ಶಿವಮೊಗ್ಗ ನಗರದಲ್ಲಿ ಮಹಿಳೆ ಕಾರು ಚಲಾಯಿಸುವಾಗ ತೊಂದರೆ ನೀಡಿದ ಆರೋಪದ ಮೇಲೆ ಪೂರ್ವ ಸಂಚಾರಿ ಪೊಲೀಸರು ಎರಡು ಆಟೋ ಚಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಇದೊಂದು ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಒಳ್ಳೆಯ ಕೆಲಸ ಮಾಡಿದ್ದಾರೆ ಹಾಗೆಯೇ,
ಮತ್ತೊಂದು ವಿಚಾರ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆಗೆ ಗಮನಿಸಬೇಕಾದ ವಿಷಯವೆಂದರೆ ,
ಆಟೋ ಮೀಟರ್ ಕಡ್ಡಾಯವಾಗಿ ಬಳಸಬೇಕು ಎಂಬುದೇನೋ ನಗರದಲ್ಲಿ ಜಾರಿಯಲ್ಲಿದೆ ಆದರೆ ಯಾವ ಆಟೋಗಳು ಕಡ್ಡಾಯವಾಗಿ ಮೀಟರ್ ಅಳವಡಿಸಿ ಚಾಲನೆ ಮಾಡುತ್ತಿಲ್ಲವೆಂಬುದು ಕೂಡ ಟ್ರಾಫಿಕ್ ಪೊಲೀಸ್ ಇಲಾಖೆಯ ಗಮನಕ್ಕೆ ತಿಳಿದಿರುವುದೇ ಆಗಿದೆ. ಹಾಗೂ ಎಷ್ಟೋ ಆಟೋಗಳ ಬಳಿ ಸರಿಯಾದ ದಾಖಲೆಗಳೆ ಇಲ್ಲದಾಗಿದೆ.ಆದರೆ ಅದೇನೋ ಗೊತ್ತಿಲ್ಲ ಟ್ರಾಫಿಕ್ ಪೊಲೀಸ್ ಇಲಾಖೆ ಮಾತ್ರ ದಾಖಲೆ ಪರಿಶೀಲನೆಗೆ ಮುಂದಾಗುತ್ತಿಲ್ಲ ಅದು ಯಾವ ಒತ್ತಡ ಇದೆಯೋ ಅವರೇ ತಿಳಿಸಬೇಕಾಗಿದೆ.
ಶಿವಮೊಗ್ಗದಲ್ಲಿರುವ ಆಸ್ಪತ್ರೆಗಳ ಬಳಿ ಇರುವ ಆಟೋ ಸ್ಟಾಂಡ್ ಗಳು ರೋಗಿಗಳು ಆಸ್ಪತ್ರೆಯಲ್ಲಿ ಒಂದು ಕಡೆ ಕಷ್ಟಪಟ್ಟು ಜೀವ ಉಳಿಸಿಕೊಳ್ಳಲು ಅರೋಗ್ಯ ಸರಿಪಡಿಸಿಕೊಳ್ಳಲು ಹಣ ವ್ಯಯ ಮಾಡಿದ್ದು ಅಲ್ಲದೆ ಆಚೆ ಬಂದಂತ ರೋಗಿಗಳು ಹೈರಾಣಾಗಿರುತ್ತಾರೆ.
ಇದರ ಜೊತೆಗೆ ಹೇಗೋ ಮನೆಗೆ ಇಲ್ಲವೋ ಮತ್ತೊಂದು ಸ್ಕ್ಯಾನಿಂಗ್, ಎಕ್ಸ್ ರೆ ಮತ್ತೊಂದಕ್ಕೆ ಅಂತ ತೆರಳುವವರಿರುತ್ತಾರೆ, ಹಾಗೆಯೇ ವಯೋ ವೃದ್ಧರು, ಎಳೆ ಮಕ್ಕಳು, ಹಸುಗೂಸು ಇರುತ್ತಾರೆ.
ಈ ಸಂದರ್ಭವನ್ನೇ ದುರ್ಬಳಕೆ ಮಾಡಿಕೊಳ್ಳುವ ಆಟೋ ಚಾಲಕರಿಗೆ ಬೇರೆ ಎಲ್ಲದಕ್ಕೂ ತಾವುಗಳು ಬಡವರು ಎಂಬ ಹಣೆಪಟ್ಟಿ ಹೇಳಿಕೊಂಡು ಎಲ್ಲದಕ್ಕೂ ನಮ್ಮ ಮೇಲೆ ಟ್ರಾಫಿಕ್ ಪೊಲೀಸರಿಂದ ದಬ್ಬಾಳಿಕೆ ಅನ್ನುತ್ತಾರೆ.
ಆದರೆ ಈ ಕಾಯಿಲೆ ಕಸಾಲೆಯಿಂದ ಬಳಲುತ್ತಿರುವರಿಂದ ಬೇಕಾ ಬಿಟ್ಟಿ ಹಣ ಪೀಕಬಾರದೆಂದು ಮಾತ್ರ ಆಟೋ ಚಾಲಕರು ಹಾಗೂ ಮಾಲೀಕರಿಗೆ ಅನಿಸುವುದಿಲ್ಲ.
ಒಂದು ನಮ್ಮ ಮಾಧ್ಯಮ ಕಣ್ಣಾರೆ ಕಂಡ ಘಟನೆ ಸಂಬಂಧ ತಿಳಿಸುವುದೇನೆಂದರೆ ಕೆಲವು ದಿನಗಳ ಹಿಂದೆ ನಗರದ ನಂಜಪ್ಪ ಆಸ್ಪತ್ರೆಯಿಂದ ತಾಯಿ ಹಾಗೂ ಮಗಳು ಒಂದು ಹಸುಗೂಸನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಆಚೆ ಬಂದರು ಇದೆ ವೇಳೆ ಒಬ್ಬ ಆಟೋ ಚಾಲಕ ಬಂದು ಬನ್ನಿ ಅಂತ ಅಷ್ಟೊ ಇಷ್ಟೋ ಬಾಡಿಗೆ ಮಾತಾಡಿಕೊಂಡು ಇನ್ನೇನು ಆಟೋ ಹತ್ತುವಷ್ಟರಲ್ಲಿ ಬಂದರಪ್ಪ ನೋಡಿ ಆಟೋ ಸ್ಟಾಂಡ್ ನ. ಮಾನವೀಯತೆ ಇರುವ ಆಟೋ ಚಾಲಕರು ಬಂದು ಮಾಡಿದ್ದೂ ಏನು ಅಂತೀರಾ?
ಒಂದು ಕಡೆ ಹಸುಗುಸು ಉರಿ ಬಿಸಲು ಮಧ್ಯಾಹ್ನ 12:50 ರ ಸಮಯ ತಗೊ ಬಾಯಿಗೆ ಬಂದ ರೇಟ್ ಕೇಳಿದರು, ಈ ಕಡೆ ಬಂದಂತ ಆಟೋಗು ಹತ್ತುವ ಹಾಗಿಲ್ಲ! ಬಂದಂತ ಆಟೋ ಚಾಲಕನಿಗೆ ಅವಾಜ್ ನಮ್ಮ ಸ್ಟಾಂಡ್ ಬಳಿ ನೀನು ಯಾರು ಪ್ರಯಾಣಿಕರನ್ನು ಬಾಡಿಗೆ ಮಾಡಲು ಅಂತ. ಜೊತೆಗೆ ಬಾಯಿಗೆ ಬಂದ ಬಾಡಿಗೆ ತಾಯಿ ಮಗಳು ಹಸುಗೂಸು ಎನ್ನುವುದು ಲೆಕ್ಕಿಸದೆ.
ಈ ಕಡೆ ಇವರುಗಳ ದಬ್ಬಾಳಿಕೆ ಕೊನೆಗೆ ನಿಮ್ಮ ಆಟೋ ಸಹವಾಸನೆ ಬೇಡ ಅಂತ ಮಹಿಳೆ, ಹಾಗೂ ತಾಯಿ ಹಸುಗೂಸನ್ನ ತಲೆಮೇಲೆ ಸೆರಗು ಹಾಕಿಕೊಂಡು ಮುಂದೆ ಬಿಸಲಲ್ಲಿ ನಡೆದರು.
ಇಲ್ಲಿ ಕಾಡುವ ಪ್ರಶ್ನೆ ಎಂದರೆ ಸಾರ್ವಜನಿಕರಿಗೆ ಆಯ್ಕೆ ಇಲ್ಲವೇ? ತಮಗೆ ಬೇಕಾದ ದರದಲ್ಲಿ ಪ್ರಯಾಣಿಸಲು ಅದಕ್ಕೂ ಕೂಡ ಆಟೋ ಸ್ಟಾಂಡ್ ಇದ್ದರೆ ಅವರ ದಬ್ಬಾಳಿಕೆ ಮುಂದೆ ತಲೆಬಾಗಬೇಕೆ?
ಇನ್ನು ಸರ್ಜಿ ಮಕ್ಕಳ ಆಸ್ಪತ್ರೆ ಬಳಿ ಅಂತೂ ಬಿಡಿ, ದಿನನಿತ್ಯ ರೋಗಿಗಳು ನಾವು ಎಂತ ನಗರದಲ್ಲಿ ಬದುಕುತ್ತಿದ್ದೇವೆ ಎಂತ ಟ್ರಾಫಿಕ್ ಪೊಲೀಸ್ ಇಲಾಖೆ ಇದೆ ಅಂತ ನಮ್ಮ ಹಣೆಬರಹ ಅಂತ ಕೇಳಿದಷ್ಟು ದರದಲ್ಲಿ ಪ್ರಯಾಣಿಸುತ್ತಿದ್ದಾರೆ.
ಈ ರೀತಿಯ ಘಟನೆ ಬಗ್ಗೆ ಜನಸಾಮಾನ್ಯರು ಅವರ ಕೆಲಸ ಅನಾರೋಗ್ಯ ಸಮಯ ಬದಿಗೊತ್ತಿ ಯಾರು ಬಂದು ಪೊಲೀಸ್ ಠಾಣೆಗೆ ದೂರು ನೀಡಲು ಆಗುವುದಿಲ್ಲ.
ಈ ಸಂಬಂಧ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆ ಕಣ್ಣಿಡಬೇಕಾಗಿದೆ.ನಮ್ಮ ಆಟೋ ಸ್ಟಾಂಡ್ ಇದೆ ಹಲವಾರು ಗಂಟೆಗಳಿಂದ ಕಾಯುತ್ತಿದ್ದೇವೆ ಅಂದ ಮಾತ್ರಕ್ಕೆ ಇವರುಗಳ ಹುಚ್ಚಾಟಕ್ಕೆ ಟ್ರಾಫಿಕ್ ಪೊಲೀಸ್ ಇಲಾಖೆ ಬ್ರೇಕ್ ಹಾಕಬೇಕಿದೆ.
ನಗರದಲ್ಲಿ ಜನಸಾಮಾನ್ಯರು ತಮಗೆ ಅನುಕೂಲ ಆಗುವಂತೆ ಆಟೋಗಳಲ್ಲಿ ಹೋಗುವಂತೆ ನ್ಯಾಯಯುತ ವ್ಯವಸ್ಥೆ ಮಾಡಿಕೊಡಬೇಕಾಗಿದೆ.
ಈ ಆಟೋ ಚಾಲಕರು ಸಂಘ ರಾಜಕೀಯ ರಾಜಕಾರಣಿಗಳ ಬೆಂಬಲವಿದೆ ಅಂತ ತಮಗೆ ಇಷ್ಟಬಂದ ಹಾಗೆ ಪ್ರಯಾಣಿಕರಿಗೆ ಮನಸೋ ಇಚ್ಛೆ ಬಾಡಿಗೆ ಕೇಳುವುದರ ವಿರುದ್ಧ ಟ್ರಾಫಿಕ್ ಪೊಲೀಸ್ ಇಲಾಖೆ ಸಮರ ಸಾರಬೇಕಿದೆ.
ಶಿವಮೊಗ್ಗದಲ್ಲಿ ಅತ್ಯುತ್ತಮ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಇದ್ದಾರೆ.ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಬೆಂಬಲಿಸುವ ಮಾಧ್ಯಮಗಳು ಇದ್ದಾವೆ. ಪ್ರಜ್ಞಾವಂತ ನಾಗರಿಕರ ಬೆಂಬಲವಿದೆ ಒಳ್ಳೆಯ ಕೆಲಸವನ್ನ ಮಾಡುವ ಮೂಲಕ ಜನಸಾಮಾನ್ಯರಿಗೆ ನೆರವಾಗಿ ನಿಲ್ಲಬೇಕಾಗಿರುವುದು ಮಾತ್ರ ಟ್ರಾಫಿಕ್ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾಡಬೇಕಾಗಿದೆ.
ಕೊನೆಯದಾಗಿ ನಮ್ಮ ಮಾಧ್ಯಮದ ಉದ್ದೇಶವೇನಂದರೆ
ಇದೆಲ್ಲ ದಿನನಿತ್ಯ ನಗರದಲ್ಲಿ ನಡೆಯುತ್ತಿರುವ ವಿಚಾರ ನಮ್ಮ ಮಾಧ್ಯಮ ಮುಖೇಣ ತಿಳಿಸುವುದು ಇಷ್ಟೇ ವಿಚಾರ,ನೀವು ಆಟೋ ಸ್ಟಾಂಡ್ ನಲ್ಲೆ ಬಾಡಿಗೆ ಮಾಡಿ ಆದರೆ ಮಾನವೀಯತೆ ಮರೆಯಬೇಡಿ. ರಸ್ತೆಯಲ್ಲಿ ಬರುವ ಆಟೋಗಿಂತ ನಾವು ಮನುಷ್ಯತ್ವ ಮೆರೆಯುತ್ತೇವೆ ಎಂಬುದು ತೋರಿಸಿ.
ಕನಿಷ್ಠಪಕ್ಷ ನಗರದ ಬಡ ರೋಗಿಗಳು ಬರುವ ಮೆಗ್ಗಾನ್ ಸರ್ಕಾರಿ ಬೋಧನಾ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಅವರ ಪರಿಸ್ಥಿತಿ ಎಷ್ಟು ಶೋಚನಿಯವಾಗಿರಲಿದೆ ಅಂತಃ ರೋಗಿಗಳಿಂದ ಕೂಡ ಹಣ ಪೀಕಿ ನೀವು ಆಟೋ ಅಂದರೆ ಮನೆ ಬಾಗಲಿಗೆ ಜನಸಾಮಾನ್ಯರಿಗೆ ನೆರವಾಗುವ ಸ್ನೇಹ ಜೀವಿಗಳು ಆಗಲು ಹೇಗೆ ಸಾಧ್ಯ..? ಸಾಧ್ಯವಾದರೆ ಆತ್ಮವಿಮರ್ಶೆ ಮಾಡಿಕೊಳ್ಳಿ.
ಹಾಗೂ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆ ಇದಕ್ಕೆ ಏನು ಕಡಿವಾಣ ಹಾಕಲಿದೆ ಎಂಬುದು ಈಗ ಪ್ರಸ್ತುತ ಪ್ರಶ್ನೆ?
ಮತ್ತು ನಗರದಲ್ಲಿ ಎಲ್ಲಿ ಆದರೂ ಸಹ ಪ್ರಯಾಣಿಕರು ತಮಗೆ ಬೇಕಾದ ಆಟೋದಲ್ಲಿ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಬೇಕಾದ ಜರೂರತ್ತಿದೆ. ಆಟೋ ಸ್ಟಾಂಡ್ ನಲ್ಲಿ ದುಪ್ಪಟ್ಟು ಹಣ ಕೇಳುವುದು ಜಗಳಕ್ಕೆ ಇಳಿಯುವುದು ಹಾಗೂ ಬೇರೆ ಆಟೋಗಳಿಗೆ ಪ್ರಯಾಣಿಕರು ತೆರಳದಂತೆ ತಡೆಯುವುದು ಇದೆಲ್ಲವನ್ನು ಶಿವಮೊಗ್ಗ ಸಂಚಾರಿ ಪೊಲೀಸ್ ಇಲಾಖೆ ತಡೆಗಟ್ಟಬೇಕಿದೆ. ಇದು ನಮ್ಮ ವಿಚಾರವಲ್ಲ ಶಿವಮೊಗ್ಗದ ಜನತೆಯ ಅಭಿಪ್ರಾಯವಾಗಿದೆ.


