ಶಿವಮೊಗ್ಗ | ಹೊಟೆಲ್ ಕಾರ್ಮಿಕ ಕಾರಿನ ಒಳಗೆ ಶವವಾಗಿ ಪತ್ತೆ

ಶಿವಮೊಗ್ಗ

ಶಿವಮೊಗ್ಗ,ಸಾಗರ ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಟಿಂಕು ಶರ್ಮಾ (30),ಮೃತಪಟ್ಟ ಸ್ಥಿತಿಯಲ್ಲಿ ಹೊಂಡಾಸಿಟಿ ಕಾರಿನಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದ್ದಾನೆ.

ಕೆಫೆ ಮಾಲಿಕ ಇಮ್ರಾನ್ (30), ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾಲಿಕ ಹಾಗೂ ಕಾರ್ಮಿಕನ ನಡುವೆ ನಿನ್ನೆ ರಾತ್ರಿಯಿಂದಲೂ ಜಗಳ ನಡೆಯುತ್ತಿತ್ತು, ಬೆಳಗ್ಗೆ ಕೂಡ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಪಿ ಹಾಗೂ ಮೃತನ ನಡುವೆ ವಾಗ್ವಾದ ನಡೆದಿದೆ.

ಈ ವೇಳೆ ಮಾಲಿಕ ಇಮ್ರಾನ್ ಕೆಲಸದಾಳುವಿಗೆ ಹಲ್ಲೆ ಮಾಡಿದ್ದಾನೆ ಎಂದು ಎಸ್ಪಿ ನಿಖಿಲ್ ಪ್ರಾಥಮಿಕ ಮಾಹಿತಿ ನೀಡಿದರು.

ಆರೋಪಿ ಇಮ್ರಾನ್ ಪೋಲಿಸ್ ವಶದಲ್ಲಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

Author