ತೆರಿಗೆ ಕಟ್ಟದ ಕಾರು ಮಾರಾಟ ಮಾಡಿ ವಂಚನೆ ; ಪ್ರಕರಣ ದಾಖಲು

ಶಿವಮೊಗ್ಗ

ಶಿವಮೊಗ್ಗ, ಕಾರೊಂದರ ಹಳೇ ತೆರಿಗೆ ಬಾಕಿಯನ್ನು ಪಾವತಿಸದೆ ಮಾರಾಟ ಮಾಡಿ ಗ್ರಾಹಕನಿಗೆ ವಂಚಿಸಿದ ಘಟನೆ ನಗರದಲ್ಲಿ ವರದಿಯಾಗಿದೆ.

ಶಿವಮೊಗ್ಗದ ನಿವಾಸಿ ಸೈಯದ್ ಅಫ್ರೋಜ್ ಎಂಬುವವರು ಈ ಸಂಬಂಧ ದೂರು ನೀಡಿದ್ದಾರೆ. ಅಫ್ರೋಜ್ ಅವರು ಟೊಯೋಟ ಕಾರು ಖರೀದಿಸಿದ್ದರು.

ವಾಹನ ವರ್ಗಾವಣೆಗಾಗಿ ಆರ್‌ಟಿಒ ಕಚೇರಿಗೆ ಹೋದಾಗ, ಕಾರಿನ ಮೇಲೆ ಹಳೇ ಟ್ಯಾಕ್ಸ್ ಬಾಕಿ ಇರುವುದು ಮತ್ತು ವಾಹನವನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಮಾರಾಟಗಾರರನ್ನು ಕೇಳಿದಾಗ, ಅವರು ತೆರಿಗೆ ಹಣ ಕಟ್ಟುವುದಾಗಿ ನಂಬಿಸಿ ಕಾಲಹರಣ ಮಾಡುತ್ತಾ ಬಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತೆರಿಗೆ ಪಾವತಿಸದ ಕಾರಣ ವಾಹನದ ಎಫ್‌ಸಿ ಕೂಡ ಮುಗಿದು ಹೋಗಿದೆ. ಇದರಿಂದ ಸೈಯದ್ ಅಫ್ರೋಜ್ ಸಂಕಷ್ಟಕ್ಕೀಡಾಗಿದ್ದರು.

ಕಾರು ಮಾರಾಟ ಮಾಡಿದವರು ಸಮಸ್ಯೆ ಬಗೆಹರಿಸುವುದಾಗಿ ಕಾಲಹರಣ ಮಾಡುತ್ತಿದ್ದರಿಂದ ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author