಂದು ಅವರು ತಿಳಿಸಿದ್ದಾರೆ.

ಮಂಜುನಾಥ್ ಬಳಿ ಸುಮಾರು 20 ರಿಂದ 30 ಸಾವಿರ ಹಣವಿದ್ದು, ಅದನ್ನು ಖರ್ಚು ಮಾಡಿಸುವ ಉದ್ದೇಶದಿಂದ ಆತನ ಗೆಳೆಯ ಸಂತೋಷ್ ನಿನ್ನೆ ಬೆಳಿಗ್ಗೆ ಮನೆಗೆ ಬಂದು ಆತನನ್ನು ಕರೆದುಕೊಂಡು ಹೋಗಿದ್ದನು ಎಂದು ಅವರು ತಿಳಿಸಿದ್ದಾರೆ.

ಸದ್ಯ ಆರೋಪಕ್ಕೊಳಗಾದ ಸ್ನೇಹಿತ ಸಂತೋಷ್ ನಾಪತ್ತೆಯಾಗಿದ್ದು, ಆತನೇ ತನ್ನ ತಮ್ಮನ ಸಾವಿಗೆ ಕಾರಣ ಎಂದು ಲಕ್ಷ್ಮೀದೇವಿ ಅನುಮಾನ ವ್ಯಕ್ತಪಡಿಸಿದ್ದಾರೆ.

ತುಂಗಾನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಗೆಳೆಯನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Author