ಶಿವಮೊಗ್ಗ | ಜಿಲ್ಲಾಧಿಕಾರಿ ಆದೇಶಕ್ಕೆ ಡೋಂಟ್ ಕೇರ್ ; ನಾವು ನಗರದಲ್ಲೇ ಸಂಚರಿಸುತ್ತೇವೆ KSRTC Bus

ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ ದಿನೇ ನಿತ್ಯ ಟ್ರಾಫಿಕ್ ಪೊಲೀಸರಿಗೆ ಹೊಸದೊಂದು ಸಮಸ್ಯೆ ಪ್ರಾರಂಭವಾಗಿದೆ. ಅದೇನಂದರೆ ಮುಖ್ಯವಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಅವರು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೂ ಭಾರಿ ವಾಹನ ನಗರದೊಳಗೆ ಸಂಚಾರ ನಿಷೇಧಿಸಿದ್ದಾರೆ.

ಇದರಿಂದ ನಗರದೊಳಗೆ ಲಾರಿ ಹಾಗೂ ಹೊರ ಜಿಲ್ಲೆಗೆ ತೆರಳುವ ಹಾಗೂ ಬರುವ ಲಾರಿ, ಬಸ್ ಗಳು (Heavy Vehicles) ನಗರದೊಳಗೆ ಸಂಚಾರ ಮಾಡುವ ಹಾಗಿಲ್ಲ, ಈ ಸಂಬಂಧ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಹಾಗೂ ಸಿಬ್ಬಂದಿಗಳು ನಗರದೊಳಗೆ ಟ್ರಾಫಿಕ್ ಒತ್ತಡ ತಿಳಿಗೊಳಿಸಲು, ಸುಗಮ ಸಂಚಾರ ಮಾಡಿಕೊಡಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಕೂಡ ಟ್ರಾಫಿಕ್ ಪೊಲೀಸರು ಒಂದು ಹಂತಕ್ಕೆ ಯಶಸ್ವಿ ಕೂಡ ಆಗಿದ್ದಾರೆ. ಇದರ ಹಿಂದೆ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರ ಅವಿರತ ಶ್ರಮ ಕೂಡ ಇದೆ.

ಇದರಿಂದ ಸಾರ್ವಜನಿಕರಿಂದ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ ಗಿಜಿಗುಡುವ ಟ್ರಾಫಿಕ್ ಸಮಸ್ಯೆಗೆ ಒಂದು ಹಂತಕ್ಕೆ ಸಾರ್ವಜನಿಕರಿಗೆ ವಾಹನ ಸವಾರರಿಗೆ ಅನುಕೂಲ ಕೂಡ ಆಗಿದೆ.

ಆದರೆ ಶಿವಮೊಗ್ಗದಿಂದ ಚಿತ್ರದುರ್ಗ ಹಾಗೂ ಹರಿಹರ, ಹೊಸಪೇಟೆ ಅಥವಾ ದಾವಣಗೆರೆ ಹೋಗುವ KSRTC ಬಸ್ ನವರು ಮಾತ್ರ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶಕ್ಕೆ ನಯಾ ಪೈಸೆ ಬೆಲೆ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ.

ಈ ಸಂಬಂಧ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆಗೆ ದಿನ ನಿತ್ಯ ನಗರೊದೊಳಗೆ ಬರುವ KSRTC ಬಸ್ ಗಳನ್ನು ಪುನಃ ನಗರದೊಳಗೆ ಬರಬೇಡಿ ಎಂದು ಕಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇರುವ ಕೆಲಸ ಜೊತೆಗೆ ಮತ್ತೊಂದು ಈ ಕೆಲಸವಾಗಿದೆ.

ಬಿಸಿಲೋ ಮಳೆಯೋ ಚಳಿಯೋ ಟ್ರಾಫಿಕ್ ಪೊಲೀಸರು ನಗರದೊಳಗೆ ಕೆಲಸ ಮಾಡುತ್ತಾರೆ.

ಇದರೊಟ್ಟಿಗೆ KSRTC ಬಸ್ ಆಚೆ ಹೋಗಿ ನಗರದೊಳಗೆ ಬರಬೇಡಿ ಎನ್ನುವ ಮತ್ತೊಂದು ಕೆಲಸ ಹಾಗೂ ಮಧ್ಯಾಹ್ನ ವೇಳೆಯಲ್ಲಿ ಹೆಚ್ಚಾಗಿ ಮತ್ತು ಟ್ರಾಫಿಕ್ ಪೊಲೀಸರು ಅಪ್ಪಿತಪ್ಪಿ ಸುಮ್ಮನೆ ಇದ್ದಾರೆ ಅಂದರೆ, ಊಟಕ್ಕೆ ತೆರಳಿದ್ದಾರೆ ಅಂದರೆ ಸಾಕು ನಗರದೊಳಗೆ KSRTC ಬಸ್ ಅವರು ಬಂದೆ ಬಿಡುತ್ತಾರೆ,

ಇನ್ನ ತೀರ ಇತ್ತೀಚಿಗೆ ಪಶ್ಚಿಮ ಸಂಚಾರಿ ಠಾಣೆಯ ಪಿ ಎಸ್ ಐ ಸ್ವಪ್ನ ಅವರು ಸಹ ನಗರದ ಗೋಪಿ ವೃತ್ತದಲ್ಲಿ KSRTC ಬಸ್ ಗಳನ್ನು ತಡೆದು KSRTC ಅಧಿಕಾರಿಯನ್ನೇ ಸ್ಥಳಕ್ಕೆ ಕರೆಸಿ ಇದೇ ಪರಿಸ್ಥಿತಿ ಮುಂದುವರೆದರೆ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಕೆ ಕೂಡ ನೀಡಿದ್ದರು.

ಇಷ್ಟೆಲ್ಲಾ ಆದರೂ ಸಹ ಬುದ್ದಿ ಕಲಿಯದ KSRTC ಇಲಾಖೆಯವರು ಪ್ರತಿನಿತ್ಯ ಇದನ್ನೇ ಮುಂದುವರೆಸಿದ್ದಾರೆ. ನೆನ್ನೆ ದಿವಸ ಕೂಡ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರು ಮಧ್ಯಾಹ್ನ ವೇಳೆಯಲ್ಲಿ ನಗರದೊಳಗೆ ಬಂದಂತ KSRTC ಬಸ್ ಅನ್ನುವ ತಡೆದು ನಗರದೊಳಗೆ ಬರಬೇಡಿ ಎಂದು ತಿಳಿ ಹೇಳಿ ವಾಪಾಸ್ ಕಳಿಸಿದ್ದಾರೆ.

KSRTC ಅಧಿಕಾರಿಗಳು ಎಷ್ಟು ಬೇಜವಾಬ್ದಾರಿ ಆಗಿದ್ದಾರೆ ಅನ್ನುವುದಕ್ಕೆ ಇದೊಂದ್ ಉದಾಹರಣೆಯಾಗಿದೆ. ಒಂದು KSRTC ಇಲಾಖೆ ನಿಭಾಯಿಸಲು ಆಗುತ್ತಿಲ್ಲ ಈ ಅಧಿಕಾರಿಗಳಿಗೆ ಎನ್ನುವುದು ವಿಪರ್ಯಾಸ ಸಂಗತಿ ಆಗಿದಿಯೋ ಅಥವಾ ಜಡ್ಡು ಹಿಡಿದು ಕೂತಿದ್ದರೋ ಗೊತ್ತಿಲ್ಲ ಎಂಬುದು ಜನರ ಮಾತಾಗಿದೆ.

KSRTC ಅಧಿಕಾರಿಗಳೇ ನಿಮಗೆ ಶಿವಮೊಗ್ಗ ಜಿಲ್ಲಾಧಿಕಾರಿ ಅಂತ ಒಬ್ಬರು ಇದ್ದಾರೆ ಅವರು ಮಾಡುವ ಆದೇಶಕ್ಕೆ ಬೆಲೆ ಕೊಡಬೇಕು ಎಂಬ ಕನಿಷ್ಠ ಪ್ರಜ್ಞೆ ಇಲ್ಲವೇ ಎಂಬ ಪ್ರಶ್ನೆ ಈಗ ಜನರಲ್ಲಿ ಮೂಡುತ್ತಿದೆ?

ಜನಸಾಮಾನ್ಯರು, ವಾಹನ ಸವಾರರಿಗೆ ಅನುಕೂಲ ಆಗಬೇಕು ಎಂದು ಜಿಲ್ಲಾಧಿಕಾರಿ ಅವರು ನಗರದ ಸಮಗ್ರ ಚಿತ್ರಣ ತೆಗೆದುಕೊಂಡು ನಂತರ ಅಷ್ಟೇ ಅಲ್ಲವೇ ಆದೇಶ ಮಾಡುವುದು ಎಂದು ನಿಮಗೆ ತಿಳಿದಿಲ್ಲವೇ ಎಂದು ಪ್ರಶ್ನೆಗೆ ಉತ್ತರ ಕೇಳುತ್ತಿದ್ದಾರೆ ಸಾರ್ವಜನಿಕರು?

ದಿನ ನಿತ್ಯ ಟ್ರಾಫಿಕ್ ಪೊಲೀಸರೇ, KSRTC ಬಸ್ ನಗರದೊಳಗೆ ಬರಬಾರದು ಎಂದು ತಡಿಯಬೇಕೆ? ನೀವೆಲ್ಲ ಅಧಿಕಾರಿಗಳಾಗಿ ನಿಮ್ಮ ಕೆಲಸವಾದರೂ ಏನು ಎಂದು ಪ್ರಜ್ಞಾವಂತ ಜನರ ಪ್ರಶ್ನೆ?

ಟ್ರಾಫಿಕ್ ಪೊಲೀಸರಿಗೆ ಬೇರೆ ಕೆಲಸ ಇಲ್ಲವೇ ಎಂಬ ಪ್ರಶ್ನೆ?

ಪ್ರತಿನಿತ್ಯ ಟ್ರಾಫಿಕ್ ಪೊಲೀಸರು, KSRTC ಹೊರ ಜಿಲ್ಲೆಗೆ ನಗರದಿಂದ ತೆರಳುವ ಬಸ್ ಗಳನ್ನು ತಡೆಯುವದಕ್ಕೆ ಮಾತ್ರ ಟ್ರಾಫಿಕ್ ಪೊಲೀಸ್ ಇಲಾಖೆ ಇರುವುದಾ? ನಿಮ್ಮ ಜವಾಬ್ದಾರಿ ಆದರೂ ಏನು?

KSRTC ಅಧಿಕಾರಿಗಳ ಕೈಯಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲ್ಲ ಎನ್ನುವುದಾದರೆ ಪ್ರಾಮಾಣಿಕ ಅಧಿಕಾರಿಗಳನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಶಿವಮೊಗ್ಗ ನಗರದ KSRTC ಬಗ್ಗೆ ಗಮನಕ್ಕೆ ತೆಗೆದುಕೊಂಡು ಬೇರೆ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜನೆ ಮಾಡುವ ಜರೂರತ್ತಿದೆ ಎಂದು ನಗರದ ಸಾರ್ವಜನಿಕರ ಮಾತಾಗಿದೆ.

ಎಲ್ಲದಕ್ಕೂ ಸಮರ್ಥನೆ ನೀಡುವುದು, ಸಬೂಬು ನೀಡಿದ ಮಾತ್ರಕ್ಕೆ ಕೆಲಸ ಆಗುತ್ತಿದೀಯಾ ಇಲ್ಲವಾ ಎಂಬುದು ಎಲ್ಲರಿಗೂ ಕಾಣತ್ತೆ ಎನ್ನುವುದನ್ನು KSRTC ಅಧಿಕಾರಿಗಳು ಮರೆತಿದ್ದಾರಾ ಎಂಬ ಪ್ರಶ್ನೆ ಜನರನ್ನು ಕಾಡತೊಡಗಿದೆ?

ಕನಿಷ್ಠ ಪಕ್ಷ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ಕೊಡಲು ಆಗುವುದಿಲ್ಲವೆಂದರೆ ನೀವುಗಳು ಸಾರ್ವಜನಿಕರಿಗೆ ಏನು ಸೇವೆ ನೀಡುತ್ತೀರಾ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ?

ಜಿಲ್ಲಾಧಿಕಾರಿ ಆದೇಶ ಮಾಡಿರುವ ಉದ್ದೇಶ ಕೂಡ ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಆಗಲಿ ಅಂತ ಇಂತಹ ಆದೇಶವನ್ನೇ ಧಿಕ್ಕರಿಸುತ್ತಿರ ನೀವುಗಳು ಎಂದರೆ ನಿಮ್ಮ ಅಧಿಕಾರದ ದರ್ಪ ಎಷ್ಟರ ಮಟ್ಟಿಗೆ ಆಗಿರಬಹುದು ಎಂದು ಜನಸಾಮಾನ್ಯರು ಮಾತಾಡಿಕೊಳ್ಳುತ್ತಿದ್ದಾರೆ.

ಇದೆಲ್ಲದರ ಜೊತೆಗೆ ಟ್ರಾಫಿಕ್ ಪೊಲೀಸ್ ಅವರು ನಗರದ ಅಶೋಕ ವೃತ್ತದಲ್ಲಿರುವ ಬಸ್ ಸ್ಟಾಂಡ್ ನಲ್ಲೆ ನಗರದಿಂದ ಹೊರ ಹೋಗುವ KSRTC ಬಸ್ ಗಳನ್ನು ತಡೆದರೆ ಈ ಸಮಸ್ಯೆ ಉದ್ಭವವಾಗುವುದಿಲ್ಲ ಎಂಬದು ಜನಸಾಮಾನ್ಯರು ವಾಹನ ಸವಾರರ ಅಗ್ರಹವಾಗಿದೆ.

ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶಕ್ಕೂ ಡೋಂಟ್ ಕೇರ್ ಎನ್ನುವ KSRTC ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳು ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮಕ್ಕೆ ಮುಂದಾಗಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ?

Author